ಖಿನ್ನತೆಗೊಳಗಾಗಿ ನಾಣ್ಯ ನುಂಗಿದ ಭೂಪ: ಹೊಟ್ಟೆಯಿಂದ 63 ಕಾಯಿನ್ಸ್ ತೆಗೆದ ವೈದ್ಯರು

Published : Aug 01, 2022, 04:20 PM ISTUpdated : Aug 01, 2022, 04:24 PM IST
ಖಿನ್ನತೆಗೊಳಗಾಗಿ ನಾಣ್ಯ ನುಂಗಿದ ಭೂಪ: ಹೊಟ್ಟೆಯಿಂದ 63 ಕಾಯಿನ್ಸ್  ತೆಗೆದ ವೈದ್ಯರು

ಸಾರಾಂಶ

ರಾಜಸ್ಥಾನದ ಜೋದ್‌ಪುರದಲ್ಲಿ ವ್ಯಕ್ತಿಯೊಬ್ಬ ಬರೋಬರಿ 63 ನಾಣ್ಯಗಳನ್ನು ನುಂಗಿದ್ದು, ವೈದ್ಯರು ಬರೋಬ್ಬರಿ ಎರಡು ದಿನ ಸುಧೀರ್ಘ ಕಾರ್ಯಾಚರಣೆ ನಡೆಸಿ ಆತ ಹೊಟ್ಟೆಯಲ್ಲಿದ್ದ 63 ನಾಣ್ಯಗಳನ್ನು ಹೊರ ತೆಗೆದಿದ್ದಾರೆ.

ರಾಜಸ್ಥಾನದ ಜೋದ್‌ಪುರದಲ್ಲಿ ವ್ಯಕ್ತಿಯೊಬ್ಬ ಬರೋಬರಿ 63 ನಾಣ್ಯಗಳನ್ನು ನುಂಗಿದ್ದು, ವೈದ್ಯರು ಬರೋಬ್ಬರಿ ಎರಡು ದಿನ ಸುಧೀರ್ಘ ಕಾರ್ಯಾಚರಣೆ ನಡೆಸಿ ಆತ ಹೊಟ್ಟೆಯಲ್ಲಿದ್ದ 63 ನಾಣ್ಯಗಳನ್ನು ಹೊರ ತೆಗೆದಿದ್ದಾರೆ. ಎಂಡೋಸ್ಕೋಪಿಕ್ ಪ್ರಕ್ರಿಯೆಯ ಮೂಲಕ ವ್ಯಕ್ತಿಯ ಹೊಟ್ಟೆಯೊಳಗಿದ್ದ 63 ನಾಣ್ಯಗಳನ್ನು ಹೊರ ತೆಗೆಯಲಾಗಿದೆ. ಜೋಧ್‌ಪುರದ ಮಥುರಾ ದಾಸ್ ಮಾಥುರ್ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಈ ಆಪರೇಷನ್‌ ನಡೆದಿದೆ.  ಖಿನ್ನತೆಯ ಸ್ಥಿತಿಯಲ್ಲಿ ವ್ಯಕ್ತಿ ಈ ನಾಣ್ಯಗಳನ್ನು ನುಂಗಿದ್ದಾನೆ ಎಂದು ಹೇಳಲಾಗುತ್ತಿದೆ. 

ಎಂಡೋಸ್ಕೋಪಿಕ್ ನೋಟದ ಸಹಾಯದಿಂದ ಮನುಷ್ಯನ ಹೊಟ್ಟೆಯಲ್ಲಿದ್ದ 63 ನಾಣ್ಯಗಳನ್ನು ವೈದ್ಯರು ತೆಗೆದಿದ್ದಾರೆ. 36 ವರ್ಷದ ವ್ಯಕ್ತಿಯೋರ್ವ  ತೀವ್ರ ಹೊಟ್ಟೆನೋವು ಎಂದು ಬೊಬ್ಬಿಟ್ಟ ನಂತರ ಮನೆಯವರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ವೇಳೆ ಯುವಕ ತಾನು 10 ರಿಂದ 15 ನಾಣ್ಯಗಳನ್ನು ಸೇವಿಸಿದ್ದಾಗಿ ಹೇಳಿದ್ದ. ಆದರೆ ನಾವು ಆತನ ಹೊಟ್ಟೆಯ ಎಕ್ಸ್-ರೇ ನಡೆಸಿದಾಗ, ನಾವು ಲೋಹದ ಉಂಡೆಯನ್ನೇ ನೋಡಿದ್ದೇವೆ ಎಂದು ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ನರೇಂದ್ರ ಭಾರ್ಗವ್ ವಿವರಿಸಿದರು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವೈದ್ಯರ ತಂಡವು ನಂತರ ಅಗತ್ಯ ಉಪಕರಣಗಳನ್ನು ಅಳವಡಿಸಿ  ಶುಕ್ರವಾರ ಈ ನಾಣ್ಯಗಳನ್ನು ತೆಗೆದು ಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಎಂದು ತಿಳಿದು ಬಂದಿದೆ.

ಎರಡು ದಿನಗಳಲ್ಲಿ ಹೊರತೆಗೆದ ನಾಣ್ಯಗಳನ್ನು ಲೆಕ್ಕ ಮಾಡಿದಾಗ ಆತ ಒಟ್ಟು 1 ರೂಪಾಯಿಯ 63 ನಾಣ್ಯಗಳನ್ನು ಸೇವಿಸಿರುವುದು ಪತ್ತೆಯಾಗಿದೆ. ರೋಗಿಯು ಪ್ರಸ್ತುತ ಆರೋಗ್ಯವಾಗಿದ್ದಾರೆ. ಸ್ವಲ್ಪ ಸಮಯದ ನಂತರ ಆತ ಡಿಸ್ಚಾರ್ಜ್ ಆಗಿದ್ದಾರೆ ಎಂದು ವೈದ್ಯರಾದ ಡಾ. ಭಾರ್ಗವ ಹೇಳಿದ್ದಾರೆ. ಉದ್ದೇಶಪೂರ್ವಕ ಇಂತಹ ವಸ್ತುಗಳ ಸೇವನೆಯೂ ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿರುವ ಜನರಲ್ಲಿ ಅಪರೂಪವಾಗಿ ಕಂಡು ಬರುವುದಿಲ್ಲ ಮತ್ತು ಇದು ಸಾಮಾನ್ಯವಾಗಿ ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆಗೆ (BPD) ಸಂಬಂಧಿಸಿದಾಗಿದೆ. ನಾಣ್ಯಗಳನ್ನು ನುಂಗಿದ ರೋಗಿಗೆ ಮನೋವೈದ್ಯಕೀಯ ಸಮಾಲೋಚನೆಯನ್ನು ವೈದ್ಯರು ಶಿಫಾರಸು ಮಾಡಿದ್ದಾರೆ.

Astrology Tips: ಒಂದು ರೂಪಾಯಿ ನಾಣ್ಯದಲ್ಲಿದೆ ಅದೃಷ್ಟ ಬದಲಿಸುವ ಶಕ್ತಿ

ಮೂತ್ರಕೋಶದಲ್ಲಿ ಗ್ಲಾಸ್‌

ಕೆಲ ತಿಂಗಳ ಹಿಂದೆ ಮೂತ್ರನಾಳದ ಸೋಂಕು ಉಂಟಾಗಿದೆ ಎಂದು ಆಸ್ಪತ್ರೆಗೆ ಬಂದ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರಿಗೆ ಶಾಕ್ ಆಗಿತ್ತು. ಏಕೆಂದರೆ ಮಹಿಳೆ ಜನನಾಂಗದಲ್ಲಿ ಗ್ಲಾಸೊಂದು ಪತ್ತೆಯಾಗಿತ್ತು. ಟ್ಯುನಿಷಿಯಾದ 45 ವರ್ಷದ ಮಹಿಳೆಯೊಬ್ಬರು ಮೂತ್ರಕೋಶದಲ್ಲಿ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಒಂದು ವರ್ಷದಿಂದಲೂ ಆಕೆಗೆ ಶೀಘ್ರ ಮೂತ್ರ ಹಾಗೂ ಮೂತ್ರವನ್ನು ನಿಯಂತ್ರಿಸಲಾಗದ ಸಮಸ್ಯೆಯಿಂದ ಬಳಲುತ್ತಿದ್ದಳು. ಅಲ್ಲದೇ ಮೂತ್ರ ತಪಾಸಣೆ ವೇಳೆ ಮೂತ್ರದಲ್ಲಿ ಬಿಳಿ ಹಾಗೂ ಕೆಂಪು ರಕ್ತ ಕಣಗಳಿರುವುದು ಪತ್ತೆಯಾಗಿತ್ತು. ಆದರೆ  ಮೂತ್ರ ಸೋಂಕಾಗಿದ್ದರೆ ಇದು ಇರುವುದು ವಿಶಿಷ್ಟವಾಗಿದೆ. ಅಲ್ಲದೇ ಮೂತ್ರ ವಿಸರ್ಜನೆ ವೇಳೆ ರಕ್ತ ಬರುವುದೇ ಎಂಬುದರ ಬಗ್ಗೆ ಮಹಿಳೆ ತಿಳಿಸಿಲ್ಲ.

ಹೊಸ 1, 2, 5, 10, 20 ರು. ಮುಖಬೆಲೆ ನಾಣ್ಯ ಬಿಡುಗಡೆ!

ನಂತರದಲ್ಲಿ ಮಹಿಳೆಯನ್ನು ಸ್ಕ್ಯಾನಿಂಗ್ ಮಾಡಲಾಗಿದ್ದು, ಸ್ಕ್ಯಾನಿಂಗ್ ವರದಿ ನೋಡಿದ ವೈದ್ಯರಿಗೆ ಶಾಕ್ ಆಗಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಯೋನಿಯಲ್ಲಿಯೇ 8 ಸೆಂ.ಮೀ  ಗಾಜಿನ ಟಂಬ್ಲರ್ ಸಿಕ್ಕಿ ಹಾಕಿಕೊಂಡಿರುವುದನ್ನು ಕಂಡು ವೈದ್ಯರು ಆಘಾತಕ್ಕೊಳಗಾಗಿದ್ದರು. ಈ ಗ್ಲಾಸ್‌ ಅವಳ ಯೋನಿಯಲ್ಲಿ ಮೂತ್ರನಾಳದಲ್ಲಿ ಮೂತ್ರಕೋಶದ ಕಲ್ಲುಗಳ ಜೊತೆಗೆ ಇತ್ತು. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ಮಹಿಳೆಯು ಲೈಂಗಿಕ ಆನಂದಕ್ಕಾಗಿ ಕುಡಿಯುವ ಲೋಟವನ್ನು ಬಳಸಿದ್ದಳು ಇದು ಅಲ್ಲೇ ಸಿಲುಕಿಕೊಂಡು ಅನಾಹುತಕ್ಕೆ ಕಾರಣವಾಯಿತು ಎಂದು ವೈದ್ಯರು ಹೇಳಿದರು. ಈ ಪ್ರಕರಣವನ್ನು ನಂತರ ಸೈನ್ಸ್ ಡೈರೆಕ್ಟ್ ಜರ್ನಲ್‌ನಲ್ಲಿ ಪ್ರಕಟಿಸಲಾಯಿತು. ಮೆಡಿಕಲ್ ಜರ್ನಲ್‌ ಇಂತಹ ಪದಾರ್ಥಗಳನ್ನು 'ಇಂಟ್ರಾ-ವೆಸಿಕ್ಯುಲರ್ ವಿದೇಶಿ ಕಾಯಗಳು' ಎಂದು ವಿವರಿಸುತ್ತದೆ. ಲೈಂಗಿಕ ಅಥವಾ ಕಾಮ ಪ್ರಚೋದನೆಗೆ  ಮೂತ್ರಕೋಶದಲ್ಲಿ ಅವುಗಳ ಬಳಕೆ ಮಾಡಲಾಗಿದೆ ಎಂದು ವರದಿ ಸೂಚಿಸುತ್ತದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ