Maternity Leave: ಹುಟ್ಟಿದ ಬಳಿಕ ಮಗು ಮೃತಪಟ್ಟರೆ ಮಹಿಳಾ ಸಿಬ್ಬಂದಿಗೆ 60 ದಿನ ಹೆರಿಗೆ ರಜೆ

Published : Sep 03, 2022, 02:10 PM ISTUpdated : Sep 03, 2022, 02:12 PM IST
Maternity Leave: ಹುಟ್ಟಿದ ಬಳಿಕ ಮಗು ಮೃತಪಟ್ಟರೆ ಮಹಿಳಾ ಸಿಬ್ಬಂದಿಗೆ 60 ದಿನ ಹೆರಿಗೆ ರಜೆ

ಸಾರಾಂಶ

ಹುಟ್ಟಿದ ಬಳಿಕ ಮಗು ಮೃತಪಟ್ಟರೆ ಮಹಿಳಾ ಸಿಬ್ಬಂದಿಗೆ 60 ದಿನ ಹೆರಿಗೆ ರಜೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಎಲ್ಲ ಕೇಂದ್ರ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೂ ಇದು ಅನ್ವಯವಾಗಲಿದೆ ಎಂದು ತಿಳಿದುಬಂದಿದೆ. 

ನವದೆಹಲಿ: ಜನನದ ಬಳಿಕ ಮಗು ಮೃತಪಟ್ಟರೂ ಎಲ್ಲ ಮಹಿಳಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೂ (Central Government Employees) 60 ದಿನಗಳ ವಿಶೇಷ ಹೆರಿಗೆ ರಜೆ ನೀಡಲಾಗುವುದು ಎಂದು ಶುಕ್ರವಾರ ಕೇಂದ್ರ ಸರ್ಕಾರ ಘೋಷಿಸಿದೆ. ಮೃತ ಮಗು ಜನನದ ವೇಳೆಯಲ್ಲೇ (Still Birth) ಅಥವಾ ಮಗುವಿನ ಜನನದ ಬಳಿಕ ಅದು ಮೃತಪಟ್ಟಲ್ಲಿ ತಾಯಿಗಾಗುವ ಆಘಾತವನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರಜೆ ನೀಡಲಾಗುವುದು. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಜತೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (Department of Personnel and Training) ತಿಳಿಸಿದೆ. 'ಕೇಂದ್ರ ಸರ್ಕಾರಿ ಮಹಿಳಾ ಉದ್ಯೋಗಿಯು ಈಗಾಗಲೇ ಹೆರಿಗೆ ರಜೆ ಮೇಲಿದ್ದರೆ ಅವರು ಮಗುವಿನ ಮೃತ್ಯುವಿಗಿಂತ ಮೊದಲು ಪಡೆದ ರಜೆಯನ್ನು ಅವರು ಖಾತೆಯಲ್ಲಿದ್ದ ಬೇರೆ ರಜೆಯಾಗಿ ಪರಿವರ್ತಿಸಬೇಕು. ಇದಕ್ಕಾಗಿ ಯಾವುದೇ ವೈದ್ಯಕೀಯ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಬಾರದು. ಮಗುವಿನ ಮೃತ್ಯು ಬಳಿಕ 60 ದಿನಗಳ ವಿಶೇಷ ಹೆರಿಗೆ ರಜೆ (Special Maternity Leave) ನೀಡಬೇಕು. ಅದೇ ರೀತಿ ಮಹಿಳಾ ಸಿಬ್ಬಂದಿ ಮೊದಲೇ ಹೆರಿಗೆ ರಜೆ ಮೇಲಿರದಿದ್ದರೂ, ಅವರಿಗೆ ಮಗುವಿನ ಮೃತ್ಯು ಬಳಿಕ 60 ದಿನಗಳ ವಿಶೇಷ ಹೆರಿಗೆ ರಜೆ ಸೌಲಭ್ಯವನ್ನು ಒದಗಿಸಬೇಕು’ ಎಂದು ಇಲಾಖೆ ಸೂಚಿಸಿದೆ.

ಮಗು ಹುಟ್ಟಿದ 28 ದಿನಗಳ ಅವಧಿಯಲ್ಲಿ ಮೃತಪಟ್ಟರೆ ಅಥವಾ 28 ವಾರಗಳ ಗರ್ಭಧಾರಣೆಯ ಬಳಿಕ ಮಗು ಜೀವಂತವಾಗಿರುವ ಯಾವ ಲಕ್ಷಣಗಳಿಲ್ಲದೆ ಜನಿಸಿದರೆ ಅದನ್ನು ಮೃತ ಮಗು ಎಂದು ಪರಿಗಣಿಸಿ ಈ ರಜೆ ಸೌಲಭ್ಯ ಒದಗಿಸಲಾಗುವುದು. ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗೆ 2ಕ್ಕಿಂತ ಕಡಿಮೆ ಜೀವಂತ ಮಕ್ಕಳಿದ್ದಲ್ಲಿ ಹಾಗೂ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (Central Government Health Scheme) (CGHS) ಯಲ್ಲಿ ದಾಖಲಾಗಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಮಗುವಿನ ಹೆರಿಗೆ ಮಾಡಿಸಿಕೊಂಡಿರಬೇಕು. ಒಂದು ವೇಳೆ, ಈ ಯೋಜನೆಯಲ್ಲಿ ಪಟ್ಟಿಮಾಡಲಾದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಲ್ಲಿ, ಅದೂ ತುರ್ತು ಹೆರಿಗೆಯ ಸಂದರ್ಭದಲ್ಲಿ, ತುರ್ತು ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ. 

ಹೊಸ ತಾಯಂದಿರಿಗೆ ಪ್ರತಿ ತಿಂಗಳು ₹7000, 26 ವಾರಗಳ ಹೆರಿಗೆ ರಜೆ: ಭಾರ್ತಿ ಏರಟೆಲ್‌

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT), ಶುಕ್ರವಾರ ಹೊರಡಿಸಿದ ಕಚೇರಿ ಮೆಮೊರಾಂಡಮ್‌ನಲ್ಲಿ, ಸತ್ತ ಮಗುವಿಗೆ ಜನ್ಮ ನೀಡುವ ಉದ್ಯೋಗಿಗೆ ರಜೆ ಅಥವಾ ಹೆರಿಗೆ ರಜೆ ನೀಡುವ ಬಗ್ಗೆ ಸ್ಪಷ್ಟೀಕರಣಕ್ಕಾಗಿ ವಿನಂತಿಸುವ ಹಲವಾರು ಉಲ್ಲೇಖಗಳು ಅಥವಾ ಪ್ರಶ್ನೆಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದೆ. ಈ ಹಿನ್ನೆಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ತೆಗೆದುಕೊಂಡ ನಿರ್ಧಾರವನ್ನು ಪ್ರಕಟಿಸಿದ ಡಿಒಪಿಟಿ, ತಾಯಿಯ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುವ ಮಗುವಿನ ಜನನದ ನಂತರ ಅಥವಾ ಮಗುವಿನ ಮರಣದ ಕಾರಣದಿಂದ ಉಂಟಾಗುವ ಸಂಭಾವ್ಯ ಭಾವನಾತ್ಮಕ ಆಘಾತವನ್ನು ಗಮನದಲ್ಲಿಟ್ಟುಕೊಂಡು ಹೇಳಿದೆ. ಈಗ "ಮಹಿಳಾ ಕೇಂದ್ರ ಸರ್ಕಾರಿ ನೌಕರರಿಗೆ ಜನನ/ಹೆರಿಗೆಯಾದ ಕೂಡಲೇ ಮಗು ಮೃತಪಟ್ಟರೆ ಅವರಿಗೆ 60 ದಿನಗಳ ವಿಶೇಷ ಹೆರಿಗೆ ರಜೆ" ನೀಡಲು ನಿರ್ಧರಿಸಲಾಗಿದೆ. 

"ಭಾರತೀಯ ಒಕ್ಕೂಟದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಾಗರಿಕ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡ ಸರ್ಕಾರಿ ನೌಕರರು.. ಶುಕ್ರವಾರದಿಂದ ಜಾರಿಗೆ ಬರುವಂತೆ, ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ. ಆದರೆ, ಹಿಂದಿನ ಪ್ರಕರಣಗಳು, ಆಯಾ ಸಚಿವಾಲಯಗಳು/ಇಲಾಖೆಗಳಲ್ಲಿ ಇತ್ಯರ್ಥವಾಗಿದ್ದರೂ, ಮತ್ತೆ ತೆರೆಯುವ ಅಗತ್ಯವಿಲ್ಲ,’’ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸ್ಪಷ್ಟಪಡಿಸಿದೆ.

Pregnancy Tips: ಪತ್ನಿಯ ಹೆರಿಗೆ ಸಮಯದಲ್ಲಿ ಪುರುಷರಿಗೆ ಪೆಟರ್ನಿಟಿ ಲೀವ್. ಇದು ನಿಮ್ಗೆ ಗೊತ್ತಿತ್ತಾ ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!