
ನವದೆಹಲಿ (ಮೇ.23): ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಇ- ಡ್ರೈವ್ ಯೋಜನೆಯಡಿ ಬೆಂಗಳೂರು, ದೆಹಲಿ ಸೇರಿದಂತೆ ದೇಶದ 5 ಪ್ರಮುಖ ನಗರಗಳಿಗೆ ಒಟ್ಟು 11,000 ಎಲೆಕ್ಟಿಕ್ ಬಸ್ ಹಂಚಿಕೆಗೆ ಮುಂದಾಗಿದೆ. ಈ ಪೈಕಿ ಬೆಂಗಳೂರು ಒಂದಕ್ಕೇ ಬಂಪರ್‌ಎಂಬಂತೆ 4500 ಇ ಬಸ್- ಹಂಚಿಕೆಯಾಗಲಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪಿಎಂಇ-ಡ್ರೈವ್ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುಗಡೆ ಮಾಡುವ ಕುರಿತು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ಸಭೆ ನಡೆದಿದ್ದು, ಅದರಲ್ಲಿ 11 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಹಂಚಿಕೆಗೆ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್: 11000 ಸಾವಿರ ಎಲೆಕ್ಟಿಕ್ ಬಸ್‌ಗಳ ಪೈಕಿ ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಗಿಫ್ಟ್ ನೀಡಿದ್ದು, 4500 ಬಸ್ ಹಂಚಿಕೆಗೆ ಮುಂದಾಗಿದ್ದಾರೆ. ಈ ಸಂಬಂಧ ಅವರು ಮಾಹಿತಿ ನೀಡಿದ್ದು, 'ವಿವರವಾದ ಚರ್ಚೆಗಳ ನಂತರ ಪ್ರಧಾನಮಂತ್ರಿ ಇ- ಡ್ರೈವ್ ಯೋಜನೆಯ ಪ್ರಸ್ತುತ ಹಂತದ ಅಡಿಯಲ್ಲಿ ಬೆಂಗಳೂರಿಗೆ 4500, ಹೈದರಾಬಾದ್‌ಗೆ 2000, ದೆಹಲಿ 2800, ಅಹಮದಾಬಾದ್ 1000, ಸೂರತ್‌ಗೆ 600 ಎಲೆಕ್ಟಿಕ್ ಬಸ್‌ಗಳನ್ನು ಒದಗಿಸಲಾಗುತ್ತದೆ' ಎಂದಿದ್ದಾರೆ.
ಜೊತೆಗೆ 'ಸಾರ್ವಜನಿಕ ಸಾರಿಗೆಯನ್ನು ಸ್ವಚ್ಛ, ಸ್ಮಾರ್ಟ್ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಲು ಬೆಂಗಳೂರು, ದೆಹಲಿ ಸೇರಿದಂತೆ ಈ ನಗರಗಳು ಎಲೆಕ್ನಿಕ್ ಬಸ್‌ಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುತ್ತಿವೆ. ಕೇವಲ ಎಲೆಕ್ಟಿಕ್ ಬಸ್‌ಗಳನ್ನು ಮಾತ್ರ ನಾವು ಹಂಚಿಕೆ ಮಾಡುತ್ತಿಲ್ಲ. ಇದರ ಜೊತೆಗೆ ದೇಶದ ಸಾರಿಗೆ ವಲಯದ ಭವಿಷ್ಯವನ್ನು ನಾವೀನ್ಯತೆ ಮತ್ತು ಪರಿಸರ ಪ್ರಜ್ಞೆಯೊಂದಿಗೆ ರೂಪಿಸುತ್ತಿದ್ದೇವೆ.
ರಾಮನಗರ ಹೆಸರು ಬದಲು: ಹಠ ಸಾಧಿಸಿ ಗೆದ್ದ ಡಿಸಿಎಂ ಡಿ.ಕೆ.ಶಿವಕುಮಾರ್
ಕೇಂದ್ರ ಮತ್ತು ತೆಲಂಗಾಣ, ಕರ್ನಾಟಕ, ದೆಹಲಿ, ಗುಜರಾತ್ ಸರ್ಕಾರದ ರಾಜ್ಯಗಳ ನಡುವಿನ ನಿಕಟ ಸಮನ್ವಯದೊಂದಿಗೆ ಇದು ಈಡೇರುತ್ತದೆ' ಎಂದಿದ್ದಾರೆ. ಇನ್ನು ಪಿಎಂ ಇ ಡ್ರೈವ್ ಯೋಜನೆಯಡಿ 2024ರ ಏಪ್ರಿಲ್‌ನಿಂದ 2026ರ ಮಾರ್ಚ್ ತನಕದ 2 ವರ್ಷಗಳ ಅವಧಿಯಲ್ಲಿ ಒಟ್ಟು 10900 ಕೋಟಿ ರು. ವೆಚ್ಚದಲ್ಲಿ 14028 ಎಲೆಕ್ಟಿಕ್ ಬಸ್ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ