
ಕೋಲ್ಕತಾ(ಅ.24): ಬಾಂಗ್ಲಾದೇಶದಲ್ಲಿ ಹಿಂದುಗಳು ಮತ್ತು ದೇವಸ್ಥಾನಗಳ ಮೇಲೆ ನಡೆದ ಹಿಂಸಾಚಾರ ಮತ್ತು ದಾಳಿಗಳನ್ನು ಖಂಡಿಸಿ ಇಸ್ಕಾನ್ ವಿಶ್ವಾದ್ಯಂತ ಶನಿವಾರ ಪ್ರತಿಭಟನೆ ನಡೆಸಿತು. ಪಶ್ಚಿಮ ಬಂಗಾಳದ ಮಾಯಾಪುರದಲ್ಲಿರುವ ತಮ್ಮ ಅಂತಾರಾಷ್ಟ್ರೀಯ ಮುಖ್ಯ ಕಚೇರಿ ಸೇರಿದಂತೆ ಜಗತ್ತಿನ 150 ದೇಶಗಳ 700 ಇಸ್ಕಾನ್(ISKCON)ದೇವಾಲಯಗಳಲ್ಲಿ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆ ವೇಳೆ ಸನ್ಯಾಸಿಗಳು ಮತ್ತು ಭಕ್ತರು ಹರಿನಾಮ ಸಂಕೀರ್ತನಗಳನ್ನು ಪಠಿಸಿದರು. ಅಲ್ಲದೆ ಬಾಂಗ್ಲಾದಲ್ಲಿರುವ ಹಿಂದುಗಳಿಗೆ ನ್ಯಾಯಬೇಕು, ಬಾಂಗ್ಲಾದಲ್ಲಿರುವ ಹಿಂದು ದೇಗುಲಗಳನ್ನು ರಕ್ಷಿಸಿ ಮತ್ತು ಹಿಂದುಗಳ ಮೇಲಿನ ಹಿಂಸಾಚಾರವನ್ನು ನಿಲ್ಲಿಸಬೇಕು ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಕೊನೆಗೆ ಬಾಂಗ್ಲಾ ಹಿಂಸಾಚಾರದಲ್ಲಿ ಮಡಿದವರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಯಿತು.
COVID19: ಭಾರತೀಯರ ಜೀವಿತಾವಧಿ 2 ವರ್ಷ ಇಳಿಕೆ
ಭಕ್ತರು ಬೆಳಗ್ಗೆ 10.00 ರಿಂದ ರಾತ್ರಿ 10.00 ರವರೆಗೆ ಪ್ರತಿಭಟಿಸಿ(Protest) ದಿನವಿಡೀ ಪ್ರಾರ್ಥನೆ ನಡೆಸಿದ್ದಾರೆ. ಸಂಜೆ, ಭಕ್ತರು ಬಾಂಗ್ಲಾದೇಶದಲ್ಲಿ(Bangladesh) ಹಿಂಸಾಚಾರದಲ್ಲಿ ಮೃತಪಟ್ಟವರ ನೆನಪಿಗಾಗಿ ಮೇಣದ ಬತ್ತಿಗಳನ್ನು ಬೆಳಗಿಸಿದ್ದಾರೆ.
ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಇಸ್ಕಾನ್‌ನ ರಾಧರಾಂ ದಾಸ್, ಟೋಕಿಯೊದಿಂದ ಟೊರೊಂಟೊವರೆಗೆ, ನಾವು ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದರ ಕುರಿತು ಪ್ರಾರ್ಥನೆ ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ. ಬಾಂಗ್ಲಾದೇಶ ಸರ್ಕಾರವು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ಆಗಿರುವುದರ ಬಗ್ಗೆ ವಿಷಾದವಿದೆ ಎಂದಿದ್ದಾರೆ.
ಪ್ರತಿಭಟನೆಯು ಶಾಂತಿಯುತವಾಗಿ ನಡೆಯುತ್ತದೆ. ಬಾಂಗ್ಲಾದೇಶದಲ್ಲಿ ಬಂಧಿತ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಅವರು ಬಯಸುತ್ತಾರೆ ಎಂದು ದಾಸ್ ಹೇಳಿದ್ದಾರೆ. ಕಳೆದ ವಾರ ಕೊಮಿಲ್ಲಾದ ದುರ್ಗಾಪೂಜಾ ಮಂಟಪದಲ್ಲಿ ಕುರಾನ್ ಪ್ರತಿಯನ್ನು ಇರಿಸಿದ್ದ ಆರೋಪ ಹೊತ್ತಿರುವ ಇಕ್ಬಾಲ್ ಹೊಸೈನ್ ಅವರನ್ನು ಬಾಂಗ್ಲಾದೇಶದ ಪೊಲೀಸರು ಗುರುವಾರ ರಾತ್ರಿ ಕಾಕ್ಸ್ ಬಜಾರ್‌ನಿಂದ ಬಂಧಿಸಿದ್ದಾರೆ.
ಹಿಂದೂಗಳು ತಮ್ಮ ಸಹವರ್ತಿ ಸಮುದಾಯದ ಸದಸ್ಯರು, ಇಸ್ಕಾನ್ ದೇವಾಲಯ ಮತ್ತು ಬಾಂಗ್ಲಾದೇಶದ ಸದಸ್ಯರ ಮೇಲೆ ಹಿಂಸಾತ್ಮಕ ಸರಣಿ ದಾಳಿಗಳಿಂದ ಆಘಾತಕ್ಕೊಳಗಾಗಿದ್ದಾರೆ. ಹಾಗೆಯೇ ದುಃಖಿತರಾಗಿದ್ದಾರೆ ಎಂದು ಇಸ್ಕಾನ್ ವಕ್ತಾರ ಬಿಮಲ್ ಕೃಷ್ಣ ದಾಸ ಈ ಹಿಂದೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ