ಇಂದು 4 ರಾಜ್ಯಗಳ ಫಲಿತಾಂಶ: ತೆಲಂಗಾಣ ವೀಕ್ಷಕರಾಗಿ ಡಿಕೆಶಿ, ಜಾರ್ಜ್‌ ನೇಮಕ

By Kannadaprabha News  |  First Published Dec 3, 2023, 6:48 AM IST

4 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳಿಗೆ ಕಾಂಗ್ರೆಸ್‌ ವೀಕ್ಷಕರನ್ನು ನೇಮಕ ಮಾಡಲಾಗಿದೆ.


ನವದೆಹಲಿ: 4 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳಿಗೆ ಕಾಂಗ್ರೆಸ್‌ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಈ ವೀಕ್ಷಕರು ನೂತನ ಶಾಸಕಾಂಗ ಪಕ್ಷದ ಸಭೆ ನಡೆಸುವ ವಿಷಯದಲ್ಲಿ ಪಕ್ಷದ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಮತ್ತು ಪಕ್ಷದ ಮುಂದಿನ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಈ ಪೈಕಿ ತೆಲಂಗಾಣದ ವೀಕ್ಷಕರನ್ನಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಇಂಧನ ಸಚಿವ ಕೆ.ಜೆ.ಜಾರ್ಜ್‌, ಡಾ. ಅಜಯ್‌ ಕುಮಾರ್‌, ಕೆ. ಮುರುಳೀಧರನ್‌ ಮತ್ತು ದೀಪಾದಾಸ್‌ ಮುನ್ಷಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.  ಉಳಿದಂತೆ ರಾಜಸ್ಥಾನಕ್ಕೆ ಭೂಪಿಂದರ್‌ ಸಿಂಗ್‌ ಹೂಡಾ, ಮಧುಸೂಧನ್‌ ಮಿಸ್ತ್ರಿ, ಮುಕುಲ್‌ ವಾಸ್ನಿಕ್‌, ಶಕೀಲ್‌ ಅಹಮದ್‌ ಖಾನ್‌ ಅವರನ್ನು ನೇಮಿಸಲಾಗಿದೆ. ಛತ್ತೀಸ್‌ಗಢಕ್ಕೆ ಅಜಯ್‌ ಮಾಕನ್‌, ರಮೇಶ್‌ ಚೆನ್ನಿಥಲ, ಪ್ರೀತಂ ಸಿಂಗ್‌ ಹಾಗೂ ಮಧ್ಯಪ್ರದೇಶಕ್ಕೆ ಅಧೀರ್‌ ರಂಜನ್‌ ಚೌಧರಿ, ಪೃಥ್ವಿರಾಜ್‌ ಚೌಹಾಣ್‌, ರಾಜೀವ್‌ ಶುಕ್ಲಾ ಮತ್ತು ಚಂದ್ರಶೇಖರ್‌ ಹಿಂಡೋರ್‌ ಅವರನ್ನು ನೇಮಿಸಲಾಗಿದೆ.

Tap to resize

Latest Videos

ಆಪರೇಷನ್‌ ತೆಲಂಗಾಣಕ್ಕೆ ಧಾವಿಸಿದ ಡಿಕೆಶಿ ಟೀಮ್‌..!

ತೆಲಂಗಾಣ ಚುನಾವಣೆ -2023 ವಿಐಪಿ ಅಭ್ಯರ್ಥಿಗಳು ಯಾರಾರು ಇಲ್ಲಿದೆ ನೋಡಿ ಮಾಹಿತಿ..

 

click me!