ಬೀದಿ ಬದಿ ಪಾನಿಪುರಿ ಸೇವಿಸಿದ್ದ 8 ವರ್ಷದ ಬಾಲಕ ಸಾವು: 18 ಜನ ಆಸ್ಪತ್ರೆಗೆ ದಾಖಲು: ಪಾನಿಪುರಿವಾಲಾ ಪರಾರಿ

Published : Apr 27, 2026, 03:20 PM IST
panipuri tragedy

ಸಾರಾಂಶ

ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಬೀದಿಬದಿ ಪಾನಿಪುರಿ ಸೇವಿಸಿದ ನಂತರ ಆರು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, 18 ಮಂದಿ ಅಸ್ವಸ್ಥರಾಗಿದ್ದಾರೆ. ಹೊಟ್ಟೆನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಾನಿಪುರಿ ಮಾರಾಟಗಾರ ನಾಪತ್ತೆಯಾಗಿದ್ದಾನೆ.

ರಸ್ತೆಬದಿ ಪಾನಿಪುರಿ ಸೇವಿಸಿದ ಬಳಿಕ 8 ವರ್ಷದ ಬಾಲಕ ಸಾವು

ರಾಂಚಿ: ಬೀದಿಬದಿ ಪಾನಿಪುರಿ ಸೇವಿಸಿದ ಬಳಿಕ ಅನಾರೋಗ್ಯಕ್ಕೀಡಾಗಿ ಒಬ್ಬ ಬಾಲಕ ಸಾವಿಗೀಡಾದಂತಹ ಘಟನೆ ನಡೆದಿದೆ. 18 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಾರ್ಖಂಡ್‌ನ ಗಿರಿದಿಹ್ ಎಂಬಲ್ಲಿ ಈ ಘಟನೆ ನಡೆದಿದೆ. ರಸ್ತೆ ಬದಿ ಪಾನಿಪುರಿ ಸೇವಿಸಿದ ನಂತರ ಎಲ್ಲರಿಗೂ ಹೊಟ್ಟೆನೋವು ಹಾಗೂ ವಾಂತಿ ಶುರುವಾಗಿದ್ದು, ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಘಟನೆಯ ಬಳಿಕ ಪಾನಿಪುರಿ ಮಾರಾಟಗಾರ ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ.

18ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಅಸ್ವಸ್ಥರಾದವರೆಲ್ಲರೂ ಬೀದಿ ಬದಿಯ ಒಂದೇ ಪಾನಿಪುರಿ ಅಂಗಡಿಯಲ್ಲಿ ಪಾನಿಪುರಿ ಸೇವಿಸಿದ್ದರು. ಅಸ್ವಸ್ಥರಾದ 18 ಜನರಲ್ಲಿ ಬಹುತೇಕ ಮಕ್ಕಳೇ ಆಗಿದ್ದಾರೆ. ಪಾನಿಪುರಿ ಸೇವಿಸಿ ಮನೆಗೆ ಬಂದ ನಂತರ ಕೆಲವರಿಗೆ ತೀವ್ರ ಜ್ವರ ಕಾಣಿಸಿಕೊಂಡರೆ ಮತ್ತೆ ಕೆಲವರಿಗೆ ಹೊಟ್ಟೆನೋವು, ವಾಂತಿ ಹಾಗೂ ಡಯೇರಿಯಾ ಶುರುವಾಗಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಫಾಸಿಲ್ ಪೊಲೀಸ್ ಠಾಣೆಯ ಬಜ್ತೊ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ಆರೋಗ್ಯ ಇಲಾಖೆ ತನಿಖೆ ಆರಂಭಿಸಿದೆ. ಗ್ರಾಮಸ್ಥರ ಪ್ರಕಾರ, ಅವರೆಲ್ಲರೂ ಒಂದೇ ವ್ಯಕ್ತಿಯ ಬಳಿ ಪಾನಿಪುರಿ ಸೇವಿಸಿದ್ದಾರೆ. ಆ ಪಾನಿಪುರಿ ವ್ಯಾಪಾರಿ ಮನೆಮನೆಗೆ ಬಂದು ಪಾನಿಪುರಿ ಮಾರಾಟ ಮಾಡುತ್ತಿದ್ದ. ಶನಿವಾರ ರಾತ್ರಿಯ ವೇಳೆಗೆ ಅನೇಕರು ಅನಾರೋಗ್ಯಕ್ಕಿಡಾಗಿದ್ದು, ಭಾನುವಾರದ ವೇಳೆಗೆ ಜ್ವರ ಹಾಗೂ ಹೊಟ್ಟೆನೋವು ತೀವ್ರಗೊಂಡಿದೆ.

ಇದನ್ನೂ ಓದಿ: ಆನೇಕಲ್: ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮಗು ಸಾವು

ಪರಿಣಾಮ ಚಿಕಿತ್ಸೆ ವೇಳೆಯೇ ಆರು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಸಾವು ಕುಟುಂಬದವರನ್ನು ಆಘಾತಕ್ಕೆ ದುಡಿದೆ. ಹಾಗೂ ಸ್ಥಳೀಯರು ಕೂಡ ಈ ಘಟನೆಯಿಂದ ಆಘಾತಕ್ಕೀಡಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಘಟನೆಯ ಬಳಿಕ ಪಾನಿಪುರಿ ಮಾರಾಟಗಾರ ಪರಾರಿ

ಘಟನೆಯ ಬಳಿಕ ಸ್ಥಳೀಯ ಪೊಲೀಸರು ಹಾಗೂ ಆಡಳಿತ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕ್ಷೇಮ ವಿಚಾರಿಸಿದ್ದಾರೆ ಹಾಗೂ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಬಳಿಕ ಇಲ್ಲಿನ ಪಲ್ಮೊ ಪ್ರದೇಶದ ನಿವಾಸಿಯಾಗಿರುವ ಪಾನಿಪುರಿ ಮಾರಾಟಗಾರ ಪರಾರಿಯಾಗಿದ್ದಾನೆ. ಈ ಬಗ್ಗೆ ಮಾತನಾಡಿದ ಸಿವಿಲ್ ಸರ್ಜನ್ ಡಾ ಬಚ್ಛಾ ಪ್ರಸಾದ್ ಸಿಂಗ್, ಪಾನಿಪುರಿ ಸೇವಿಸಿದ ಬಳಿಕ 18 ಜನ ಅನಾರೋಗ್ಯಕ್ಕೀಡಾಗಿದ್ದು, ಅವರಲ್ಲಿ 18 ಜನರ ಸ್ಥಿತಿ ಸ್ಥಿರವಾಗಿದೆ. ನಿಜವಾದ ಕಾರಣ ಏನು ಎಂಬುದು ತನಿಖೆಯಿಂದ ತಿಳಿದು ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ: ಸೌಂದರ್ಯಕ್ಕಿಂತ ಸಾಧನೆಯೇ ಮಿಗಿಲು: ಟ್ರೋಲಿಗರಿಗೆ ಅಂಕಗಳ ಮೂಲಕವೇ ತಿರುಗೇಟು ನೀಡಿದ ಪ್ರಾಚಿ ನಿಗಮ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Mamata Banerjee: ಮೋದಿ ಚುರುಮುರಿ, ದೀದಿ ತರಕಾರಿ; ದುಡ್ಡು ಕೊಡಿ ಅಕ್ಕೋ ಎಂದ ವ್ಯಾಪಾರಿ! Video Viral
ಪಿಯುಸಿಯಲ್ಲೂ ಪ್ರಾಚಿ ಟಾಪರ್‌: ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ ಮಾಡಿದವರಿಗೆ ಅಂಕಗಳ ಉತ್ತರ