10 ದಿನದಲ್ಲಿ 4ನೇ ಸೇತುವೆ ಕುಸಿತ - ಆತಂಕದಲ್ಲಿ ಜನರು

Published : Jun 27, 2024, 08:52 PM IST
10 ದಿನದಲ್ಲಿ 4ನೇ ಸೇತುವೆ ಕುಸಿತ - ಆತಂಕದಲ್ಲಿ ಜನರು

ಸಾರಾಂಶ

ಸೇತುವೆ ಕುಸಿತದಿಂದ ಗ್ರಾಮದ 40 ಸಾವಿರ ಜನರು ಸಂಪರ್ಕ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 25 ಲಕ್ಷ ರೂ ವೆಚ್ಚದಲ್ಲಿ 70 ಮೀಟರ್ ಉದ್ದದ, 12 ಮೀಟರ್ ಅಗಲದ ಸೇತುವೆಯನ್ನು ನಿರ್ಮಿಸಲಾಗಿತ್ತು.

ಪಟನಾ: ಕಳೆದ 10 ದಿನಗಳಿಂದ ಬಿಹಾರದಲ್ಲಿ (Bihar) ಆಟಿಕೆಯಂತೆ ಸೇತುವೆಗಳು (bridge collapse) ಕುಸಿಯಲಾರಂಭಿಸಿವೆ. ಇಂದು ಮತ್ತೊಂದು ಸೇತುವೆ ಕುಸಿತವಾಗಿದ್ದು, ಜನರು ಆತಂಕದಲ್ಲಿದ್ದಾರೆ. ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿ 13 ವರ್ಷದ ಸೇತುವೆ ಕುಸಿತ ಕಂಡಿದ್ದು, ನಾಳೆ ಇನ್ಯಾವ ಬ್ರಿಡ್ಜ್ ನೆಲ ಕಚ್ಚಲಿದೆ ಅನ್ನೋ ಆತಂಕದಲ್ಲಿ ಜನರಿದ್ದು, ಕೂಡಲೇ ಅಧಿಕಾರಿಗಳು ಸೇತುವೆಗಳ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಕಿಶನ್‌ಗಂಜ್ ಜಿಲ್ಲೆಯ ಬಹಾದೂರಗಂಜ್ ವ್ಯಾಪ್ತಿಯ ಬಾಂಸಬಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೇತುವೆ ಕುಸಿತದಿಂದ ಗ್ರಾಮದ 40 ಸಾವಿರ ಜನರು ಸಂಪರ್ಕ ಕಳೆದುಕೊಂಡಿದ್ದಾರೆ. 2011ರಲ್ಲಿ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 25 ಲಕ್ಷ ರೂ ವೆಚ್ಚದಲ್ಲಿ 70 ಮೀಟರ್ ಉದ್ದದ, 12 ಮೀಟರ್ ಅಗಲದ ಸೇತುವೆಯನ್ನು ನಿರ್ಮಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ನೀರಿನ ಪ್ರವಾಹಕ್ಕೆ ಸಿಲುಕಿ ಸೇತುವೆ ಕುಸಿತವಾಗಿದೆ ಎಂದು ವರದಿಯಾಗಿದೆ. 

ಸೇತುವೆ ಕುಸಿತದಿಂದ ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುನ್ನೇಚ್ಚರಿಕೆ ಕ್ರಮವಾಗಿ ಸೇತುವೆಗಯ ಎರಡು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸೇತುವೆ ಸಮೀಪದಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಹಿನ್ನೆಲೆ ಅಲ್ಲಿಗೆ ತೆರಳದಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸೇತುವೆ ದುರಸ್ತಿ ಸಂಬಂಧ ಮಾಹಿತಿ ನೀಡಲಾಗಿದೆ.

ಉದ್ಘಾಟನೆಗೆ ದಿನ ಮೊದಲು ಕುಸಿದು ಬಿತ್ತು 12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ

ಸೇತುವೆ ಎರಡು ಬದಿಯಲ್ಲಿ ಕಾವಲುಗಾರರ ನೇಮಕ

ಸೇತುವೆ ಕುಸಿತ ಸಂಬಂಧ ಮೇಲಾಧಿಕಾರಿಗಳಿಗೆ ಪತ್ರ ಬರೆದು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಆ ಮಾರ್ಗದ ಸಂಚಾರ ಸಂಪೂರ್ಣವಾಗಿ ನಿಲ್ಲಿಸಿದ್ದೇವೆ ಎಂದು ಗ್ರಾಮೀಣ ಕಾಮಗಾರಿ ಇಲಾಖೆ (RWD) ಕಾರ್ಯನಿರ್ವಾಹಕ ಎಂಜಿನಿಯರ್ ಶ್ರವಣ್ ಸಾಹ್ನಿ ಹೇಳಿದ್ದಾರೆ. ಸೇತುವೆಯ ಎರಡು ಬದಿಯಲ್ಲಿ ಕಾವಲುಗಾರರನ್ನ ನೇಮಕ ಮಾಡಲಾಗಿದೆ. ಸೇತುವೆ ಸಂಪರ್ಕಿಸುವ ಮಾರ್ಗದಲ್ಲಿ ಮಾಹಿತಿ ಫಲಕ ಸಹ ಅಳವಡಿಸಲಾಗಿದೆ. ಸೇತುವೆಯ ಒಂದು ಭಾಗ ಕುಸಿದಿರುಬ ಕಾರಣ ತುರ್ತು ಲಘು ವಾಹನ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಅಧಿಕಾರಿ ಆಶಿಶ್ ಕುಮಾರ್ ಹೇಳಿದ್ದಾರೆ.

ಸಾಲು ಸಾಲು ಸೇತುವೆಗಳ ಕುಸಿತ 

ಅರಾರಿ ಜಿಲ್ಲೆಯಲ್ಲಿ ಕುಸಿದ ಸೇತುವೆ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಕಿಶನ್‌ಗಂಜ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜೂನ್ 18ರಂದು ಅರಾರಿಯದಲ್ಲಿ ಕಾಮಗಾರಿ ಹಂತದ 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ 183 ಮೀಟರ್ ಉದ್ದದ ಸೇತುವೆ ಕುಸಿದಿತ್ತು. ಜೂನ್ 23ರಂದು ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕಾಲುವೆಗೆ ನಿರ್ಮಿಸಲಾಗುತ್ತಿದ್ದ ಕಾಮಗಾರಿ ಹಂತದ ಸೇತುವೆ ಕುಸಿದಿತ್ತು. ಜೂನ್ 22ರಂದು ಸಿವಾನ್ ಜಿಲ್ಲೆಯಲ್ಲಿ ಕಾಲುವೆಗೆ ನಿರ್ಮಿಸಿದ್ದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ; ಇನ್ಮುಂದೆ ವಾರಕ್ಕೊಂದು ಬ್ರಿಡ್ಜ್ ಬೀಳುತ್ತಾ ಅಂತ ಕೇಳಿದ ಆರ್‌ಜೆಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!