75 ವರ್ಷ ವೃದ್ಧೆ ಕೊರೋನಾ ಗೆದ್ದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ವೈದ್ಯರನ್ನು ಬಿಗಿದಪ್ಪಿ ಕಣ್ಣೀರಿಟ್ಟ ಹೃದಯ ಸ್ಪರ್ಶಿ ವೃದ್ಧೆಯ ಪೋಸ್ಟ್ ವೈರಲ್ ಆಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಕೋಲ್ಕತಾ(ಮೇ.05): ಕೊರೋನಾ ಸೋಂಕು, ಆಕ್ಸಿಜನ್ ಕೊರತೆ, ಸಾವು ಸೇರಿದಂತೆ ಹಲವು ಆತಂಕಕಾರಿ ವಿಚಾರಗಳ ನಡುವೆ ಇಲ್ಲೊಂದು ವಿಚಾರ ಹೃದಯಸ್ವರ್ಶಿಯಾಗಿದೆ. ಕೊರೋನಾ ಕಾರಣ ಆಸ್ಪತ್ರೆ ದಾಖಲಾಗಿದ್ದ 75 ವರ್ಷದ ವೃದ್ಧೆ ಸತತ ಚಿಕಿತ್ಸೆ ಮೂಲಕ ಕೊರೋನಾ ಗೆದ್ದಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ವೃದ್ಧೆ ಚಿಕಿತ್ಸೆ ನೀಡಿದ ವೈದ್ಯರನ್ನು ಬಿಗಿದಪ್ಪಿ ಕಣ್ಮೀರಿಟ್ಟ ಪೋಸ್ಟ್ ವೈರಲ್ ಆಗಿದೆ.
ಕೊರೊನಾ ಗೆದ್ದ ರಾಯಚೂರಿನ ಮುತ್ತಜ್ಜಿಯ ಒಳ್ಳೇ ಕತೆ.
ಕೋಲ್ಕತಾದ 75 ವರ್ಷದ ವೃದ್ಧೆಯನ್ನು ಕೊರೋನಾ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗಿತ್ತು. ವಯಸ್ಸು, ಆರೋಗ್ಯ ಸೇರಿದಂತೆ ಹಲವು ಕಾರಣಗಳಿಂದ ವೃದ್ಧೆಯ ಆರೋಗ್ಯ ಕ್ಷೀಣಿಸಿತ್ತು. ಆದರೆ ಸತತ 10 ದಿನಗಳ ಚಿಕಿತ್ಸೆಯಿಂದ ವೃದ್ಧೆ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಜೀವ 24 ಗಂಟೆ ಮಾತ್ರ ಎಂದಿದ್ದ ಸೋಂಕಿತೆ ಕೊರೋನಾದಿಂದ ಸಂಪೂರ್ಣ ಗುಣಮುಖ!.
ಸಂಪೂರ್ಣ ಗುಣಮುಖರಾದ ವೃದ್ಧೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡವಾಗಿತ್ತು. ಆದರೆ ಡಿಸ್‌ಚಾರ್ಜ್ ವೇಳೆ 10 ದಿನಗಳ ಕಾಲ ವೃದ್ಧೆಗೆ ಚಿಕಿತ್ಸೆ ನೀಡಿದ, ಆರೈಕೆ ಮಾಡಿದ ವೈದ್ಯರನ್ನು ಬಿಗಿದಪ್ಪಿದ ವೃದ್ಧೆ ಕಣ್ಮೀರಿಟ್ಟಿದ್ದಾರೆ. ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಪೋಸ್ಟ್ ವೈರಲ್ ಆಗಿದೆ.
ಹೃದಯ ಸ್ಪರ್ಶಿ ಘಟನೆಗೆ ಎಲ್ಲರ ಮನಸ್ಸು ಗೆದ್ದಿದೆ. ಜೀವ ಉಳಿಸುವ ಕಾರ್ಯ ಮಾಡುತ್ತಿರುವ ವೈದ್ಯ ಹಾಗೂ ಅವರ ಆತ್ಮೀಯ ಆರೈಕೆಗೆ ಎಲ್ಲರೂ ಹ್ಯಾಟ್ಸ್ ಆಫ್ ಹೇಳಿದ್ದಾರೆ.