ಪ್ರಧಾನಿ ನೇರಂದ್ರ ಮೋದಿ ಸ್ವಾವಲಂಬಿ ಭಾರತ ನಿರ್ಮಾಣದ ಬಳಿಕ ಸ್ಥಳೀಯ ವಸ್ತುಗಳ ಬಳಿಸಿ, ವಿದೇಶಿ ವಸ್ತು ಬಹಿಷ್ಕರಿಸಿ ಅನ್ನೋ ಅಭಿಯಾನ ನಡೆಯುತ್ತಿದೆ. ಇದರ ಬೆನ್ನಲ್ಲೇ ಹಲವು ಗಣ್ಯರು, ಸೆಲೆಬ್ರೆಟಿಗಳು ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತೀಯರಿಗೆ ಮಹತ್ವದ ಕರೆ ನೀಡಿದ್ದಾರೆ.
ನವದೆಹಲಿಜೂ.02): ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿರುವ ಭಾರತ ನಲುಗಿ ಹೋಗಿದೆ. ಒಂದೆಡೆ ಕೊರೋನಾ ವೈರಸ್ ತೀವ್ರವಾಗಿ ವ್ಯಾಪಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಡಬಲ್ ಆಗುತ್ತಿದೆ. ಇತ್ತ ಲಾಕ್‌ಡೌನ್, ಸಾಮಾಜಿಕ ಅಂತರ ಸೇರಿದಂತೆ ಹಲವು ನಿರ್ಬಂಧಗಳಿಂದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಆರ್ಥಿಕ ಚೇತರಿಕೆಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಇದರ ಜೊತೆ ಭಾರತೀಯರು, ಭಾರತದಲ್ಲಿ ತಯಾರಾಗುವ ಹಾಗೂ ಇಲ್ಲಿನ ಸ್ಥಳೀಯ ವಸ್ತುಗಳನ್ನೇ ಬಳಕೆ ಮಾಡುವುದಾಗಿ ಪ್ರತಿಜ್ಞೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಜಾಹುಲಿ ಯಡಿಯೂರಪ್ಪನವರಿಗೆ ಅಮಿತ್ ಶಾ ಅಭಯ ನೀಡಿದ್ದೇಕೆ?.
ಖಾಸಗಿ ವಾಹಿನಿ ಜೊತೆಗಿನ ಸಂದರ್ಶದಲ್ಲಿ ಅಮಿತ್ ಶಾ, ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಎಲ್ಲರೂ ಸ್ಥಳೀಯ ವಸ್ತುಗಳ ಬಳಕೆ, ಖರೀದಿ ಮಾಡಿದರೆ ಭಾರತದ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಭಾರತೀಯರ ಹಣ ಹೂಡಿಕೆ, ಖರೀದಿಗಳಿಂದ ಭಾರತದಲ್ಲೇ ಹಣದ ಚಲಾವಣೆ ಹೆಚ್ಚಾಗಲಿದೆ. ಆರ್ಥಿಕತೆ ಉತ್ತಮವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಆರೋಗ್ಯವಾಗಿದ್ದೇನೆ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಗೃಹ ಸಚಿವ ಅಮಿತ್ ಶಾ!
ಪ್ರತಿಯೊಬ್ಬ ಭಾರತೀಯ ಸ್ಥಳೀಯ ವಸ್ತುಗಳ ಬಳಕೆ ಕುರಿತು ಪ್ರತಿಜ್ಞೆ ಮಾಡಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. 130 ಕೋಟಿ ಜನಸಂಖ್ಯೆ ನಮ್ಮ ಶಕ್ತಿ. ಹೀಗಾಗಿ ವಿದೇಶಿ ಕಂಪನಿಗಳಿಗೆ ನಮ್ಮ ಮಾರುಕಟ್ಟೆಯ ಅವಶ್ಯಕತೆ ಹೆಚ್ಚಿದೆ. ಪ್ರಧಾನಿ ಮೋದಿ ಹೇಳಿದಂತೆ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಎಲ್ಲಾ ದೇಶಗಳಿಗೆ ಕೊರೋನಾ ವೈರಸ್ ಹೊಡೆತ ನೀಡಿದೆ. ಆಯಾ ದೇಶಗಳು ಆರ್ಥಿಕತೆ ಮೇಲೆಕ್ಕೆತ್ತಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತ ಮೋದಿ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದೆ. ಭಾರತದ ಆರ್ಥಿಕತೆ ಚೇತರಿಕೆ ಕಾಣುವ ವಿಶ್ವಾಸವಿದೆ. ಕೊರೋನಾ ಕಾರಣ ಕುಸಿದಿರುವ ಆರ್ಥಿಕತೆ ಶೀಘ್ರದಲ್ಲೇ ಮತ್ತೆ ಸರಿದಾರಿಗೆ ಬರಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.