ಇದೀಗ ಓಂ ಬಿರ್ಲಾ ಅವರ ಹೇಳಿಕೆ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗಳು ಶುರುವಾಗಿವೆ,
ನವದೆಹಲಿ: ಇಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Lok sabha speaker Om Birla) ಕಾಂಗ್ರೆಸ್ ಸಂಸದ ದೀಪೇಂದ್ರ ಸಿಂಗ್ ಹೂಡಾ (Congress MP Deepender Singh Hooda) ಅವರಿಗೆ ಕುಳಿತುಕೊಳ್ಳಿ. ಯಾವುದು ಆಕ್ಷೇಪಾರ್ಹ, ಯಾವುದ ಅಲ್ಲ ಎಂಬುದನ್ನು ನನಗೆ ಹೇಳಿಕೊಡಬೇಡಿ ಎಂದು ಮಾತಿನ ಚಾಟಿ ಬೀಸಿದ್ದಾರೆ. ಇದೀಗ ಓಂ ಬಿರ್ಲಾ ಅವರ ಹೇಳಿಕೆ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗಳು ಶುರುವಾಗಿವೆ, ಕಾಂಗ್ರೆಸ್ ಸಂಸದರ ಜೊತೆ ಸಭಾಪತಿಗಳು ಈ ರೀತಿ ಅನುಚಿತವಾಗಿ ವರ್ತಿಸಬಾರದಿತ್ತು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅದೇ ರೀತಿ ಬಿರ್ಲಾ ಅವರು ಉನ್ನತ ಸ್ಥಾನದಲ್ಲಿದ್ದು ಮತ್ತು ಹಿರಿಯರು ಆಗಿದ್ದಾರೆ. ತಿಳಿ ಹೇಳಿದ ಮಾತನ್ನು ವಿವಾದ ಮಾಡುವ ಅವಶ್ಯಕತೆ ಇಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ಸಂಸದರಾಗಿ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ (Congress MP Shashi Tharoor) ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣದ ಬಳಿಕ ಶಶಿ ತರೂರ್ ಜೈ ಸಂವಿಧಾನ ಎಂದು ಹೇಳಿದರು. ಪದಗ್ರಹಣದ ಬಳಿಕ ಸ್ವೀಕರ್‌ಗೆ ಹಸ್ತಲಾಘವ ಮಾಡಿದ ಶಶಿ ತರೂರ್ ಮೊದಲ ಸಾಲಿನಲ್ಲಿ ಕುಳಿತಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆ ಮಾತನಾಡಲು ನಿಂತರು. ಈ ವೇಳೆ ಸ್ಪೀಕರ್ ಓಂ ಬಿರ್ಲಾ, ಸಂವಿಧಾನದ ಹೆಸರನಲ್ಲಿಯೇ ಪ್ರಮಾಣವಚನ ತೆಗೆದುಕೊಳ್ಳುತ್ತಿರುವಾಗ ಮತ್ತೆ ಇದನ್ನು ಹೇಳುವ ಅವಶ್ಯಕತೆ ಇರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಿವಾದಿತ ನಾಯಕ ಸ್ಯಾಮ್ ಪಿತ್ರೋಡ ಮರು ಆಯ್ಕೆ ಕುರಿತು ಮೊದಲೇ ಭವಿಷ್ಯ ನುಡಿದಿದ್ದ ಮೋದಿ!
ಓಂ ಬಿರ್ಲಾ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ದೀಪೇಂದ್ರ ಸಿಂಗ್ ಹೂಡಾ, ಅಧ್ಯಕ್ಷರೇ ನೀವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಬಿರ್ಲಾ, ಯಾವುದು ಆಕ್ಷೇಪಾರ್ಹ, ಆಕ್ಷೇಪಾರ್ಹ ಅಲ್ಲ ಎಂಬುದನ್ನು ನನಗೆ ಹೇಳಿಕೊಡಬೇಡಿ. ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ ಎಂದು ಹೇಳಿದರು.
ಸಂವಿಧಾನದ ಪ್ರತಿ ಹಿಡಿದು ಪದಗ್ರಹಣ
ಬುಧವಾರ ಓಂ ಬಿರ್ಲಾ ಲೋಕಸಭೆಯ ಸ್ಪೀಕರ್ ಆಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ದೀಪೇಂದ್ರ ಸಿಂಗ್ ಹೂಡಾ ಹರಿಯಾಣದ ರೋಹ್ಟಕ್ ಕ್ಷೇತ್ರದ ಸಂಸದರಾಗಿದ್ದಾರೆ, ದೀಪೇಂದ್ರ ಸಿಂಗ್ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಚುನಾವಣೆ ಗೆದ್ದಿದ್ದಾರೆ. ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಐಎನ್‌ಡಿಐಎ ಒಕ್ಕೂಟದ ಬಹುತೇಕ ಸಂಸದರು, ಸಂವಿಧಾನದ ಪ್ರತಿಯನ್ನು ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆಯೂ ರಾಹುಲ್ ಗಾಂಧಿ ಸಂವಿಧಾನದ ಪ್ರತಿಯನ್ನು ತೋರಿಸಿದ್ದರು. ಇದಕ್ಕೆ ಪ್ರತಿಯಾಗಿ ಎನ್‌ಡಿಎ ಸಂಸದರು ಜೈ ಶ್ರೀರಾಮ್ ಅಂತ ಘೋಷಣೆ ಕೂಗಿದ್ದಾರೆ.
18ನೇ ಲೋಕಸಭೆ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಮೊದಲ ಭಾಷಣ, ವಿಪಕ್ಷಗಳ ಅಡ್ಡಿ!
So speaker Om Birla doesn't like it if someone says, "Jai Samvidhan."
That's strange. pic.twitter.com/jL7CjDYJnn