Covid Crisis: ದೇಶದಲ್ಲಿ ಬರೀ 3614 ಜನಕ್ಕೆ ಕೊರೋನಾ: ಸಾರ್ವಕಾಲಿಕ ಕನಿಷ್ಠ

By Girish Goudar  |  First Published Mar 13, 2022, 6:44 AM IST

*   ಮೇ 12, 2020ರ ನಂತರ ದಾಖಲಾದ ಕನಿಷ್ಠ ಪ್ರಮಾಣ
*   ಮೇ 12, 2020ರಲ್ಲಿ 3,604 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದವು
*   ಬೆಂಗಳೂರಲ್ಲಿ ವಾರದಲ್ಲಿ 2ನೇ ಬಾರಿ 100ಕ್ಕಿಂತ ಕಡಿಮೆ ಕೇಸ್‌
 


ನವದೆಹಲಿ(ಮಾ.13):  ದೇಶದಲ್ಲಿ(India) ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟುಕಡಿಮೆಯಾಗಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಕೇವಲ 3,614 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಮೇ 12, 2020ರ ನಂತರ ದಾಖಲಾದ ಕನಿಷ್ಠ ಪ್ರಮಾಣವಾಗಿದೆ. 

ಮೇ 12, 2020ರಲ್ಲಿ 3,604 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದವು. ಇದೇ ಅವಧಿಯಲ್ಲಿ 89 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕುಗಳ ಸಂಖ್ಯೆ 40,559ಕ್ಕೆ ಇಳಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.0.44 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ.0.52 ರಷ್ಟಿದೆ. ಕೋವಿಡ್‌ ಸೋಂಕಿತರ ಚೇತರಿಕೆ ದರವು 98.71ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 179.91 ಕೋಟಿ ಲಸಿಕೆಯ ಡೋಸುಗಳನ್ನು ವಿತರಿಸಲಾಗಿದೆ.

Tap to resize

Latest Videos

undefined

Covid lockdown ಮತ್ತೆ ಕೊರೋನಾ ಸ್ಫೋಟ, ಚೀನಾದಲ್ಲಿ ಕಠಿಣ ಲಾಕ್‌ಡೌನ್ ಜಾರಿ, ಭಾರತಕ್ಕೂ ಆತಂಕ!

136 ಹೊಸ ಕೋವಿಡ್‌ ಕೇಸ್‌: 22 ತಿಂಗಳ ಕನಿಷ್ಠ

ರಾಜ್ಯದಲ್ಲಿ(Karnataka) ಶನಿವಾರ ಕೋವಿಡ್‌ 136 ಪ್ರಕರಣಗಳಷ್ಟೇ ಪತ್ತೆಯಾಗಿದ್ದು, ಇಬ್ಬರು ಮರಣವನ್ನಪ್ಪಿದ್ದಾರೆ. ಇದು 22 ತಿಂಗಳಲ್ಲೇ ಕನಿಷ್ಠ ಪ್ರಕರಣಗಳ ಸಂಖ್ಯೆಯಾಗಿದೆ. 47,476 ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ.0.29 ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. ಮೂರನೇ ಅಲೆಯ ಇಳಿಕೆ ಆರಂಭದ ಬಳಿಕ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ. 0.30ಕ್ಕಿಂತ ಕಡಿಮೆ ಆಗಿದೆ. ಬೆಳಗಾವಿ ಮತ್ತು ಉತ್ತರ ಕನ್ನಡಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಶನಿವಾರ 48,090 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

ವಾರದಲ್ಲಿ 2ನೇ ಬಾರಿ 100ಕ್ಕಿಂತ ಕಡಿಮೆ ಕೇಸ್‌

ಬೆಂಗಳೂರು(Bengaluru) ನಗರದಲ್ಲಿ ಶನಿವಾರ 87 ಮಂದಿಯಲ್ಲಿ ಕೋವಿಡ್‌-19(Covid-19) ದೃಢಪಟ್ಟಿದೆ. 218 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಯಾರೊಬ್ಬರು ಮೃತಪಟ್ಟಿಲ್ಲ.

ಕಳೆದ ಐದು ದಿನದಲ್ಲಿ ಎರಡನೇ ಬಾರಿ ನಗರದಲ್ಲಿ ಕೋವಿಡ್‌ ಸಾವು ವರದಿಯಾಗಿಲ್ಲ. ರಾಜ್ಯದಲ್ಲಿ ಒಟ್ಟು 40,018 ಮಂದಿ ಮೃತಪಟ್ಟಿದ್ದು, ಈ ಪೈಕಿ ಬೆಂಗಳೂರು ನಗರದಲ್ಲೇ 16,943 ಸಾವು ಸಂಭವಿಸಿದೆ. ಆದರೆ ಈಗ ನಗರದಲ್ಲಿಯೂ ಸಾವು ಕಡಿಮೆ ಆಗಿದೆ. ಕೋವಿಡ್‌ ದೈನಂದಿನ ಪ್ರಕರಣ ಕೂಡ ವಾರದಲ್ಲಿ ಎರಡನೇ ಬಾರಿ ನೂರಕ್ಕಿಂತ ಕಡಿಮೆ ವರದಿಯಾಗಿದೆ. ಸುಮಾರು 21 ತಿಂಗಳ ಬಳಿಕ ಇಷ್ಟೊಂದು ಕಡಿಮೆ ಹೊಸ ಪ್ರಕರಣಗಳು ನಗರದಲ್ಲಿ ವರದಿಯಾಗಿದೆ.

14,376 ಮಂದಿ ಕೋವಿಡ್‌ ಪರೀಕ್ಷೆಗೆ(Covid Test) ಒಳಗಾಗಿದ್ದು ಪಾಸಿಟಿವಿಟಿ ದರ ಶೇ. 0.83ಕ್ಕೆ ಕುಸಿದಿದೆ. ಸದ್ಯ 2,097 ಸಕ್ರಿಯ ಪ್ರಕರಣಗಳಿವೆ. 65 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ನಾಲ್ಕು ಕಂಟೈನ್ಮೆಂಟ್‌ ವಲಯಗಳಿವೆ. ಶನಿವಾರ 18,572 ಮಂದಿ ಕೋವಿಡ್‌ ಲಸಿಕೆ(Covid Vaccine) ಪಡೆದಿದ್ದಾರೆ. 1,071 ಮಂದಿ ಮೊದಲ ಡೋಸ್‌, 16,019 ಮಂದಿ ಎರಡನೇ ಡೋಸ್‌ ಮತ್ತು 1,482 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ.

ದೇಶದ ಮೊದಲ ಕೋವಿಡ್‌ ಮರಣಕ್ಕೆ ಇಂದಿಗೆ 2 ವರ್ಷ: ಕೊರೋನಾ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಕಲಬುರಗಿ

ದೇಶಕ್ಕೇ ಬೆಂಗ್ಳೂರು ನಂ.1..!

ಬೆಂಗಳೂರು: ದೇಶದ ಮಹಾನಗರಗಳಲ್ಲಿ ಬೆಂಗಳೂರಲ್ಲಿ(Bengaluru) ಮಾತ್ರ ಸಾವಿರಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಮುಂಚೂಣಿಯಲ್ಲಿದೆ. ದಿನದಿಂದ ದಿನಕ್ಕೆ ಕೋವಿಡ್‌ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದರೂ ನಗರದಲ್ಲಿ ಇನ್ನೂ 2,228 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನವದೆಹಲಿಯಲ್ಲಿ 937, ಚೆನ್ನೈ(Chennai( 499, ಮುಂಬೈ(Mumbai) 405 ಮತ್ತು ಕೋಲ್ಕತ್ತಾದಲ್ಲಿ(Kolkata) 272 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ನಗರದಲ್ಲಿ ಶುಕ್ರವಾರ 122 ಮಂದಿಯಲ್ಲಿ ಕೋವಿಡ್‌-19(Covid-19) ದೃಢಪಟ್ಟಿದ್ದು, ಇಬ್ಬರು ಮೃತರಾಗಿದ್ದಾರೆ(Death). 164 ಮಂದಿ ಚೇತರಿಸಿಕೊಂಡಿದ್ದಾರೆ. 73 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಈವರೆಗೆ 17.80 ಲಕ್ಷ ಮಂದಿಗೆ ಕೋವಿಡ್‌ ಬಂದಿರುವುದು ಖಾತ್ರಿಯಾಗಿದ್ದು, 17.6 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 4 ಸಕ್ರಿಯ ಕಂಟೈನ್ಮೆಂಟ್‌ ವಲಯಗಳಿವೆ. ಬೊಮ್ಮನಹಳ್ಳಿ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ ಮತ್ತು ಯಲಹಂಕದಲ್ಲಿ ತಲಾ ಒಂದು ಕಂಟೈನ್ಮೆಂಟ್‌ ವಲಯ ಇದೆ. ಇನ್ನು ಶುಕ್ರವಾರ 19,615 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.
 

click me!