ಜೀವ 24 ಗಂಟೆ ಮಾತ್ರ ಎಂದಿದ್ದ ಸೋಂಕಿತೆ ಕೊರೋನಾದಿಂದ ಸಂಪೂರ್ಣ ಗುಣಮುಖ!

Published : Apr 26, 2021, 05:20 PM ISTUpdated : Apr 26, 2021, 05:23 PM IST
ಜೀವ 24 ಗಂಟೆ ಮಾತ್ರ ಎಂದಿದ್ದ ಸೋಂಕಿತೆ ಕೊರೋನಾದಿಂದ ಸಂಪೂರ್ಣ ಗುಣಮುಖ!

ಸಾರಾಂಶ

ಕೊರೋನಾ ವೈರಸ್ ಸೋಂಕು ಇಡೀ ದೇಹಕ್ಕೆ ಆವರಿಸಿಕೊಂಡಿದೆ. ಇತ್ತ ಡಯಾಬೆಟಿಕ್ ಸೇರಿದಂತೆ ಇತರ ಆರೋಗ್ಯ ಸಮಸ್ಯೆ ಕೂಡ ಕಾಡುತ್ತಿತ್ತು. 75ರ ವೃದ್ಧೆಯನ್ನು ಪರಿಶೀಸಿಲಿದ ವೈದ್ಯರು, 24 ಗಂಟೆ ಆಯಸ್ಸು ಮಾತ್ರ ಉಳಿದಿದೆ ಎಂದು ಕುಟಂಬಸ್ಥರಿಗೆ ಹೇಳಿದ್ದಾರೆ. ಆದರೆ ಅಚ್ಚರಿ ಎಂಬಂತೆ 13 ದಿನದಲ್ಲಿ ವೃದ್ಧೆ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಮುಂಬೈ(ಏ.26): ಕರೋನಾ 2ನೇ ಅಲೆ ಎಲ್ಲಾ ವಯಸ್ಸಿನವರನ್ನೂ ಕಾಡುತ್ತಿದೆ. ಹಲವು ಯುವಕರೂ ಕೊರೋನಾಗೆ ಬಲಿಯಾಗಿದ್ದಾರೆ. ಅಷ್ಟರ ಮಟ್ಟಿಗೆ ಕೊರೋನಾ ಭಾರತವನ್ನು ಕಂಗೆಡಿಸಿದೆ. ಇದರ ನಡುವೆ ನಮ್ಮೆಲ್ಲ ಆತ್ಮಸ್ಥೈರ್ಯ ಹೆಚ್ಚಿಸುವ ಸುದ್ದಿಯೊಂದಿದೆ. ಕೊರೋನಾ ವಿರುದ್ಧ ಹೋರಾಡಿದ ಮುಂಬೈನ ಡೊಂಬಿವಿಲಿ ನಿವಾಸಿ  75 ವರ್ಷ ಶೈಲಜಾ ನಾಕ್ವೆ ಕತೆ ಎಲ್ಲರಿಗೂ ಸ್ಪೂರ್ತಿಯಾಗಿದೆ.

ಕೊರೋನಾ ಎದುರಿಸಲು ಸೇನಾ ಪಡೆ ಸಿದ್ಧತೆ ಪರಿಶೀಲಿಸಿದ ಪ್ರಧಾನಿ ಮೋದಿ!.

ಕೊರೋನಾ ಸೋಂಕು ತಗುಲಿ ಶ್ವಾಸಕೋಶವನ್ನೇ ಆವರಿಸಿಬಿಟ್ಟಿತ್ತು. ಇತ್ತ ಡಯಾಬೆಟಿಕ್ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಕೂಡ ಅತೀಯಾಗಿ ಕಾಡುತ್ತಿತ್ತು. ಇನ್ನು ಆಮ್ಲಜನಕ ಪ್ರಮಾಣ ಶೇ.69ಕ್ಕೆ ಇಳಿದಿತ್ತು. ತೀವ್ರ ಅಸ್ವಸ್ಥಗೊಂಡ ಶೈಲಜಾ ನಾಕ್ವೆಯನ್ನು ಕುಟುಂಬಸ್ಥರು ಘಾಟ್‌ಕೂಪರ್‌ನ ಸೋನಾಗ್ರ ಮೆಡಿಕಲ್ ಹಾಗೂ ಸರ್ಜಿಕಲ್ ಆಸ್ಪತ್ರೆಗೆ ದಾಖಲಿಸಿದ್ದರು.

75 ವರ್ಷದ ಶೈಲಜಾ ಅವರನ್ನು ಪರಿಶೀಲಿಸಿದ ವೈದ್ಯರು, ಇದೇ ಪರಿಸ್ಥಿತಿ ಮುಂದುವರಿದರೆ ಗರಿಷ್ಠ 24 ಗಂಟೆ ಮಾತ್ರ ಆಯಸ್ಸು ಇರಲಿದೆ. ಚೇತರಿಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಎಂದಿದ್ದಾರೆ. ವೈದ್ಯರು ತಮ್ಮ ಕರ್ತವ್ಯ ಮುಂದುವರಿಸಿದ್ದಾರೆ. 

ಚುನಾವಣಾ ಆಯೋಗದ ವಿರುದ್ಧ ಕೊಲೆ ಕೇಸ್ - ನ್ಯಾಯಾಲಯ

ತಕ್ಷಣವೇ 6 ಡೊಸೇಡ್ ರೆಮ್ಡಿಸಿವಿರ್ ಲಸಿಕೆ ಬೇಕು ಎಂದಿದ್ದರು. ಸದ್ಯ ಆಸ್ಪತ್ರೆಯಲ್ಲಿ ರೆಮ್ಡಿಸಿವಿರ್ ಲಸಿಕೆ ಇಲ್ಲ ಎಂದಿದ್ದರು. ಹೀಗಾಗಿ ಶೈಲಾಜ ಪುತ್ರ ಪ್ರಶಾಂತ್‌ಗೆ ದಿಕ್ಕೇ ತೋಚದಾಗಿದೆ. ಕೊನೆಗೂ ಪ್ರಯಾಸ ಪಟ್ಟು ಲಸಿಕೆ ಸಂಗ್ರಹಿಸಿ ಆಸ್ಪತ್ರೆಗೆ ನೀಡಿದ್ದರು. ಇತ್ತ ಆಕ್ಸಿಜನ್ ಕೂಡ ಬೇರೆಡೆಯಿಂದ ಒದಗಿಸಲಾಯಿತು.

ಆಸ್ಪತ್ರೆ ದಾಖಲಾದ ದಿನದಿಂದ ದಿನಕ್ಕೆ ಶೈಲಾಜ ಚೇತರಿಸಿಕೊಂಡಿದ್ದಾರೆ. 13 ದಿನಗಳ ಬಳಿಕ ಶೈಲಜಾ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. 13 ದಿನಗಳ ಬಳಿಕ ಶೈಲಜಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಸಾವಿನ ದವಡೆಯಿಂದ ನನ್ನ ತಾಯಿ ಪಾರಾಗಿದ್ದಾರೆ. ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿದ್ದು ನಮ್ಮೆಲ್ಲರಲ್ಲಿ ಸಂತಸ ಮೂಡಿಸಿದೆ ಎಂದು ಪ್ರಶಾಂತ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?