ದೆಹಲಿ ಏಮ್ಸ್‌ನಿಂದ ಜಿಗಿದು ಬೆಂಗಳೂರು ವಿದ್ಯಾರ್ಥಿ ಆತ್ಮಹತ್ಯೆ!

Published : Aug 11, 2020, 01:11 PM IST
ದೆಹಲಿ ಏಮ್ಸ್‌ನಿಂದ ಜಿಗಿದು ಬೆಂಗಳೂರು ವಿದ್ಯಾರ್ಥಿ ಆತ್ಮಹತ್ಯೆ!

ಸಾರಾಂಶ

ಬೆಂಗಳೂರು ಮೂಲದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ| 2018ನೇ ಬ್ಯಾಚಿನ ವಿಕಾಸ್‌ ಎಂಬ ಎಂಬಿಬಿಎಸ್‌ ವಿದ್ಯಾರ್ಥಿ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿ

ನವದೆಹಲಿ(ಆ.11): ಬೆಂಗಳೂರು ಮೂಲದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯ ಹಾಸ್ಟೆಲ್‌ನ 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ನಡೆದಿದೆ.

2018ನೇ ಬ್ಯಾಚಿನ ವಿಕಾಸ್‌ ಎಂಬ ಎಂಬಿಬಿಎಸ್‌ ವಿದ್ಯಾರ್ಥಿ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಆಸ್ಪತ್ರೆಯ ವಾರ್ಡಿನಿಂದ ಅರ್ಧ ಗಂಟೆ ವಿರಾಮ ಬಯಸಿದ್ದ. ಏಮ್ಸ್‌ ಹಾಸ್ಟೆಲ್‌ನ 19ನೇ ಮಹಡಿಗೆ ತೆರಳಿ ಅಲ್ಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಏಮ್ಸ್‌ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟಿದ್ದಾನೆ ಪೊಲೀಸ್‌ ಉಪ ಆಯುಕ್ತ ಅತುಲ್‌ ಕುಮಾರ್‌ ಠಾಕೂರ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಲಿಸುತ್ತಿದ್ದ ವಿಮಾನದಿಂದ ಜಿಗಿದ ಪ್ರಯಾಣಿಕ; ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ
'ಯಾ ಅಲ್ಲಾ, ರಸಗುಲ್ಲಾ' ಎಂದ ಹಾಸ್ಯ ನಟರ​ ವಿರುದ್ಧ ಎಫ್​ಐಆರ್​: ಹೈಕೋರ್ಟ್​ ಹೇಳಿದ್ದೇನು?