
ನವದೆಹಲಿ(ಏ.18): ದೇಶದಲ್ಲಿ ಕೊರೋನಾ 2ನೇ ಅಲೆ ಆರ್ಭಟವೆಂದರೆ ಈಗ ಮುಂಬೈ, ಪುಣೆ, ದಿಲ್ಲಿ, ಬೆಂಗಳೂರಿನಂತಹ ಕೆಲವೇ ಕೆಲವು ಊರುಗಳು ಕಣ್ಣೆದುರಿಗೆ ಬರುತ್ತವೆ. ಆದರೆ ನಿಜವಾಗಿಯೂ ಕೊರೋನಾ ಅಬ್ಬರ ದೇಶದಲ್ಲೇ ಹೆಚ್ಚಿರುವ ನಗರವೆಂದರೆ ಮಹಾರಾಷ್ಟ್ರದ ನಾಸಿಕ್. 6ನೇ ಸ್ಥಾನದಲ್ಲಿರುವ ನಗರ ಬೆಂಗಳೂರು.
ತಲಾ 10 ಲಕ್ಷ ಜನಸಂಖ್ಯೆಯಲ್ಲಿ ಎಷ್ಟುಜನರಿಗೆ ಸೋಂಕು ಬಂದಿದೆ ಎಂಬುದನ್ನು ಆಧರಿಸಿ ನಡೆಸಿದ ಅಧ್ಯಯನದಲ್ಲಿ ಮಹಾರಾಷ್ಟ್ರದ ನಾಸಿಕ್, ಟಾಪ್-10 ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಹೊಸ ಪ್ರಕರಣಗಳನ್ನು ಗಮನಿಸಿದಾಗ ನಾಸಿಕ್‌ನ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 46,050 ಜನರಿಗೆ ಸೋಂಕು ತಾಗಿದೆ.
ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದ ನಾಗಪುರ ಇದೆ. ಇಲ್ಲಿ 10 ಲಕ್ಷ ಜನರಿಗೆ 45,856, ಪುಣೆಯಲ್ಲಿ 36,359, ಮುಂಬೈನಲ್ಲಿ 17,946, ಲಖನೌನಲ್ಲಿ 11,987 ಹಾಗೂ ಬೆಂಗಳೂರಿನಲ್ಲಿ 7,876 ಜನರಿಗೆ ಸೋಂಕು ತಾಗಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಭೋಪಾಲ್, ಇಂದೋರ್, ದಿಲ್ಲಿ ಹಾಗೂ ಪಟನಾ ಇವೆ.
ಪಟ್ಟಿಗಮನಿಸಿದಾಗ ಮೊದಲ 4 ಸ್ಥಾನಗಳನ್ನು ಮಹಾರಾಷ್ಟ್ರದ ನಗರಗಳೇ ಅಲಂಕರಿಸಿವೆ. ಇತರ ರಾಜ್ಯಗಳ ನಗರಗಳೂ ಪಟ್ಟಿಯಲ್ಲಿ ಕಾಣಿಸಿಕೊಂಡು ದೇಶದ ಮೂಲೆ ಮೂಲೆಗಳಲ್ಲೂ ಕೊರೋನಾದ ಅಲೆ ವ್ಯಾಪಿಸಿ ಆಪೋಶನ ತೆಗೆದುಕೊಳ್ಳುತ್ತಿರುವುದು ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ