
ಜಾರ್ಖಂಡ್(ಸೆ.18): ಕರ್ಮ ಪೂಜೆ ಕರಾಳ ಪೂಜೆಯಾದ ಘಟನೆ ಜಾರ್ಖಂಡ್‌ನಲ್ಲಿದೆ. ಜಾರ್ಖಂಡ್ ಬುಡಕಟ್ಟು ಜನಾಂಗದ ಅತ್ಯಂತ ಪ್ರಸಿದ್ಧ ಹಬ್ಬ ಕರ್ಮಪೂಜೆಗೆ ನೀರಿನಲಿ ಮುಳುಗಿದ 7 ಹುಡುಗಿಯರು ದಾರುಣವಾಗಿ ಸಾವನ್ನಪ್ಪಿದ ಘಟನೆ ಲೆತೆಹಾರ್ ಜಿಲ್ಲೆಯ ಬುಕುರು ಗ್ರಾಮದಲ್ಲಿ ನಡೆದಿದೆ.
ಕೃಷಿ ಹೊಂಡದಲ್ಲಿ ಸಿಲುಕಿ ವಿದ್ಯಾರ್ಥಿಗಳಿಬ್ಬರ ಸಾವು
ಬುಡುಕಟ್ಟು ಜನಾಂಗದಲ್ಲಿ ಕರ್ಮ ಪೂಜೆ ಅತೀ ದೊಡ್ಡ ಹಬ್ಬವಾಗಿದೆ. ಕರ್ಮ ಪೂಜೆ ಬಳಿಕ ಸ್ನಾನ ಮಾಡುವ ಪರಿಪಾಠವಿದೆ. ಆದರೆ ಈ ವಿಶೇಷ ಪೂಜೆ 7 ಮಂದಿ ಹುಡುಗಿಯರ ಬಾಳಿಗೆ ಅಂತ್ಯ ಹಾಡಿದೆ. 12 ರಿಂದ 20 ವರ್ಷದ 7 ಮಂದಿ ಹುಡುಗಿಯರು ಕೆರೆಯಲ್ಲಿ ಮುಳುಗಿ ಸ್ನಾನ ಮಾಡಲು ತೆರಳಿದ್ದಾರೆ. ಮುಳುಗಿದ ಬಾಲಕಿಯರು ಮತ್ತೆ ಮೇಲೇಳಲೇ ಇಲ್ಲ.
ಪೂಜೆ ಮುಗಿಸಿ ಕೆರೆಗೆ ತೆರಳಿದ 10 ಹುಡುಗಿಯರಲ್ಲಿ ಮೂವರು ಅಪಾಯದಿಂದ ಪಾರಾಗಿದ್ದಾರೆ. ನೀರಿನಲ್ಲಿ ಮುಳುಗಿದ ವೇಳೆ ಇಬ್ಬರು ಹುಡುಗಿಯರು ರಕ್ಷಿಸಲು ಕೂಗಿದ್ದಾರೆ. ಈ ವೇಳೆ ಇತರರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ 7 ಮಂದಿ ನೀರಿನಲ್ಲಿ ಮುಳುಗಿದರೆ, ಮೂವರು ಹುಡುಗಿಯರು ದಡ ಸೇರಿದ್ದಾರೆ. ಈ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಂಜನೇಯ ಸ್ವಾಮಿ ಕಲ್ಯಾಣಿಯಲ್ಲಿ ಬಿದ್ದು 3 ವರ್ಷದ ಬಾಲಕ ಸಾವು
ನಾಲ್ವರು ಹುಡುಗಿಯರು ಸ್ಥಳದಲ್ಲೇ ಸಾವನ್ನಪಿದರೆ, ಇನ್ನುಳಿದ ಮೂವರು ಆಸ್ಪತ್ರೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಘಟನೆ ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ. ಲತೇಹಾರ್ ಜಿಲ್ಲೆಯಲ್ಲಿ ಯುವ ಜೀವಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಆಘಾತ ತಂದಿದೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. 7 ಹುಡುಗಿಯರು ಸಾವನ್ನಪ್ಪಿರುವುದು ತೀವ್ರ ದುಃಖವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಬರಲಿ ಎಂದು ಸೊರೆನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ