ಬರ್ತ್‌ಡೇ ಫೋಟೋ ತೆಗೆವ ವೇಳೆ ಡ್ಯಾಂಗೆ ಬಿದ್ದು 4 ಮಕ್ಕಳು ಸೇರಿ 6 ಸಾವು!

Published : Apr 18, 2021, 10:55 AM ISTUpdated : Apr 18, 2021, 12:19 PM IST
ಬರ್ತ್‌ಡೇ ಫೋಟೋ ತೆಗೆವ ವೇಳೆ ಡ್ಯಾಂಗೆ ಬಿದ್ದು 4 ಮಕ್ಕಳು ಸೇರಿ 6 ಸಾವು!

ಸಾರಾಂಶ

ಹುಟ್ಟುಹಬ್ಬದ ಸಂಭ್ರಮದಲ್ಲಿ ಡ್ಯಾಮ್‌ ಎದುರು ಫೋಟೋ ಕ್ಲಿಕ್ಕಿಸಲು ಹೋಗಿ ನೀರಿಗೆ ಬಿದ್ದರು| ಇಬ್ಬರು ಯುವತಿಯರು ಸೇರಿ 6 ಮಂದಿ ಸಾವು| ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ವಲ್ದೇವಿ ಡ್ಯಾಮ್‌ ಸಮೀಪ ಘಟನೆ 

ನಾಸಿಕ್(ಏ.18)‌: ಹುಟ್ಟುಹಬ್ಬದ ಸಂಭ್ರಮದಲ್ಲಿ ಡ್ಯಾಮ್‌ ಎದುರು ಫೋಟೋ ಕ್ಲಿಕ್ಕಿಸಲು ಹೋಗಿ ನೀರಿಗೆ ಬಿದ್ದು ನಾಲ್ವರು ಮಕ್ಕಳು, ಇಬ್ಬರು ಯುವತಿಯರು ಸೇರಿ 6 ಮಂದಿ ಸಾವಿಗೀಡಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ವಲ್ದೇವಿ ಡ್ಯಾಮ್‌ ಸಮೀಪ ಶುಕ್ರವಾರ ನಡೆದಿದೆ.

ಸೋನಿ ಗೇಮ್‌ (12) ಎಂಬುವವರ ಬರ್ತ್ ಡೇ ಆಚರಿಸಲು 9 ಜನರ ಗುಂಪೊಂದು ಡ್ಯಾಮ್‌ ಬಳಿಗೆ ತೆರಳಿತ್ತು. ಸಂಭ್ರಮಾಚರಣೆಯ ಗ್ರೂಪ್‌ ಫೋಟೋ ಕ್ಲಿಕ್ಕಿಸುವ ವೇಳೆ ಆಯತಪ್ಪಿ ಕೆಲವರು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ಇತರರು ಕೂಡಾ ನೀರು ಪಾಲಾಗಿದ್ದಾರೆ.

ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ. ತಂಡದಲ್ಲಿದ್ದ ಮೂವರು ಸಾವಿನಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮತ್ತು ಶನಿವಾರ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ