ಕೊರೋನಾ ಬಲಿಯಾಗುತ್ತಿರುವ ಶೇ. 80ರಷ್ಟು ಮಂದಿ ಈ ಹತ್ತು ರಾಜ್ಯದವರು!

Published : Oct 25, 2020, 04:32 PM ISTUpdated : Oct 25, 2020, 04:51 PM IST
ಕೊರೋನಾ ಬಲಿಯಾಗುತ್ತಿರುವ ಶೇ. 80ರಷ್ಟು ಮಂದಿ ಈ ಹತ್ತು ರಾಜ್ಯದವರು!

ಸಾರಾಂಶ

ಇಡೀ ವಿಶ್ವವನ್ನೇ ಆವರಿಸಿರುವ ಕೊರೋನಾ ವೈರಸ್| ದೇಶದಲ್ಲೂ ಕೊರೋನಾ ಅಟ್ಟಹಾಸ| ಕೊರೋನಾದಿಂದ ಮೃತಪಡುತ್ತಿರುವ ಶೇ. 80 ರಷ್ಟು ಪ್ರಕರಣಗಳು ದೇಶದ ಹತ್ತು ರಾಜ್ಯಗಳಲ್ಲಿ ವರದಿ

ನವದೆಹಲಿ(ಅ.25): ಇಡೀ ವಿಶ್ವವನ್ನೇ ಆವರಿಸಿರುವ ಕೊರೋನಾ ವೈರಸ್ ದೇಶದಲ್ಲೂ ಅಟ್ಟಹಾಸ ಮುಂದುವರೆಸಿದೆ. ಸದ್ಯ ಈ ಮಹಾಮಾರಿ ಸಂಬಂಧ ಬೆಚ್ಚಿ ಬೀಳಿಸುವ ಮಾಹಿತಿಗಳು ಲಭ್ಯವಾಗಿವೆ. ಹೌದು ಕೇಂದ್ರ ಸಚಿವಾಲಯ ಬಿಡುಗಡೆಗೊಳಿಸಿರುವ ಮಾಹಿತಿ ಅನ್ವಯ ಕೊರೋನಾದಿಂದ ಮೃತಪಡುತ್ತಿರುವ ಶೇ. 80 ರಷ್ಟು ಪ್ರಕರಣಗಳು ದೇಶದ ಹತ್ತು ರಾಜ್ಯಗಳಲ್ಲಿ ವರದಿಯಾಗುತ್ತಿವೆ ಎಂದು ಹೇಳಲಾಗುತ್ತಿವೆ.

ಮಹಾರಾಷ್ಟ್ರದಲ್ಲಿ ಶನಿವಾರ 137 ಮಂದಿ ಕೊರೋನಾದಿಂದಾಗಿ ಮೃತಪಟ್ಟಿದ್ದು, ಈ ಪಟ್ಟಿಯಲ್ಲಿ ಠಾಕ್ರೆ ರಾಜ್ಯ ಮುಂಚೂಣಿಯಲ್ಲಿದೆ. ಇನ್ನು ಈ ಮಹಾಮಾರಿಗೆ ಈವರೆಗೂ ಮಹಾರಾಷ್ಟ್ರದಲ್ಲಿ 43,152 ಮಂದಿ ಸಾವನ್ನಪ್ಪಿದ್ದಾರೆ. 

ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ನಿಧನ

ಇನ್ನು ಕೊರೋನಾಗೆ ಬಲಿಯಾದವರಲ್ಲಿ ಎರಡನೇ ಅತಿ ಹೆಚ್ಚು ಪ್ರಕರಣಗಳು ತಮಿಳುನಾಡಿನಲ್ಲಿ ದಾಖಲಾಗಿವೆ. ಇಲ್ಲಿ ಈವರೆಗೂ 10,893 ಮಂದಿ ಮೃತಪಟ್ಟಿದ್ದು, 35 ಮಂದಿ ಶನಿವಾರ ಬಲಿಯಾಗಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕರ್ನಾಟಕವಿದೆ. ರಾಜ್ಯದಲ್ಲಿ ಶನಿವಾರ ಒಟ್ಟು 71 ಮಂದಿ ಮೃತಪಟ್ಟಿದ್ದು, ಒಟ್ಟು 10,892 ಮಂದಿ ಈ ಮಹಾಂಆಋಇಗೆ ಬಲಿಯಾಗಿದ್ದಾರೆ.

ಇನ್ನುಳಿದಂತೆ ಕೊರೋನಾದಿಂದಾಗಿ ಅತಿ ಹೆಚ್ಚು ಮೃತಪಟ್ಟ ವರದಿಗಳು ದಾಖಲಾದ ರಾಜ್ಯಗಳು ಹೀಗಿವೆ: 

ದೆಹಲಿಯಲ್ಲಿ ಸೋಂಕು ಕಡಿಮೆಯಾದ್ರೂ ಇಳಿಯುತ್ತಿಲ್ಲ ಸಾವಿನ ಪ್ರಮಾಣ: ಕೇಜ್ರಿಗೆ ಹೊಸ ಟೆನ್ಶನ್!

* ಪಶ್ಚಿಮ ಬಂಗಾಳ: 1,793

* ಛತ್ತೀಸ್‌ಘಡ: 1,793

* ಉತ್ತರ ಪ್ರದೇಶ: 6,854

* ಕೇರಳ: 1,306

* ದೆಹಲಿ: 6,225

* ಪಂಜಾಬ್: 4,107

* ಆಂಧ್ರಪ್ರದೇಶ: 6,566

ಹೀಗಿರುವಾಗಲೇ ದೇಶದಲ್ಲಿ ಸಾವಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಅಲ್ಲದೇ ಇತರ ಆರೋಗ್ಯ ಸಮಸ್ಯೆಗಳಿರುವವರೇ ಈ ಸೋಂಕಿಗೆ ಬಲಿಯಾಗಿದ್ದಾರೆ.

ಇನ್ನು 60 ವರ್ಷ ಮೇಲ್ಪಟ್ಟು, ಇನ್ನಿತರ ಆರೋಗ್ಯ ಸಮಸ್ಯೆ ಉಳ್ಳವರಿಗೆ ಈ ಸೋಂಕು ತಗುಲಿದರೆ ಹೆಚ್ಚು ಅಪಾಯ. ಇನ್ನು ಸರ್ಕಾರದ ವರದಿಯನ್ವಯ ಈ ಸೋಂಕಿನಿಂತ ಮೃತಪಟ್ಟವರಲ್ಲಿ ಶೇ. 53% ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. 

ದೆಹಲಿಯಲ್ಲಿ ಸೋಂಕು ಕಡಿಮೆಯಾದ್ರೂ ಇಳಿಯುತ್ತಿಲ್ಲ ಸಾವಿನ ಪ್ರಮಾಣ: ಕೇಜ್ರಿಗೆ ಹೊಸ ಟೆನ್ಶನ್!

ಮಹಿಳೆಯರಿಗಿಂತ ಪುರುಷರೇ ಈ ಸೋಂಕಿಗೆ ಬಲಿಯಾಗಿರುವುದೂ ಬಹಿರಂಗವಾಗಿದೆ. ಅಂದರೆ ಶೇ. 70ರಷ್ಟು ಮಂದಿ ಪುರುಷರು ಈ ಮಹಾಮಾರಿಗೆ ಬಲಿಯಾಗಿದ್ದರೆ, ಕೇವಲ 30%ರಷ್ಟು ಮಹಿಳೆಯರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ಇನ್ನು ಕೊರೋನಾ ಸೋಂಕು ತಗುಲಿದ ಬಹುತೇಕರಿಗೆ ಹೈಪರ್‌ಟೆನ್ಶನ್, ಶುಗರ್, ಲಿವರ್ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ, ಅಸ್ತಮಾ, ರೋಗ ನಿರೋಧಕ ಶಕ್ತಿ ಇಳಿಕೆ  ಮೊದಲಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಅದರಲ್ಲೂ  ಹೈಪರ್‌ಟೆನ್ಶನ್, ಶುಗರ್ ಸಮಸ್ಯೆ ಅನೇಕರಲ್ಲಿ ಕಾಣಿಸಿಕೊಂಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?
Vote Chori Row: 'ನಿಮ್ಮ ಮನಸಿಗೆ ಏನಾಗಿದೆ?..' ಪ್ರತಿಪಕ್ಷಗಳಿಗೆ ದೇವೇಗೌಡ ಎಚ್ಚರಿಕೆ