ಜಮ್ಮ ಮತ್ತು ಕಾಶ್ಮೀರದಲ್ಲಿ 4Gನಿಷೇಧ ವಾಪಸ್; ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ ಸರ್ಕಾರ!

By Suvarna NewsFirst Published Aug 11, 2020, 3:38 PM IST
Highlights

ಜಮ್ಮ ಮತ್ತು ಕಾಶ್ಮೀರವನ್ನು ಹೊರತು ಪಡಿಸಿ ಸಂಪೂರ್ಣ ಭಾರತದಲ್ಲಿ 4G ಮೊಬೈಲ್ ಡಾಟಾ ಸೇವೆ ಲಭ್ಯವಿದೆ. ಹಲವು ಕಾರಣಗಳಿಂದ ಕಣಿವೆ ರಾಜ್ಯದಲ್ಲಿ 4G ಮೊಬೈಲ್ ಸೇವೆಯನ್ನು ನಿಷೇಧಿಸಲಾಗಿದ. ಆದರೆ ಇದೀಗ ಕೇಂದ್ರ ಸರ್ಕಾರ ನಿಷೇಧ ವಾಪಸ್ ಪಡೆದಿದೆ.

ಜಮ್ಮ ಮತ್ತು ಕಾಶ್ಮೀರ(ಆ.11): ಸಂಪೂರ್ಣ ಜಮ್ಮ ಮತ್ತು ಕಾಶ್ಮೀರದಲ್ಲಿ 4G ನೆಟ್‌ವರ್ಕ್ ಸೇವೆ ನಿಷೇಧವನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಬಳಿಕ ಜಮ್ಮ ಮತ್ತು ಕಾಶ್ಮೀರದ 2 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ 4 ಜಿ ಸೇವೆ ಆರಂಭಗೊಳ್ಳಲಿದೆ. ಬಳಿಕ ಹಂತ ಹಂತವಾಗಿ ಸಂಪೂರ್ಣ ಜಮ್ಮ ಕಾಶ್ಮೀರಕ್ಕೆ 4ಜಿ ಸೇವೆ ಒದಗಿಸಲಿದ್ದೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ಚುನಾವಣೆಗೆ ನಿಲ್ಲಲ್ಲ' ಓಮರ್ ಶಪಥ..

4ಜಿ ಸೇವೆ ನೀಡಿದರೆ ಜಮ್ಮ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನ ಚಟುವಟಿಕೆ ಸೇರಿದಂತೆ ಹಲವು ನಿಯಮಬಾಹಿರ ಚಟುವಟಿಕೆಗಳು ಹೆಚ್ಚಾಗಲಿದೆ ಅನ್ನೋ ಭದ್ರತಾ ಪಡೆಯ ಸೂಚನೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಹೀಗಾಗಿ ಹಂತ ಹಂತವಾಗಿ 4 ಜಿ ಸೇವೆ ಆರಂಭವಾಗಲಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ 2 ಜಿಲ್ಲೆಗಳಲ್ಲಿ 4ಜಿ ಸೇವೆ ಆರಂಭವಾಗಲಿದೆ ಸುಪ್ರೀಂ ಕೋರ್ಟ್‌ನ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠಕ್ಕೆ  ಸರ್ಕಾರದ ಆಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಹೇಳಿದ್ದಾರೆ.

ಭಾರತ ಅವಮಾನಿಸಲು ಪಾಕಿಸ್ತಾನ 18 ಕುತಂತ್ರ!

ಸಂಪೂರ್ಣ ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ಸೇವೆಯನ್ನು ಚಾಲನೆಗೊಳಿಸು ಪ್ರತಿಕೂಲ ವಾತಾವರಣವಿಲ್ಲ. ಭಯೋತ್ಪಾದನಾ ಚಟುವಟಿಕೆ ಕಡಿಮೆ ಇರುವ 2 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ 4ಜಿ ಸೇವೆ ನಿಷೇಧ ಹಿಂಪಡೆಯಲಾಗುತ್ತಿದೆ ಎಂದಿದ್ದಾರೆ. ಜಮ್ಮ ಮತ್ತು ಕಾಶ್ಮೀರದಲ 4ಜಿ ಸೇವೆ ಆರಂಭಿಸುವ ಕುರಿತು ಭದ್ರತಾ ಪಡೆಯಿಂದ ಮಾಹಿತಿ ಸಂಗ್ರಹಿಸಲಾಗಿದೆ.  

ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ಸೇವೆ ನೀಡುವುದು ಕಷ್ಟದ ಮಾತಲ್ಲ. ಆದರೆ ಪಾಕಿಸ್ತಾನ, ಯಾವುದೇ ಗುಂಪು ಅಥಾವ ವ್ಯಕ್ತಿ ಕಣಿವೆ ರಾಜ್ಯದ ಯುವ ಜನತೆಯನ್ನು ಎತ್ತಿಕಟ್ಟುವ, ದಂಗೆಗೆ ಪ್ರಚೋದಿಸುವ ಕೆಲಸವನ್ನು ಮುಂದುವರಿಸಿ, ಶಾಂತಿ ಕದಡಿದರೆ 4 ಜಿ ಸೇವೆ ಮತ್ತೆ 2ಜಿಯಾಗಲಿದೆ ಎಂದು ಜಮ್ಮ ಮತ್ತು ಕಾಶ್ಮೀರದ ನೂತನ ಲೆಫ್ಟೆನೆಂಟ್ ಗರ್ವನರ್ ಮನೋಜ್ ಸಿನ್ಹ ಹೇಳಿದ್ದಾರೆ.

click me!