ಸಿಕ್ಕಿಂ-ನೇಪಾಳ ಗಡಿಯಲ್ಲಿ ಭೂಕಂಪನ; 4 ರಾಜ್ಯಗಳ ಸಿಎಂ ಜೊತೆ ಮೋದಿ ತುರ್ತು ಮಾತುಕತೆ!

Published : Apr 05, 2021, 10:05 PM ISTUpdated : Apr 05, 2021, 10:24 PM IST
ಸಿಕ್ಕಿಂ-ನೇಪಾಳ ಗಡಿಯಲ್ಲಿ ಭೂಕಂಪನ; 4 ರಾಜ್ಯಗಳ ಸಿಎಂ ಜೊತೆ ಮೋದಿ ತುರ್ತು ಮಾತುಕತೆ!

ಸಾರಾಂಶ

ಸಿಕ್ಕಿಂ-ನೇಪಾಳ ಗಡಿಯಲ್ಲಿ ಭೂಕಂಪನವಾಗಿದೆ. ಇದರ ತೀವ್ರತೆಗೆ ಅಸ್ಸಾಂ ಹಾಗೂ ಉತ್ತರ ಬಂಗಾಳದಲ್ಲೂ ಭೂಮಿ ಕಂಪಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ

ನವದೆಹಲಿ(ಏ.05): ಸಿಕ್ಕಿಂ-ನೇಪಾಳ ಗಡಿಯಲ್ಲಿ ಇಂದು(ಏ.05) ಭೂಕಂಪನವಾಗಿದೆ. ರಾತ್ರಿ 8.29ರ ವೇಳೆಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದೆ.  ಸಿಕ್ಕಿಂನ ರಾಜಧಾನಿ ಗ್ಯಾಂಗ್ಟೊಕ್‌ನ ಪೂರ್ವ-ಆಗ್ನೇಯ ದಿಕ್ಕಿನಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.

ಹಿಮಾಲಯ ಸಂಕಟ, ಉತ್ತರ ಭಾರತಕ್ಕೆ ಕಾದಿದ್ಯಾ ಕಂಟಕ?

ಭೂಕಂಪನದ ತೀವ್ರತೆದೆ ಉತ್ತರ ಬಂಗಾಳ, ಅಸ್ಸಾಂ ಹಾಗೂ ಬಿಹಾರದಲ್ಲೂ ಭೂಮಿ ಕಂಪಿಸಿದೆ.  ಇನ್ನು ನೇಪಾಳ, ಭೂತಾನ್, ಮೇಘಾಲಯ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. 

ಭೂಕಂಪವು ಮೇಲ್ಮೈಯಿಂದ 10 ಕಿ.ಮೀ ಆಳದಲ್ಲಿ ಅಪ್ಪಳಿಸಿದೆ. ಘಟನೆ ಬೆನಲ್ಲೇ ಸಿಕ್ಕಿಂ, ಅಸ್ಸಾಂ, ಬಿಹಾರ ಹಾಗೂ ಬಂಗಾಳ  ಮುಖ್ಯಮಂತ್ರಿಗಳ ಜೊತೆ ಪ್ರದಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.ಕೇಂದ್ರದಿಂದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana