ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ಕೊರೊನಾ ವೈರಸ್ ಭಯ..?

Published : Aug 31, 2020, 03:48 PM IST
ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ಕೊರೊನಾ ವೈರಸ್ ಭಯ..?

ಸಾರಾಂಶ

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ಕೊರೊನಾ ವೈರಸ್ ಭಯ..!| ಕೊರೊನಾ ಎರಡನೇ ಆವೃತ್ತಿಯ (ಸೆಕೆಂಡ್ ವೇವ್) ಅನ್ನೋದು ದೆಹಲಿಯ ನಿವಾಸಿಗಳ ಅನುಮಾನ| ಕೊರೊನಾ ಸೋಂಕು ನಿಯಂತ್ರಣ ಹೇಗೆ?

ನವದೆಹಲಿ(ಆ.31) : ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ಕೊರೊನಾ ವೈರಸ್ ಭಯ..! ಇದು ಕೊರೊನಾ ಎರಡನೇ ಆವೃತ್ತಿಯ (ಸೆಕೆಂಡ್ ವೇವ್) ಅನ್ನೋದು ದೆಹಲಿಯ ನಿವಾಸಿಗಳ ಅನುಮಾನ. ಕೊರೊನಾ ಸೋಂಕು ನಿಯಂತ್ರಣ ಅನ್ನೋದು ಮತ್ತೆ ಅದೇ ಮಿಲಿಯನ್ ಡಾಲರ್ ಪ್ರಶ್ನೆಯಾಗುತ್ತಿದೆ.

ಅದರಲ್ಲೂ ಸೋಂಕಿತರ ಸಂಖ್ಯೆ ಸಾವಿರದ ಹಾಸು ಪಾಸು ಇದ್ದಾಗ ದೆಹಲಿಯ ನಿವಾಸಿಗಳು ದೊಡ್ಡ ನಿಟ್ಟುಸಿರು ಬಿಟ್ಟಿದ್ದರು. ಸಾಲದಕ್ಕೆ ಎರಡು ಕೋಟಿ ಜನಸಂಖ್ಯೆ ಇರುವ ಈ ನಗರಕ್ಕೆ ಒಂದು ಸಾವಿರ ಕೊರೊನಾ ಪ್ರಕರಣಗಳು ಯಾವ ಲೆಕ್ಕ ಅಂದಿದ್ದರು.

ಬಹುಶಃ  ದೆಹಲಿ ನಿವಾಸಿಗಳ ಈ ನಡೆಯೇ ಪುನಃ ಕೇಸುಗಳು ಎರಡು ಸಾವಿರದತ್ತ ಬೆಳೆಯಲು ಕಾರಣವಾಯ್ತು ಎನ್ನಲಾಗುತ್ತಿದೆ. ಕೇಜ್ರಿವಾಲ್ ಸಾಹೇಬರು ಕೊರೊನಾ ಕಂಟ್ರೋಲ್ ನಲ್ಲಿದೆ ಎಂದ ಮೇಲೆ ಸೋಂಕಿತರ ಸಂಖ್ಯೆ ಎರಡು ಸಾವಿರ ದಾಟಿದ್ದು ಮತ್ತೆ ಜನರಲ್ಲಿ ಆತಂಕಕ್ಕೆ ಎಡೆಮಾಡಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಅಂದ್ರೆ ನಿತ್ಯ ಇನ್ನೂರು ಪ್ರಕರಣಗಳ ಸಂಖ್ಯೆಯಂತೆ ಈಗ ಒಂದು ಸಾವಿರದಿಂದ ಎರಡು ಸಾವಿರ ಪ್ರಕರಣಗಳು ತನಕ ಲೆಕ್ಕ ಮುಟ್ಟಿದೆ.

ಕೇಜ್ರಿವಾಲ್ ಸರ್ಕಾರ ಪಟ್ಟಿ ಮಾಡಿರುವ ಕಾರಣಗಳು ಎಂದರೆ....

1 ಸೋಂಕಿತರಲ್ಲಿ ಉದಾಸೀನ ಹೆಚ್ಚುತ್ತಿದೆ- ಸೋಂಕಿನ ಲಕ್ಷಣಗಳು ಕಂಡಬಂದ ಕೂಡಲೇ ಆಸ್ಪತ್ರೆಗೆ ಬರದಿರುವುದು. ಅದು ಒಬ್ಬರಿಂದ ಇಡೀ ಕುಟುಂಬಸ್ಥರಿಗೆ ಹರಡುತ್ತಿದೆ. ಇದೇ ಉದಾಸೀನತೆಯಿಂದ  ಒಂದು ಕುಟುಂಬದಲ್ಲಿ ಒಬ್ಬರಿಂದ ಏಳು ಮಂದಿಗೆ ಹರಡಿದೆ ಅಂಥ ಸ್ವತಃ ಸಿಎಂ ಸಾಹೇಬರೇ ಹೇಳಿದ್ದಾರೆ.

2, ಸಾಮಾಜಿಕ ಅಂತರ ಕಾಪಾಡದಿರುವುದು, ಮಾಸ್ಕ್ ಧರಿಸದಿರುವುದು ಪ್ರಮುಖ ಕಾರಣವಂತೆ. 

ಕಳೆದ ಒಂದು ವಾರದ ಅವಧಿಯಲ್ಲಿ ಪ್ರಕರಣಗಳು ಹೆಚ್ಚಾಗಲು ಇವೇ ಪ್ರಮುಖ ಅಂಶಗಳಾಗಿ ಕಂಡು ಬಂದಿವೆ. ಇನ್ನು ಟೆಸ್ಟ್‌ ಗೆ ಒಳಗಾಗುವುದು ಜನರ ಜವಾಬ್ದಾರಿ ಎಂದಿರುವ ಸರ್ಕಾರ ಪ್ರತಿ ನಿತ್ಯ 20 ಸಾವಿರ ಮಂದಿಗೆ ಟೆಸ್ಟ್‌  ಮಾಡಲಾಗುತ್ತಿದೆ. ಅಂದರೆ ಒಂದು ಮಿಲಿಯನ್ ಗೆ 82 ಸಾವಿರ ಮಂದಿಗೆ ಮಾಡಲಾಗಿದೆ.

40 ಸಾವಿರ ಮಾಡಿ : ಇದು ಡೆಲ್ಲಿಯ ಸರ್ಕಾರ  ತೆಗೆದುಕೊಂಡಿರುವ ಕ್ರಮ. ಈತನಕ ನಿತ್ಯ 20 ಮಂದಿಗೆ ಟೆಸ್ಟ್‌ ಮಾಡಲಾಗುತ್ತಿತ್ತು. ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವ ಕಾರಣಕ್ಕೆ ಇನ್ನು ಮುಂದೆ ಪ್ರತಿನಿತ್ಯ 40 ಸಾವಿರ ಮಂದಿಗೆ ಟೆಸ್ಟ್‌ ಮಾಡಲು ಮುಂದಾಗಿದೆ. ಸಾಲದ್ದಕ್ಕೆ ಸಾವಿನ ಸಂಖ್ಯೆ ಕೂಡ 20 ದಾಟುತ್ತಿರುವುದು ಸರ್ಕಾರವನ್ನು ಮತ್ತೊಮ್ಮೆ ಆತಂಕಕ್ಕೆ ತಳ್ಳಿದೆ. 

ಕಂಟೈನ್ಮೆಂಟ್ ಜೋನ್ 820 ಮಾಡುವ ಮೂಲಕ ಕಠಿಣ ಗೈಡ್ ಲೈನ್ಸ್ ಅನುಸರಿಸುವಂತೆ ಆರೋಗ್ಯ ಸಿಬ್ಬಂದಿಗೆ ಸೂಚಿಸಿರುವುದು, ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ಇವೆಲ್ಲಾ ಪ್ರಯತ್ನಗಳ ನಡುವೆಯೂ ಅವರ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಯನ್ನು ಜನರಿಗೇ ಹೊಣೆ ಹೊರಿಸಲಾಗಿದೆ.

ಒಂದೇ ದಿನ 2 ಸಾವಿರ ಪ್ರಕರಣಗಳು : ನಿನ್ನೆ ಒಂದೇ ದಿನ ಎರಡು ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ದೆಹಲಿ ಆರೋಗ್ಯ ಇಲಾಖೆಯ ವರದಿ ಪ್ರಕಾರ, 2,024 ಪ್ರಕರಣಗಳು ವರದಿಯಾಗಿವೆ. 22 ಮಂದಿ ಬಲಿಯಾಗಿದ್ದಾರೆ. 1,249 ಮಂದಿ ಗುಣಮುಖರಾಗಿದ್ದಾರೆ. ಇನ್ನು 1,73,390 ಒಟ್ಟು ಪ್ರಕರಣಗಳು, 1,54,171 ಮಂದಿ ಒಟ್ಟು ಗುಣಮುಖರಾಗಿದ್ದು, 4,426 ಒಟ್ಟು ಬಲಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ
ಹೊಸ ವರ್ಷ ಬಂತು, ಪಾರ್ಟಿ ಮಾಡೋಕೆ ಬೇಕಾಬಿಟ್ಟಿ ಎಣ್ಣೆ ಬಾಟಲ್ ಇಟ್ಕೊಂಡ್ರೆ ಮುಗೀತು ಕಥೆ