ದೇಶದಲ್ಲೇ ಮೊದಲ ಬಾರಿ ದೇಶದಲ್ಲಿ ಸಿಂಹಗಳಿಗೆ ಕೊರೋನಾ | 8 ಸಿಂಹಗಳಿಗೆ ಕೊರೋನಾ ಪಾಸಿಟಿವ್
ಹೈದರಾಬಾದ್(ಮೇ.04): ದೇಶದಲ್ಲೇ ಮೊದಲ ಬಾರಿಗೆ 8 ಸಿಂಹಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹೈದಾರಾಬಾದ್‌ನ ನೆಹರು ವನ್ಯಜೀವಿ ಉದ್ಯಾನವನದಲ್ಲಿದ್ದ 8 ಸಿಂಹಗಳಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.
ಸೆಲ್ಯುಲಾರ್ ಮತ್ತು ಮೊಲ್‌ಕ್ಯುಲರ್ ಜೀವಶಾಸ್ತ್ರ ಕೇಂದ್ರ (ಸಿಸಿಎಂಬಿ) ಸಿಂಹಗಳಿಗೆ ಕೊರೋನಾ ದೃಢಪಟ್ಟಿರುವ ವಿಚಾರವನ್ನು ಮೃಗಾಲಯದ ಗಮನಕ್ಕೆ ತಂದಿದ್ದಾರೆ. ಆದರೆ ಈ ವಿಚಾರವನ್ನು ವನ್ಯಜೀವಿ ಉದ್ಯಾನವನದ ನಿರ್ದೇಶಕರು ದೃಢಪಡಿಸಿಯೂ ಇಲ್ಲ, ತಳ್ಳಿ ಹಾಕಿಯೂ ಇಲ್ಲ.
ಬಾವಲಿ ಮಾತ್ರವಲ್ಲ ಆನೆಯನ್ನೂ ತಿಂತಾರೆ..! ಜಗತ್ತಿನಾದ್ಯಂತ ಜನ ಸೇವಿಸೋ ಪ್ರಾಣಿಗಳಿವು..!
ಸಿಂಹಗಳಲ್ಲಿ ಕೊರೋನಾ ಲಕ್ಷಣ ಕಾಣಿಸಿಕೊಂಡಿದ್ದು ನಿಜ. ಆದರೆ ನನಗಿದುವರೆಗೂ ಆರ್‌ಟಿ ಪಿಸಿಆರ್ ವರದಿಗಳು ಸಿಕ್ಕಿಲ್ಲ. ಹಾಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಸಿಂಹಗಳು ಹುಷಾರಾಗಿವೆ ಎಂದಿದ್ದಾರೆ.
ಇತ್ತೀಚೆಗೆ ಗುಜರಾತ್‌ನಲ್ಲಿ ಪ್ರಾಣಿಗಳಲ್ಲಿ ಕೊರೋನಾ ಲಕ್ಷಣ ಇದೆಯಾ ಎಂಬುದನ್ನು ಹತ್ತಿರದಿಂದ ಗಮನಿಸಿ ತಿಳಿದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಈಗ ಹೈದರಾಬಾದ್‌ನಲ್ಲಿ ಪ್ರಕರಣ ಕಂಡುಬಂದಿದೆ.