ಮ್ಯಾಗಿ, ಪೆನ್ಸಿಲ್, ರಬ್ಬರ್‌ ಎಲ್ಲದರ ರೇಟ್‌ ಜಾಸ್ತಿ ಆಗಿದೆ, ಮೋದಿಗೆ ಪತ್ರ ಬರೆದ 5 ವರ್ಷದ ಬಾಲಕಿ!

Published : Aug 01, 2022, 03:49 PM ISTUpdated : Aug 01, 2022, 04:02 PM IST
ಮ್ಯಾಗಿ, ಪೆನ್ಸಿಲ್, ರಬ್ಬರ್‌ ಎಲ್ಲದರ ರೇಟ್‌ ಜಾಸ್ತಿ ಆಗಿದೆ, ಮೋದಿಗೆ ಪತ್ರ ಬರೆದ 5 ವರ್ಷದ ಬಾಲಕಿ!

ಸಾರಾಂಶ

5 ವರ್ಷದ ಬಾಲಕಿಯೊಬ್ಬಳ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಣದುಬ್ಬರ ಏರಿಕೆ ಕುರಿತು ಪ್ರಧಾನಿ ಮೋದಿಗೆ ಈಕೆ ಪತ್ರ ಬರೆದಿದ್ದಾಳೆ. ‘ಪ್ರಧಾನಿ ಅವರೇ, ನನ್ನ ಪೆನ್ಸಿಲ್, ರಬ್ಬರ್ ಮತ್ತು ಮ್ಯಾಗಿ ಬೆಲೆಯನ್ನೂ ಹೆಚ್ಚಿಸಲಾಗಿದೆ’ ಎಂದು ಬಾಲಕಿ ತನ್ನ ಪತ್ರದಲ್ಲಿ ಮುಗ್ದವಾಗಿ ಬರೆದಿದ್ದಾಳೆ. ಪೆನ್ಸಿಲ್‌ ಬೇಕು ಎಂದು ಅಮ್ಮನನ್ನು ಕೇಳಿದರೆ, ಅಮ್ಮ ಈಗ ಹೊಡೆಯುತ್ತಾಳೆ. ಈಗ ನಾನೇನು ಮಾಡಲಿ? ಶಾಲೆಯಲ್ಲಿ ಇತರ ಮಕ್ಕಳು ನನ್ನ ಪೆನ್ಸಿಲ್‌ ಕದಿಯುತ್ತಾರೆ' ಎಂದು ಬರೆದುಕೊಂಡಿದ್ದಾಳೆ.

ನವದೆಹಲಿ (ಆ.1): ಜಾಗತಿಕವಾಗಿ ಹಾಗೂ ದೇಶದಲ್ಲಿ ಆಗುತ್ತಿರುವ ಹಣದುಬ್ಬರ ಸಾಮಾನ್ಯ ಜನರ ಜೀವನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಶ್ರೀಮಂತರಿಗೆ ಇದರ ಪರಿಣಾಮ ಕಡಿಮೆ ಆಗಿದ್ದರೆ, ಬಡವರಿಗೆ ಇದರ ಪರಿಣಾಮ ಹೆಚ್ಚು. ಒಟ್ಟಾರೆಯಾಗಿ ಹಣದುಬ್ಬರ ಎನ್ನುವುದು ಎಲ್ಲರ ಮೇಲೂ ಪರಿಣಾಮ ಬೀಡಿದೆ. ಹೆಚ್ಚುತ್ತಿರುವ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕನೌಜ್‌ನ 5 ವರ್ಷದ ಮುಗ್ಧ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಪೆನ್ಸಿಲ್, ರಬ್ಬರ್‌ ಮತ್ತು ಮ್ಯಾಗಿ ಬೆಲೆ ಏರಿಕೆಯ ಬಗ್ಗೆ ಪ್ರಧಾನಿಗೆ ದೂರು ನೀಡಿದ್ದಾಳೆ. ಕೃತಿ ದುಬೇ ಹೆಸರಿನ 5 ವರ್ಷದ ಬಾಲಕಿ, ಒಂದನೇ ತರಗತಿ ಓದುತ್ತಿದ್ದು, ತನ್ನ ಹಸ್ತಾಕ್ಷರದಲ್ಲಿಯೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.  "ಪ್ರಧಾನಿ, ನೀವು ಸಾಕಷ್ಟು ಹಣದುಬ್ಬರವನ್ನು ಮಾಡಿದ್ದೀರಿ, ನನ್ನ ಪೆನ್ಸಿಲ್ ಮತ್ತು ರಬ್ಬರ್‌ ಅನ್ನು ಸಹ ದುಬಾರಿ ಮಾಡಿದ್ದೀರಿ ಮತ್ತು ಮ್ಯಾಗಿ ಬೆಲೆಯನ್ನು ಕೂಡ ಹೆಚ್ಚು ಮಾಡಿದ್ದೀರಿ. ನಾನೇನಾದರೂ ಹೊಸ ಪೆನ್ಸಿಲ್‌ ಬೇಕು ಎಂದು ಅಮ್ಮನನ್ನು ಕೇಳಿದರೆ, ಆಕೆ ಹೊಡೆಯುತ್ತಾಳೆ. ಈಗ ನಾನೇನು ಮಾಡೋದು? ಶಾಲೆಯಲ್ಲಿ ನನ್ನ ಪೆನ್ಸಿಲ್‌ ಅನ್ನು ಬೇರೆಯವರು ಕದಿಯುತ್ತಾರೆ' ಎಂದು ಮುಗ್ದವಾಗಿ ಬರೆದಿದ್ದಾಳೆ.

ಶಾಲಾ ಬಾಲಕಿಯ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಾಲಕಿಯ ತಂದೆ ವಿಶಾಲ್ ದುಬೆ ವೃತ್ತಿಯಲ್ಲಿ ವಕೀಲರು. ಈ ಪತ್ರ ತನ್ನ ಮಗಳ ಮನ್‌ ಕಿ ಬಾತ್‌ ಎಂದು ಅವರಿ ಹೇಳಿದ್ದಾರೆ. ಇತ್ತೀಚಿಗೆ ಶಾಲೆಯಲ್ಲಿ ಪೆನ್ಸಿಲ್ ಕಾಣೆಯಾಗಿದ್ದಕ್ಕೆ ತಾಯಿ ಗದರಿಸಿದಾಗ ಆಕೆಗೆ ಕೋಪ ಬಂದಿತ್ತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಪತ್ರ ಬರೆದಿದ್ದಾಳೆ ಎನ್ನುತ್ತಾರೆ.

ಈ ಪತ್ರ ಭಾನುವಾರ ಚರ್ಚೆಗೆ ಗ್ರಾಸವಾಯಿತು. ಮಗಳು ಸ್ವಯಂಪ್ರೇರಣೆಯಿಂದ ಪ್ರಧಾನಿಯನ್ನು ಉದ್ದೇಶಿಸಿ ಪತ್ರ ಬರೆದಿದ್ದಾಳೆ ಎಂದು ವಿದ್ಯಾರ್ಥಿ ಕೃತಿಯ ತಾಯಿ ಆರತಿ ಹೇಳಿದ್ದಾರೆ. ಇದೇ ವೇಳೆ ತಂದೆಯ ಮೇಲೆ ಒತ್ತಡ ಹೇರಿ ಪ್ರಧಾನಿ ಮೋದಿಗೆ ಅಂಚೆ ಮೂಲಕ ಪತ್ರ ರವಾನಿಸಿದ್ದಾರೆ. ವಿದ್ಯಾರ್ಥಿನಿ ಕೃತಿ ದುಬೆ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹಣದುಬ್ಬರ ಇನ್ನಷ್ಟು ಹೆಚ್ಚಳವಾಗೋ ಸೂಚನೆ ನೀಡಿದ ಆರ್ ಬಿಐ; ಆಗಸ್ಟ್ ನಲ್ಲಿ ರೆಪೋ ದರದಲ್ಲಿ ಭಾರೀ ಏರಿಕೆ?

ಪ್ರಧಾನಿಗೆ ತಲುಪುವ ನಿಟ್ಟಿನಲ್ಲಿ ಕ್ರಮ: ಛಿಬ್ರಮೌ ಎಸ್‌ಡಿಎಂ ಅಶೋಕ್ ಕುಮಾರ್ ಅವರು ಈ ಪುಟ್ಟ ಹುಡುಗಿಯ ಪತ್ರದ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ತಿಳಿದುಕೊಂಡಿದ್ದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. "ನಾನು ಹುಡುಗಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಿದ್ಧನಿದ್ದೇನೆ ಮತ್ತು ಆಕೆಯ ಪತ್ರವು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದ್ದಾರೆ. ಬೆಲೆ ಏರಿಕೆಯಿಂದ ತನಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿಯವರಿಗೆ ಬರೆದಿರುವ ಈ ಮುಗ್ಧ ಪತ್ರವನ್ನು ಟ್ವಿಟರ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ಜನ ಹಂಚಿಕೊಳ್ಳುತ್ತಿದ್ದಾರೆ.

ಹಬ್ಬಗಳ ಋತು ಶುರು..! ಅಡುಗೆ ಎಣ್ಣೆ ಬೆಲೆಯಲ್ಲಿ 30 ರೂಪಾಯಿ ಇಳಿಕೆ ಮಾಡಿದ ಅದಾನಿ ವಿಲ್ಮರ್‌!

ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಸರ್ಕಾರ: ಇದರ ನಡುವೆ ಹಣದುಬ್ಬರ ವಿಚಾರದಲ್ಲಿ ಸರ್ಕಾರ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚೆಯನ್ನು ಪ್ರಸ್ತಾಪಿಸಲಾಗಿದೆ ಆದರೆ ಇನ್ನೂ ಚರ್ಚೆ ನಡೆದಿಲ್ಲ. ಹಣದುಬ್ಬರದ ಅಂಕಿಅಂಶಗಳ ಕುರಿತು ಮಾತನಾಡುತ್ತಾ, ಜೂನ್ 2022 ರಲ್ಲಿ ಚಿಲ್ಲರೆ ಹಣದುಬ್ಬರ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಜೂನ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರವು 7.01 ಪ್ರತಿಶತದಷ್ಟಿದ್ದರೆ, ಮೇ 2022 ರಲ್ಲಿ ಇದು 7.04 ಪ್ರತಿಶತ ಮತ್ತು ಏಪ್ರಿಲ್‌ ನಲ್ಲಿ ಇದು 7.79 ಪ್ರತಿಶತದಷ್ಟಿತ್ತು. ಅದೇ ಸಮಯದಲ್ಲಿ, ಆಹಾರ ಹಣದುಬ್ಬರ ದರವು ಜೂನ್‌ನಲ್ಲಿ 7.75 ಪ್ರತಿಶತದಷ್ಟಿದೆ, ಇದು ಮೇನಲ್ಲಿ 7.97 ಶೇಕಡಾ, ಆದರೆ ಏಪ್ರಿಲ್‌ನಲ್ಲಿ ಇದು 8.38 ಶೇಕಡಾ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು