ಸಾರಿಯುಟ್ಟು ಪರ್ವತವೇರಿದ 62 ವರ್ಷದ ಬೆಂಗಳೂರಿನ ತರುಣಿ... ವಿಡಿಯೋ ವೈರಲ್

Suvarna News   | Asianet News
Published : Feb 21, 2022, 01:26 PM ISTUpdated : Feb 21, 2022, 01:44 PM IST
ಸಾರಿಯುಟ್ಟು ಪರ್ವತವೇರಿದ 62 ವರ್ಷದ ಬೆಂಗಳೂರಿನ ತರುಣಿ... ವಿಡಿಯೋ ವೈರಲ್

ಸಾರಾಂಶ

ಕೇರಳದ 2ನೇ ಅತೀ ಎತ್ತರದ ಬೆಟ್ಟ ಅಗಸ್ತ್ಯ ಕೂಡಂ ಹಗ್ಗದ ಸಹಾಯದಿಂದ ಬೆಟ್ಟವೇರಿದ 62 ವರ್ಷದ ಮಹಿಳೆ ಬೆಂಗಳೂರಿನ ನಾಗರತ್ನ ಈ ಸಾಹಸ ಮಾಡಿದವರು

ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಅನೇಕರು ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇರುತ್ತಾರೆ. ಈಗ 62 ವರ್ಷದ ಮಹಿಳೆಯೊಬ್ಬರು ತಮ್ಮ ಪುತ್ರನೊಂದಿಗೆ ಪರ್ವತವೇರುವ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಇವರು ಹಗ್ಗದ ಸಹಾಯದಿಂದ ಬೆಟ್ಟ ಹತ್ತುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ನಾಗರತ್ಮಮ್ಮ ಎಂಬುವವರೇ ತಮ್ಮ ವಯಸ್ಸನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಹೀಗೆ ಬೆಟ್ಟವೇರಿ ಅನೇಕರಿಗೆ ಸ್ಪೂರ್ತಿಯಾದವರು. ಇವರು  1,868 ಮೀಟರ್‌  ಎತ್ತರವಿರುವ ಕೇರಳದ ಎರಡನೇ ಅತೀ ಎತ್ತರದ ಬೆಟ್ಟವಾದ ಆಗಸ್ತ್ಯ ಕೂಡಮ್‌ ಅನ್ನು ತಮ್ಮ ಪುತ್ರ ಹಾಗೂ ಆತನ ಸ್ನೇಹಿತನೊಂದಿಗೆ ಏರಿದ್ದಾರೆ. ಹಗ್ಗದ ಸಹಾಯದಿಂದ ಅವರು ಫೆಬ್ರವರಿ 16ರಂದು ಈ ಬೆಟ್ಟವನ್ನು ಏರಿದ್ದಾರೆ ಎಂಬುದು ಅವರು ಮಾಡಿದ ಇನ್ಸ್ಟಾಗ್ರಾಮ್‌ ಪೋಸ್ಟ್‌ನಿಂದ ತಿಳಿದು ಬಂದಿದೆ. 

 

ವಿಷ್ಣು (Vishnu) ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ(Instagram)  ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಗಸ್ತ್ಯ ಕೂಡಂ (Agastya koodam) ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ (Sahyadri mountain range) ಬರುವಂತಹ ಒಂದು ಅತ್ಯಂತ ಎತ್ತರ ಹಾಗೂ ಏರಲು ಕಠಿಣವಾದಂತಹ ಪರ್ವತವಾಗಿದೆ. ಇವರು ನಾಗರತ್ನಮ್ಮ (Nagaratnamma) ಹಗ್ಗದ ಸಹಾಯದಿಂದ ಫೆಬ್ರವರಿ 16 ರಂದು ಇವರು ಈ ಬೆಟ್ಟವನ್ನು ಏರಿದ್ದಾರೆ. ಇವರು ತಮ್ಮ ಪುತ್ರ ಹಾಗೂ ಆತನ ಸ್ನೇಹಿತರೊಂದಿಗೆ ಈ ಬೆಟ್ಟವೇರಲು ಬೆಂಗಳೂರಿನಿಂದ (Bangalore) ಬಂದಿದ್ದರು. ಇದು ಕರ್ನಾಟಕದ (karnataka) ಹೊರಗೆ ಅವರ ಮೊದಲ ಪ್ರವಾಸವಾಗಿದೆ. 

Padmashri Pappammal: ಪದ್ಮಶ್ರೀ ಪಡೆದ 107 ವರ್ಷದ ಸೆಲೆಬ್ರಿಟಿ ಅಜ್ಜಿ ತಮ್ಮ ಬದುಕಿನ ಕತೆ ಹೇಳಿದಾಗ...

ಮದುವೆಯಾದ ನಂತರ ಕಳೆದ 40 ವರ್ಷಗಳಿಂದ ಅವರು ಕುಟುಂಬ ಹಾಗೂ ಜವಾಬ್ದಾರಿಗಳಿಂದ ಬದುಕಿನಲ್ಲಿ ಬಿಡುವಿಲ್ಲದವರಾಗಿದ್ದರು. ಆದರೆ ಈಗ ಮಕ್ಕಳು ಬೆಳೆದಿದ್ದು, ಅವರವರ ಬದುಕಿನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಹೀಗಾಗಿ ಇವರಿಗೆ ಬಿಡುವು ಸಿಕ್ಕಿದ್ದು, ಅವರ ಕನಸ್ಸನ್ನು ನನಸು ಮಾಡುವ ಸಮಯ ಈಗ ಬಂದಿದೆ. ಅವರ ಉತ್ಸಾಹ ಹಾಗೂ ಶಕ್ತಿ ಸಾಮರ್ಥ್ಯಕ್ಕೆ ಸಾಟಿ ಯಾರೂ ಇಲ್ಲ. ಆಕೆ ಪರ್ವತ ಏರಿರುವ ಈ ಸಾಹಸ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವುದರ ಜೊತೆ ಒಂದು ಅವರ ಪಾಲಿನ ಉತ್ಕೃಷ್ಟ ಅನುಭವ ಇದಾಗಿದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

ಈ ಅಜ್ಜಿ ಭಾರಿ ಹುಷಾರು ಮರೆ... 70ಕ್ಕೆ ಡಿವೋರ್ಸ್ 73ಕ್ಕೆ ಹೊಸ ಲವ್‌

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆಕೆಯ ಸಾಹಸವನ್ನು ಅನೇಕರು ಕೊಂಡಾಡಿದ್ದಾರೆ. ಇದೊಂದು ನಂಬಲಸಾಧ್ಯವಾದ ಸಾಹಸ ನೀವು ತುಂಬಾ ಜನರಿಗೆ ಪ್ರೇರಕ ಶಕ್ತಿಯಾಗಿದ್ದೀರಿ. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ, ಧೀರ್ಘಕಾಲ ಬಾಳಿ ಎಂದೆಲ್ಲಾ ಅನೇಕರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. 

ಇದಕ್ಕೂ ಮೊದಲು ಕೇರಳದಲ್ಲೇ (Kerala) 72 ವರ್ಷದ ವೃದ್ಧೆಯೊಬ್ಬರು ಪಾಲಕಾಡ್‌ನ (Palakkad) ಪಾರ್ಕ್‌ವೊಂದರಲ್ಲಿ ಜಿಪ್ಲಿನಿಂಗ್‌ ( ಹಗ್ಗದ ಸಹಾಯದಿಂದ ಒಂದು ಬದಿಯಿಂದ ಮತ್ತೊಂದು ಬದಿಗೆ ಜಾರುತ್ತಾ ತೆರಳುವುದು) ಮಾಡುವ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಮಹಿಳೆ ಬಿಳಿ ಬಣ್ಣದ ಸೀರೆಯನ್ನು ಉಟ್ಟು ಖುಷಿಯಾಗಿ ಜಿಪ್ಲಿನಿಂಗ್ ಮಾಡಿದ್ದರು. 

ಕೆಲವರಿಗೆ ವಯಸ್ಸಾದರೂ ಕಿರಿಯವರಂತೆ ಕಾಣಿಸುತ್ತಾರೆ. ಅಷ್ಟೇ ಲವಲವಿಕೆಯಿಂದಲೂ ಇರುತ್ತಾರೆ. ಅವರು ಮುಪ್ಪನ್ನೇ ಮುಂದೂಡಬಲ್ಲರು.  ಕಿರಿಯರಂತೆ ಕಾಣಿಸುವುದು ಕಷ್ಟವೇನಲ್ಲ. ಬಾಯಿ ಚಪಲವನ್ನು ಹಿಡಿತದಲ್ಲಿಟ್ಟುಕೊಂಡು, ಅಗತ್ಯವಿರುವಷ್ಟು ವ್ಯಾಯಾಮ ಮಾಡಿದರೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸ್ಬೋದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ
ಅನಾರೋಗ್ಯ ಏನಿದ್ದರೂ ವೀಕ್ ಆಫ್‌ನಲ್ಲೇ ಬರಬೇಕು ಸಿಕ್ ಲೀವ್ ಇಲ್ಲ, ನೋವು ತೋಡಿಕೊಂಡ ಉದ್ಯೋಗಿ