ಗರ್ಭಕೋಶ ತೆಗೆಸಿಕೊಂಡ ಒಂದೇ ಜಿಲ್ಲೆಯ 800ಕ್ಕೂ ಅಧಿಕ ಮಹಿಳೆಯರು

Published : Jun 02, 2025, 05:53 PM IST
ಗರ್ಭಕೋಶ ತೆಗೆಸಿಕೊಂಡ ಒಂದೇ ಜಿಲ್ಲೆಯ 800ಕ್ಕೂ ಅಧಿಕ ಮಹಿಳೆಯರು

ಸಾರಾಂಶ

ಜಿಲ್ಲೆಯಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದು ಸಾಮಾಜಿಕ ಮತ್ತು ಆರೋಗ್ಯ ಸ್ಥಿತಿಯ ಭಯಾನಕ ವಾಸ್ತವವನ್ನು ಬಯಲು ಮಾಡಿದೆ. ಈ ಮಹಿಳೆಯರ ಮಾಹಿತಿಯನ್ನು ಮಾತೃ ಮತ್ತು ಶಿಶು ಆರೈಕೆ ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ

ಮುಂಬೈ: ಮಹಾರಾಷ್ಟ್ರದ ಬೀದ್ ಜಿಲ್ಲೆಯಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದು ಸಾಮಾಜಿಕ ಮತ್ತು ಆರೋಗ್ಯ ಸ್ಥಿತಿಯ ಭಯಾನಕ ವಾಸ್ತವವನ್ನು ಬಯಲು ಮಾಡಿದೆ. ಕಬ್ಬಿನ ಕಟಾವು ಋತುವಿನ ಆರಂಭಕ್ಕೂ ಮುನ್ನ, ಬೀದ್ ಜಿಲ್ಲೆಯಿಂದ ಸುಮಾರು 1.75 ಲಕ್ಷ ಕಾರ್ಮಿಕರು ಮಹಾರಾಷ್ಟ್ರದ ಹೊರಗೆ ಕೆಲಸಕ್ಕೆ ಹೋಗುತ್ತಾರೆ. ಇದರಲ್ಲಿ 78 ಸಾವಿರ ಮಹಿಳಾ ಕಾರ್ಮಿಕರಿದ್ದಾರೆ. ಆರ್ಥಿಕ ಅನಿವಾರ್ಯತೆಯಿಂದಾಗಿ ಈ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಇತ್ತೀಚಿನ ಸಮೀಕ್ಷೆಯೊಂದರಲ್ಲಿ, 834 ಮಹಿಳೆಯರು ಕಬ್ಬಿನ ಕಟಾವಿಗೆ ಹೋಗುವ ಮುನ್ನ ಗರ್ಭಕೋಶ ತೆಗೆದುಹಾಕುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶ ತಿಳಿದು ಬಂದಿದೆ. ಇದರಲ್ಲಿ 30 ರಿಂದ 35 ವರ್ಷ ವಯಸ್ಸಿನ 877 ಮಹಿಳೆಯರಿದ್ದಾರೆ. ಹೊಟ್ಟೆ ನೋವು, ಅತಿಯಾದ ಮುಟ್ಟಿನ ರಕ್ತಸ್ರಾವ, ಸೋಂಕು ಮುಂತಾದ ಕಾರಣಗಳಿಂದಾಗಿ ಈ ಮಹಿಳೆಯರು ಗರ್ಭಕೋಶ ತೆಗೆಸಿಕೊಂಡಿದ್ದಾರೆ ಎಂದು ದಾಖಲಾಗಿದೆ.

ಗರ್ಭಾವಸ್ಥೆಯಲ್ಲಿಯೂ ಕಟಾವು ಕೆಲಸ

ಇನ್ನೊಂದು ಆಘಾತಕಾರಿ ವಿಷಯವೆಂದರೆ, ಬೀದ್ ಜಿಲ್ಲೆಯ 1,523 ಮಹಿಳೆಯರು ಗರ್ಭಾವಸ್ಥೆಯಲ್ಲಿಯೂ ಕಬ್ಬಿನ ಕಟಾವು ಮಾಡಿದ್ದಾರೆ. ‘ಹೊಟ್ಟೆಯಲ್ಲಿ ಮಗು, ಕೈಯಲ್ಲಿ ಕೊಡಲಿ’ ಎಂಬ ಈ ಮಹಿಳೆಯರ ಪರಿಸ್ಥಿತಿ ಅವರ ಜೀವನದ ಒತ್ತಡವನ್ನು ಎತ್ತಿ ತೋರಿಸುತ್ತದೆ.

ಈ ಮಹಿಳೆಯರ ಮಾಹಿತಿಯನ್ನು ಮಾತೃ ಮತ್ತು ಶಿಶು ಆರೈಕೆ ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ. ಇನ್ನು, ಈ ಮಹಿಳೆಯರಲ್ಲಿ ರಕ್ತಹೀನತೆಯ ಸ್ಥಿತಿಯೂ ಗಂಭೀರವಾಗಿದ್ದು, 3.415 ಮಹಿಳೆಯರು ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಬ್ಬಿಣ, ಬಿ-12, ಫೋಲಿಕ್ ಆಮ್ಲದ ಕೊರತೆ, ಥಲಸ್ಸಿಮಿಯಾ ಹಾಗೂ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಅಥವಾ ಶಸ್ತ್ರಚಿಕಿತ್ಸೆಯ ನಂತರದ ಸ್ಥಿತಿ ಕಾರಣವಾಗಿದೆ.

15,624 ಮಹಿಳೆಯರಿಗೆ ಆರೋಗ್ಯ ಕಾರ್ಡ್‌ ವಿತರಣೆ

ಬೀದ್‌ನ 1.132 ಹಳ್ಳಿಗಳಲ್ಲಿ ಮಹಿಳಾ ಆರೋಗ್ಯ ಕಾರ್ಯಪಡೆಗಳು ಕಾರ್ಯನಿರ್ವಹಿಸುತ್ತಿದ್ದು, 46,231 ಮಹಿಳೆಯರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇದಲ್ಲದೆ, 15,624 ಮಹಿಳೆಯರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಸರ್ಕಾರಿ ವೈದ್ಯರ ಅನುಮತಿಯೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ 279 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಈ ಎಲ್ಲಾ ತಪಾಸಣೆಗಳು ಮತ್ತು ಅಂಕಿಅಂಶಗಳು ಕಬ್ಬಿನ ಕಟಾವು ಕಾರ್ಮಿಕ ಮಹಿಳೆಯರ ಆರೋಗ್ಯದ ಮೇಲೆ ಎಷ್ಟು ಗಂಭೀರ ಪರಿಣಾಮ ಬೀರುತ್ತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಇದಕ್ಕೆ ತಕ್ಷಣದ ಮತ್ತು ದೀರ್ಘಾವಧಿಯ ಪರಿಹಾರಗಳ ಅಗತ್ಯವಿದೆ.

ಮೂಲಭೂತ ಸೌಕರ್ಯ ವಂಚಿತ ಕಾರ್ಮಿಕರು

ಉತ್ತರ ಕರ್ನಾಟಕದ ಕಬ್ಬು ಬೆಳೆಯುವ ಭಾಗಗಳಿಗೆ ಬೀದ್ ಜಿಲ್ಲೆಯ ಕಾರ್ಮಿಕರು ಬರುತ್ತಾರೆ. ಕೂಲಿಗಾಗಿ ಬರುವ ಇವರು ಕೃಷಿ ಜಮೀನುಗಳಲ್ಲಿಯೇ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಾರೆ. ಈ ವರ್ಗದ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳು ಇರಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ಸಂಚರಿಸುತ್ತ ಕೆಲಸ ಮಾಡಿಕೊಂಡಿರುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..