56ನೇ ಪ್ರಯತ್ನದಲ್ಲಿSSLC ಪಾಸಾದ 77ರ ವೃದ್ಧನಿಂದ ಈಗ ಪಿಯುಸಿ ಪರೀಕ್ಷೆಗೆ ಸಜ್ಜು

By Suvarna NewsFirst Published Jan 14, 2022, 12:03 AM IST
Highlights
  • 77ರ ವೃದ್ಧನಿಂದ ಪಿಯುಸಿ ಪರೀಕ್ಷೆಗೆ ಸಜ್ಜು
  • 56ನೇ ಪ್ರಯತ್ನದಲ್ಲಿSSLC ಪಾಸಾಗಿದ್ದ ವೃದ್ಧ

ಜೈಪುರ: ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಮಾತು ಮತ್ತೆ ಸಾಬೀತಾಗಿದೆ. 10 ನೇ ತರಗತಿ ಪರೀಕ್ಷೆಗೆ 55 ಬಾರಿ ಕಟ್ಟಿ  56ನೇ ಪ್ರಯತ್ನದಲ್ಲಿ ಪಾಸಾದ ಜಲೋರ್‌ (Jalore) ನ 77 ವರ್ಷದ ನಿವೃತ್ತ ಸರ್ಕಾರಿ ನೌಕರ ಹುಕುಮ್‌ದಾಸ್ ವೈಷ್ಣವ್ ( Hukumdas Vaishnav) ಈಗ 12 ನೇ ತರಗತಿ ಪರೀಕ್ಷೆಗೆ ದಾಖಲಾಗಿದ್ದಾರೆ. ಹುಕುಮದಾಸ್ ವೈಷ್ಣವ್ 56ನೇ ಪ್ರಯತ್ನದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.  70 ರ ಹರೆಯದಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸುವ ಇವರ ಕಥೆಯು ಅನೇಕರಿಗೆ ಸ್ಫೂರ್ತಿಯ ಮೂಲವಾಗಿದೆ. 

ಜಲೋರ್‌ನ ಸರ್ದಾರ್‌ಗಢ ( Sardargarh) ಗ್ರಾಮದಲ್ಲಿ 1945 ರಲ್ಲಿ ಜನಿಸಿದ ಹುಕುಮ್‌ದಾಸ್ ಟೀಖಿ ಗ್ರಾಮ (Teekhi village)ದಲ್ಲಿ 1 ರಿಂದ 8 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಮೊದಲ ಬಾರಿಗೆ 1962 ರಲ್ಲಿ ಮೊಕಲ್ಸರ್‌ನಲ್ಲಿ(Mokalsar) ಅವರು ಹತ್ತನೇ ತರಗತಿ ಪರೀಕ್ಷೆಯನ್ನು ಬರೆದಿದ್ದರು. ಪರೀಕ್ಷಾ ಕೇಂದ್ರವು ಬಾರ್ಮರ್‌ (Barmer)ನಲ್ಲಿತ್ತು. ಮೊದಲ ಪರೀಕ್ಷೆಯಲ್ಲಿ ಸಪ್ಲಿಮೆಂಟರಿ ಪಡೆದರೆ ಎರಡನೇ ಬಾರಿ ಅನುತ್ತೀರ್ಣರಾದರು. ಅವರ ಸ್ನೇಹಿತರು, ಹುಕುಮದಾಸ್ ವೈಷ್ಣವ್ ಅವರು ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದೇ ಇಲ್ಲ ಎಂದು ಸವಾಲು ಹಾಕಿದ್ದರು. ಸವಾಲನ್ನು ಸ್ವೀಕರಿಸಿದ ಹುಕುಮದಾಸ್ ಅವರು ತಮ್ಮ ಹತ್ತನೇ ತರಗತಿ ಪರೀಕ್ಷೆಯನ್ನು ಮುಂದೊಂದು ದಿನ ತೇರ್ಗಡೆ ಮಾಡುವುದಾಗಿ ಭರವಸೆ ನೀಡಿದ್ದರು. 

ಬೆಂಕಿಯಲ್ಲಿ ಸಿಲುಕಿದ್ದ ಅಜ್ಜನ ಹೀರೋಗಳಂತೆ ಸೇವ್ ಮಾಡಿದ ಸ್ನೇಹಿತರು

ಹುಕುಮ್‌ದಾಸ್‌  ಜಲ ನಿಗಮದಲ್ಲಿ 4ನೇ ದರ್ಜೆಯ ಉದ್ಯೋಗಿಯಾಗಿದ್ದರು. ನಂತರ, ಅವರು ತರಗತಿಗಳಿಗೆ ಹೋಗಿ ನಿರಂತರ ಸಾಮಾನ್ಯ ಅಧ್ಯಯನವನ್ನು ತೊರೆದರು ಮತ್ತು ಸ್ವಯಂ ಅರ್ಜಿ ಸಲ್ಲಿಸಿ ಪರೀಕ್ಷೆಗಳಿಗೆ ಹಾಜರಾಗಲು ಪ್ರಾರಂಭಿಸಿದರು. 2005 ರಲ್ಲಿ, ಅವರು ಖಜಾನೆ ಇಲಾಖೆಯಿಂದ  4ನೇ ದರ್ಜೆ ಉದ್ಯೋಗಿಯಾಗಿ ನಿವೃತ್ತರಾದರು. 2010 ರವರೆಗೆ, ಅವರು ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಆಯೋಜಿಸಿದ್ದ 10  ತರಗತಿಯ ಪರೀಕ್ಷೆಯನ್ನು 48 ಬಾರಿ  ಬರೆದಿದ್ದರು. ಅದಾದ ನಂತರ, ಅವರು ರಾಜ್ಯ ಮುಕ್ತ ಶಿಕ್ಷಣ ಮಂಡಳಿಯಿಂದ ಪರೀಕ್ಷೆ ಬರೆಯಲು ಪ್ರಯತ್ನಿಸಿದರು ಮತ್ತು ಅಂತಿಮವಾಗಿ 2019 ರಲ್ಲಿ ಅವರು 10 ನೇ ತರಗತಿ ಪರೀಕ್ಷೆಯಲ್ಲಿ ಎರಡನೇ  ದರ್ಜೆಯೊಂದಿಗೆ ಉತ್ತೀರ್ಣರಾದರು. ಅದಾದ ನಂತರ ಅವರು 2021-22 ಅವಧಿಯಲ್ಲಿ 12 ನೇ ತರಗತಿಗೆ ದಾಖಲಾಗಿದ್ದು, ಈಗ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ. 

Grandfather Graduated : ಮೊಮ್ಮಗಳು ಪದವಿ ಪಡೆದಂದೆ ಪದವಿ ಶಿಕ್ಷಣ ಪೂರ್ಣಗೊಳಿಸಿದ 87ರ ತಾತ

ಮಂಗಳವಾರ, ಹುಕುಮ್‌ದಾಸ್ ವೈಷ್ಣವ್, ಜಾಲೋರ್ ನಗರದಲ್ಲಿರುವ ರಾಜ್ಯ ಮುಕ್ತ ಶಿಕ್ಷಣ ಕೇಂದ್ರದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ.  ಕುತೂಹಲಕಾರಿ ಅಂಶವೆಂದರೆ ಅವರ ಮೊಮ್ಮಗ ಕೂಡ ತನ್ನ ಶಾಲಾ ಶಿಕ್ಷಣವನ್ನು ಈಗಾಗಲೇ ಪೂರ್ಣಗೊಳಿಸಿದ್ದಾನೆ.

click me!