ಗಡಿ ದಾಟಿ ಬಂದಿದ್ದ ಭಯೋತ್ಪಾದಕರು: ಉಗ್ರರ ಗುಂಡಿಗೆ 5 ಯೋಧರ ಬಲಿ!

Published : Oct 12, 2021, 09:24 AM IST
ಗಡಿ ದಾಟಿ ಬಂದಿದ್ದ ಭಯೋತ್ಪಾದಕರು: ಉಗ್ರರ ಗುಂಡಿಗೆ 5 ಯೋಧರ ಬಲಿ!

ಸಾರಾಂಶ

* ಉಗ್ರರ ಗುಂಡಿಗೆ 5 ಯೋಧರ ಬಲಿ * ಕೆಲ ದಿನಗಳ ಹಿಂದಷ್ಟೇ ಗಡಿ ದಾಟಿ ಬಂದಿದ್ದ ಭಯೋತ್ಪಾದಕರು * ಸೇನೆ ಕಾರ್ಯಾಚರಣೆ ವೇಳೆ ಗುಂಡಿನ ದಾಳಿ: ಸೈನಿಕರ ಸಾವು * ಕಾಶ್ಮೀರದ ಇನ್ನೂ 2 ಕಡೆ ಎನ್‌ಕೌಂಟರ್‌: 2 ಉಗ್ರರು ಹತ

ಜಮ್ಮು(ಅ.12): ಕಣಿವೆ ರಾಜ್ಯ ಕಾಶ್ಮೀರದಲ್ಲಿ(Kashmir) ಉಗ್ರರ ದಾಳಿ ಹೆಚ್ಚುತ್ತಿರುವಾಗಲೇ, ಭಾರತೀಯ ಸೇನೆ(Indian Army) ಭಯೋತ್ಪಾದಕರ ವಿರುದ್ಧ ನಡೆಸಿದ ಕಾರ್ಯಾಚರಣೆ ವೇಳೆ ಐವರು ಯೋಧರು ಹುತಾತ್ಮರಾಗಿರುವ ಘಟನೆ ಸೋಮವಾರ ನಡೆದಿದೆ. ಮತ್ತೆರಡು ಕಡೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಯೋಧರು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಪಸಂಖ್ಯಾತ ಹಿಂದೂ ಸಮುದಾಯದ(Hindu Community) ಮೇಲೆ ಉಗ್ರರು ದಾಳಿ ನಡೆಸುತ್ತಿರುವಾಗಲೇ, ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಒಂದಷ್ಟುಉಗ್ರರು ಗಡಿ ದಾಟಿ ಕೆಲ ದಿನಗಳ ಹಿಂದೆ ಬಂದಿದ್ದಾರೆ ಎಂಬ ಮಾಹಿತಿ ಸೇನೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೂಂಛ್‌(Poonch) ಜಿಲ್ಲೆಯ ಸುರಾನ್‌ಕೋಟೆಯಲ್ಲಿ ನಸುಕಿನ ಜಾವ ಯೋಧರು ಪರಿಶೀಲನೆ ಆರಂಭಿಸಿದರು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ಮಳೆಗೆರೆದಿದ್ದರಿಂದ ಓರ್ವ ಜೂನಿಯರ್‌ ಕಮಿಷನ್ಡ್ ಅಧಿಕಾರಿ ಸೇರಿದಂತೆ ಐವರು ಯೋಧರು ಹುತಾತ್ಮರಾದರು.

ಉಗ್ರರ(Terrorists) ವಿರುದ್ಧ ಯೋಧರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಚಾಮ್ರೇರ್‌ ಅರಣ್ಯದಲ್ಲಿ ಉಗ್ರರ ದಂಡೇ ಇದೆ ಎನ್ನಲಾಗುತ್ತಿದ್ದು, ಅವರು ತಪ್ಪಿಸಿಕೊಂಡು ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.

ಇಬ್ಬರು ಉಗ್ರರು ಹತ:

ಈ ನಡುವೆ ಅನಂತನಾಗ್‌ ಹಾಗೂ ಬಂಡಿಪೊರಾ ಜಿಲ್ಲೆಗಳಲ್ಲೂ ಯೋಧರು ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಉಗ್ರರಿರುವ ಮಾಹಿತಿ ಮೇರೆಗೆ ಅನಂತನಾಗ್‌ ಜಿಲ್ಲೆಯ ಖಾಗುಂಡ್‌ನಲ್ಲಿ ಕಾರ್ಯಾಚರಣೆ ನಡೆಸಿದಾಗ ಎನ್‌ಕೌಂಟರ್‌ ನಡೆದು ಒಬ್ಬ ಉಗ್ರನನ್ನು ಕೊಲ್ಲಲಾಗಿದೆ. ಮತ್ತೊಂದೆಡೆ ಬಂಡಿಪೊರಾ ಜಿಲ್ಲೆಯ ಗುಂಡ್‌ಜಹಾಂಗೀರ್‌ನಲ್ಲಿ ನಡೆದ ಇಂತಹದ್ದೇ ಕಾರ್ಯಾಚರಣೆ ವೇಳೆ ಲಷ್ಕರ್‌ ಎ ತೊಯ್ಬಾ ಉಗ್ರಗಾಮಿಯೊಬ್ಬನನ್ನು ಕೊಲ್ಲಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?