ನೀಟ್‌ ಪಾಸ್ ಮಾಡಿ 64ನೇ ವಯಸ್ಸಲ್ಲಿ MBBSಗೆ ಸೇರಿದ ವ್ಯಕ್ತಿ

By Kannadaprabha NewsFirst Published Dec 26, 2020, 11:49 AM IST
Highlights

64ನೇ ವಯಸ್ಸಲ್ಲಿ ವೈದ್ಯ ಕೋರ್ಸಿಗೆ ವ್ಯಕ್ತಿ ಪ್ರವೇಶ! | ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಸಾಹಸ

ಸಂಬಲ್‌ಪುರ್‌ (ಒಡಿಶಾ)(ಡಿ.26): ಉದ್ಯೋಗದಿಂದ ನಿವೃತ್ತಿ ಆದ ಬಳಿಕ ಸಾಮಾನ್ಯವಾಗಿ ಎಲ್ಲರೂ ವಿಶ್ರಾಂತಿಯ ಜೀವನ ಬಯಸುತ್ತಾರೆ. ಆದರೆ, ಒಡಿಶಾದ ಸಂಬಲ್‌ಪುರದ ನಿವೃತ್ತ ಬ್ಯಾಂಕ್‌ ಉದ್ಯೋಗಿಯೊಬ್ಬರು ವೈದ್ಯರಾಗಿ ಸೇವೆ ಸಲ್ಲಿಸಲು 64ನೇ ವಯಸ್ಸಿನಲ್ಲಿ ಎಂಬಿಬಿಎಸ್‌ ಕೋರ್ಸ್‌ಗೆ ಸೇರ್ಪಡೆ ಆಗಿದ್ದಾರೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ನಲ್ಲಿ ಉಪ ಮ್ಯಾನೇಜರ್‌ ಆಗಿ ನಿವೃತ್ತಿ ಹೊಂದಿರುವ 64 ವರ್ಷದ ಜಯ ಕಿಶೋರ್‌ ಪ್ರಧಾನ್‌ ಎಂಬುವರೇ ಕಾಲೇಜಿಗೆ ಪ್ರವೇಶ ಪಡೆದವರು.

ಧರ್ಮಸ್ಥಳ ಎತ್ತಿನ ಗಾಡಿ ಕಾರು ವೈರಲ್‌, ವಿಶ್ವ ವಿಖ್ಯಾತ ಕಂಪನಿಗಳಿಗೆ ಚಾಲೆಂಜ್

1983ರಲ್ಲಿ ಬ್ಯಾಂಕ್‌ ಉದ್ಯೋಗಕ್ಕೆ ಸೇರಿದ್ದ ಜಯ ಕಿಶೋರ್‌ 2016ರಲ್ಲಿ ನಿವೃತ್ತಿ ಆಗಿದ್ದರು. ವೈದ್ಯರಾಗಿ ಬಡವರ ಸೇವೆ ಮಾಡಬೇಕೆಂಬುದು ಕಿಶೋರ್‌ ಕನಸಾಗಿತ್ತು. ಆದರೆ, ವಯಸ್ಸಿನ ಮಿತಿ ದಾಟಿದ ಕಾರಣ ವೈದ್ಯಕೀಯ ಪ್ರವೇಶಕ್ಕೆ ಇರುವ ನೀಟ್‌ ಪರೀಕ್ಷೆಯನ್ನು ಬರೆಯಲು ಅವಕಾಶ ಇರಲಿಲ್ಲ.

ಆದರೆ, 2018ರಲ್ಲಿ ಸುಪ್ರೀಂಕೋರ್ಟ್‌ 25 ವರ್ಷ ಮೇಲ್ಪಟ್ಟವರು ಕೂಡ ನೀಟ್‌ ಪರೀಕ್ಷೆ ಬರೆಯಬಹುದು ಎಂದು ನೀಡಿದ್ದ ತೀರ್ಪು ಜಯಪ್ರಕಾಶ್‌ ಅವರಿಗೆ ವರದಾನವಾಗಿ ಪರಿಣಮಿಸಿದೆ. ನೀಟ್‌ ಪರೀಕ್ಷೆಯನ್ನು ಪಾಸ್‌ ಮಾಡಿರುವ ಅವರೀಗ ಸಂಬಲ್‌ಪುರ್‌ ನಗರದಲ್ಲಿರುವ ವೀರ್‌ ಸುರೇಂದ್ರ ಸಾಯಿ ಮೆಡಿಕಲ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾರೆ.

click me!