ದೇಶದ ಮೊದಲ ಹಾಟ್‌ ಏರ್‌ ಬಲೂನ್‌ ಸಫಾರಿ

By Kannadaprabha News  |  First Published Dec 26, 2020, 10:51 AM IST

ಗಾಳಿಯಲ್ಲಿ ತೇಲಾಡುತ್ತಾ ವನ್ಯಜೀವಿ ವೀಕ್ಷಣೆ | ದೇಶದ ಮೊದಲ ಹಾಟ್‌ ಏರ್‌ ಬಲೂನ್‌ ಸಫಾರಿ


ಉಮರಿಯಾ(ಮಧ್ಯಪ್ರದೇಶ)ಡಿ.26): ಸಾಮಾನ್ಯವಾಗಿ ಅರಣ್ಯ ಇಲಾಖೆಯ ಜೀಪಿನಲ್ಲಿ ಕಾಡು ಪ್ರಾಣಿಗಳ ವೀಕ್ಷಣೆಗಾಗಿ ಸಫಾರಿ ನಡೆಸೋದು ಗೊತ್ತೇ ಇದೆ. ಆದರೆ, ಮಧ್ಯಪ್ರದೇಶದಲ್ಲಿರುವ ವಿಶ್ವಪ್ರಸಿದ್ಧ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರವಾಸಿಗರು ಇನ್ನು ಮುಂದೆ ಆಗಸದ ಎತ್ತರದಿಂದಲೇ ಹುಲಿ, ಸಿಂಹ ಸೇರಿದಂತೆ ಇನ್ನಿತರ ಅರಣ್ಯವಾಸಿಗಳನ್ನು ವೀಕ್ಷಿಸಬಹುದಾಗಿದೆ.

ಹೌದು, ಬಾಂಧವಗಢ ಹುಲಿ ರಕ್ಷಿತಾರಣ್ಯದಲ್ಲಿ ದೇಶದ ಮೊದಲ ಹಾಟ್‌ ಏರ್‌ ಬಲೂನ್‌ ಸಫಾರಿಗೆ ಶುಕ್ರವಾರವಷ್ಟೇ ಚಾಲನೆ ನೀಡಲಾಗಿದ್ದು, ಗಾಳಿಯಲ್ಲಿ ತೇಲಾಡುವ ಪ್ಯಾರಾಚೂಟ್‌ನಂತಿರುವ ವ್ಯವಸ್ಥೆಯಲ್ಲಿ ಕುಳಿತು ಪ್ರವಾಸಿಗರು ತಮ್ಮಿಷ್ಟದ ಪ್ರಾಣಿಗಳಾದ ಹುಲಿ, ಚಿರತೆ, ಕರಡಿ ಸೇರಿದಂತೆ ಇನ್ನಿತರ ವನ್ಯಜೀವಿಗಳನ್ನು ವೀಕ್ಷಿಸಬಹುದಾಗಿದೆ.

Latest Videos

undefined

ಕಿತ್ತಳೆ ಬಣ್ಣದಲ್ಲಿ ಧುಮ್ಮಿಕ್ಕುವ ಜಲಪಾತ ಕಂಡಿದ್ದೀರಾ..? ಈ ನಿಸರ್ಗ ವಿಸ್ಮಯವೇ ಅದ್ಭುತ

ಅಲ್ಲದೆ ಇದೇ ರೀತಿಯ ವ್ಯವಸ್ಥೆಯನ್ನು ಪೆಂಚ್‌, ಕನ್ಹಾ ಮತ್ತು ಪನ್ನಾ ಹುಲಿ ರಕ್ಷಿತಾರಣ್ಯಗಳಿಗೂ ವಿಸ್ತರಿಸುವ ಯೋಜನೆಯಿದೆ ಎಂದು ಮಧ್ಯಪ್ರದೇಶ ಅರಣ್ಯ ಸಚಿವ ವಿಜಯ್‌ ಶಾ ತಿಳಿಸಿದ್ದಾರೆ. ಆಫ್ರಿಕಾದಲ್ಲಿ ಈಗಾಗಲೇ ಇಂತಹ ಸಫಾರಿ ಇದೆ. ಅದೇ ರೀತಿಯ ಅನುಭವವವನ್ನು ಇಲ್ಲೂ ಪಡೆಯಬಹುದು ಎಂದಿದ್ದಾರೆ.

ಈ ಸೇವೆಯನ್ನು ಜೈಪುರ ಮೂಲದ ಸ್ಕೈ ವಾಲ್ಟ್ಜ್ ನಿರ್ವಹಿಸುತ್ತಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಕಂಪನಿಯ ಅಧಿಕಾರಿ ಜೈ ಠಾಕೂರ್ ಹೇಳಿದ್ದಾರೆ.
click me!