ಬಿಹಾರ ಬೆನ್ನಲ್ಲೇ ಈ ರಾಜ್ಯದಲ್ಲೂ ಉಚಿತ ಕೊರೋನಾ ಲಸಿಕೆ ಘೋಷಣೆ!

Published : Oct 25, 2020, 03:39 PM IST
ಬಿಹಾರ ಬೆನ್ನಲ್ಲೇ ಈ ರಾಜ್ಯದಲ್ಲೂ ಉಚಿತ ಕೊರೋನಾ ಲಸಿಕೆ ಘೋಷಣೆ!

ಸಾರಾಂಶ

ಬಿಹಾರ ಬೆನ್ನಲ್ಲೇ ಉಚಿತ ಕೊರೋನಾ ಲಸಿಕೆ ಘೋಷಿದುತ್ತಿರುವ ರಾಜ್ಯಗಳು| ಬಿಹಾರದಲ್ಲಿ ಬಿಜೆಪಿ ಪ್ರಣಾಳಿಕೆ ಬೆನ್ನಲ್ಲೇ ಪುದುಚೇರಿ, ತಮಿಳುನಾಡಿನಲ್ಲೂ ಫ್ರೀ ವ್ಯಾಕ್ಸಿನ್ ಮಾತು

ಕಾರೈಕಲ್‌/ಪುದುಚೇರಿ(ಅ.25): ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಗೆದ್ದರೆ ಕೊರೋನಾ ಲಸಿಕೆಯನ್ನು ಉಚಿತವಾಗಿ ವಿತರಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಆಡಳಿತದ ಪುದುಚೇರಿ ಸಹ ಇಂಥದ್ದೇ ಘೋಷಣೆ ಮಾಡಿದೆ.

‘ಕೇಂದ್ರ ಸರ್ಕಾರ ಅನುದಾನ ನೀಡಲಿ ಅಥವಾ ನೀಡದಿರಲಿ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ಕೊರೋನಾ ಲಸಿಕೆ ವಿತರಿಸುತ್ತೇವೆ. ಇದು ನಮ್ಮ ವಾಗ್ದಾನ’ ಎಂದು ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಶುಕ್ರವಾರ ಘೋಷಿಸಿದ್ದಾರೆ.

ಪುದುಚೇರಿಯಲ್ಲಿ ಈವರೆಗೆ 33,986 ಜನರಿಗೆ ಕೊರೋನಾ ದೃಢಪಟ್ಟಿದೆ. ತಮಿಳುನಾಡು, ಮಧ್ಯಪ್ರದೇಶ ಸರ್ಕಾರಗಳು ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಈಗಾಗಲೇ ಘೋಷಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?
Vote Chori Row: 'ನಿಮ್ಮ ಮನಸಿಗೆ ಏನಾಗಿದೆ?..' ಪ್ರತಿಪಕ್ಷಗಳಿಗೆ ದೇವೇಗೌಡ ಎಚ್ಚರಿಕೆ