Temple Demolition 300 ವರ್ಷ ಹಳೆಯ ಹಿಂದೂ ದೇಗುಲ ಧ್ವಂಸ, ರಾಜಸ್ಥಾನ ಸರ್ಕಾರ ವಿರುದ್ಧ ಆಕ್ರೋಶ!

By Suvarna NewsFirst Published Apr 22, 2022, 5:15 PM IST
Highlights
  • 300 ವರ್ಷಗಳ ಇತಿಹಾಸವಿರುದ ಶಿವ ದೇಗುಲ
  • ಬುಲ್ಡೋಜರ್ ಮೂಲಕ ದೇವಸ್ಥಾನ ಕಡವಿದ ಸರ್ಕಾರ
  • ರಾಜಸ್ಥಾನ ಸರ್ಕಾರ ವಿರುದ್ಧ ಬಿಜೆಪಿ ಆಕ್ರೋಶ
     

ರಾಜಸ್ಥಾನ(ಏ.22): ದೇಶದಲ್ಲೀಗ ಬುಲ್ಡೋಜರ್ ಸದ್ದು ಹೆಚ್ಚಾಗುತ್ತಿದೆ. ಗೂಂಡಾ ಹಾಗೂ ಪುಂಡರ ವಿರುದ್ದ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ಬುಲ್ಡೋಜರ್ ಬಳಕೆಯಾದ ಬೆನ್ನಲ್ಲೇ ದೆಹಲಿಯಲ್ಲೂ ಸದ್ದು ಮಾಡಿತ್ತು. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದವರ ಮನೆ ಮೇಲೂ ಬುಲ್ಡೋಜರ್ ಹತ್ತಿಸಲು ಆಗ್ರಹ ಕೇಳಿಬರುತ್ತಿದೆ. ಇದರ ನಡುವೆ ರಾಜಸ್ಥಾನ ಸರ್ಕಾರ ಅಲ್ವಾರ ಜಿಲ್ಲಿಯಲ್ಲಿರುವ 300 ವರ್ಷಗಳ ಹಳೇಯ ಹಿಂದೂ ದೇಗುಲವನ್ನು ಧ್ವಂಸ ಮಾಡಿದೆ. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ಜಾಗ ಅತಿಕ್ರಮ ಪ್ರವೇಶ ಹಾಗೂ ಅನಧಿಕೃತ ಕಟ್ಟಡ ಅನ್ನೋ ಹೆಸರಲ್ಲಿ 300 ವರ್ಷಗಳ ಹಳೇಯ ಶಿವನ ದೇಗುಲವನ್ನು ಸರ್ಕಾರ ಬುಲ್ಡೋಜರ್ ಬಳಸಿ ಕೆಡವಿದೆ. ಇನ್ನು ಅಭಿವೃದ್ಧಿ ಹೆಸರಲ್ಲಿ ಈ ದೇಗಲು ಕೆಡವಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. 

Latest Videos

ದರ್ಗಾ ನವೀಕರಣದ ವೇಳೆ ಹಿಂದೂ ಶೈಲಿಯ ದೇವಸ್ಥಾನ ಪತ್ತೆ!

ರಾಜಸ್ಥಾನ ಸರ್ಕಾರ ನಡೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಾವನೆ, ನಂಬಿಕೆಯನ್ನು ಛಿದ್ರಗೊಳಿಸಿದೆ. ಅಭಿವೃದ್ಧಿ ಹೆಸರಲ್ಲಿ 300 ವರ್ಷಗಳ ಹಳೆಯ ಹಿಂದೂ ಶಿವನ ದೇವಾಲಯವನ್ನು ಧ್ವಂಸಗೊಳಿಸಿದೆ. ಜಹಾಂಗಿಪುರಿ ಹಾಗೂ ಕರೌಲಿಯಲ್ಲಿ ಕಲ್ಲು ತೂರಾಟ ನಡೆಸಿದವರ ಮೇಲೆ ಅನುಕಂಪ ತೋರುವುದು, ಇತ್ತ ಹಿಂದೂಗಳ ದೇವಾಲಗಳನ್ನೇ ಧ್ವಂಸಗೊಳಿಸುವುದು ಕಾಂಗ್ರೆಸ್ ಜ್ಯಾತ್ಯಾತೀತತೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಪ್ರಾಚೀನ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದ ಪೂಜಾರಿ ಹಾಗೂ ಬ್ರಜಭೂಮಿ ವಿಕಾಸ್ ಪರಿಷದ್ ದೇಗುಲ ಧ್ವಂಸ ಮಾಡಿರುವುದರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇತ್ತ ರಾಜಸ್ಥಾನ ಸೇರಿದಂತೆ ದೇಶಾದ್ಯಂತ ರಾಜಸ್ಥಾನ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. 300 ವರ್ಷ ಹಳೆಯ ದೇವಸ್ಥಾನ ಅತಿಕ್ರಮ ಪ್ರವೇಶ, ಅನಧಿಕೃತ ಕಟ್ಟಡ ಹೇಗಾಗುತ್ತೆ? ಈ ದೇವಸ್ಥಾನ ನಿರ್ಮಾಣ ಸಮಯದಲ್ಲಿ ಭಾರತ ಸರ್ಕಾರ, ರಾಜಸ್ಥಾನ ಸರ್ಕಾರವೇ ಇರಲಿಲ್ಲ. ಕಾಂಗ್ರೆಸ್ ಮುಸ್ಲಿಮ್ ಮತಗಳ ಒಲೈಕೆಗಾಗಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿದೆ. ದೇಶದ ಇತಿಹಾಸವನ್ನೇ ತಿರುಚಿದ ಕಾಂಗ್ರೆಸ್ ಇದೀಗ ಅಳಿದು ಉಳಿದಿರುವ ಸಂಸ್ಕೃತಿ, ಪಾರಂಪರಿಕ ಕಟ್ಟಗಳನ್ನು ನಾಶಪಡಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಖತುಬ್ ಮಿನಾರ್ ಪ್ರಾಂಗಣದಲ್ಲಿದ್ದ ಹಿಂದೂ ದೇಗುಲ ಪುನರ್ ನಿರ್ಮಾಣಕ್ಕೆ ವಿಹೆಚ್‌ಪಿ ಆಗ್ರಹ!

ಜಹಾಂಗೀರ್‌ಪುರಿಯಲ್ಲಿ ಬುಲ್ಡೋಜರ್ ಸದ್ದು
ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ಮೇಲೆ ಇತ್ತೀಚೆಗೆ ದಾಳಿ ನಡೆದಿತ್ತು. ಬಳಿಕ ಅಲ್ಲಿ ಹಿಂದೂ-ಮುಸ್ಲಿಂ ಕೋಮುಸಂಘರ್ಷ ಏರ್ಪಟ್ಟಿತ್ತು. ಇದರ ನಡುವೆ, ಬುಧವಾರ ರಾತ್ರಿ ಹೊಸ ಘೋಷಣೆ ಮಾಡಿದ್ದ ದಿಲ್ಲಿ ಮಹಾನಗರ ಪಾಲಿಕೆ, ಜಹಾಂಗೀರ್‌ಪುರಿಯಲ್ಲಿ ಸಾಕಷ್ಟುಅಕ್ರಮ ಕಟ್ಟಡಗಳಿದ್ದು, ಏ.20-21ರಂದು ಅವನ್ನು ಕೆಡವಲಾಗುವುದು ಎಂದು ಘೋಷಿಸಿತ್ತು. ಅದರಂತೆ ಬುಧವಾರ ಬೆಳಗ್ಗೆ ಪೊಲೀಸ್‌ ಭದ್ರತೆಯಲ್ಲಿ 10 ಗಂಟೆ ವೇಳೆಗೆ ತೆರವು ಕಾರ್ಯಾಚರಣೆ ಆರಂಭವಾಯಿತು. ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ ಮಸೀದಿ ಕಟ್ಟಡದ ಕೆಲ ಭಾಗ, ಅಂಗಡಿಗಳನ್ನು ಬುಲ್ಡೋಜರ್‌ ಬಳಸಿ ತೆರವು ಮಾಡಲಾಯಿತು. ಆಸ್ತಿಪಾಸ್ತಿ ಧ್ವಂಸಕ್ಕೆ ಬೆಚ್ಚಿದ ಕೆಲವರು ಮನೆಯ ಸರಂಜಾಮು ಸಾಗಿಸಿ ರಕ್ಷಿಸಿಕೊಳ್ಳುವ ಯತ್ನ ನಡೆಸಿದರು. ಇನ್ನೂ ಕೆಲವರು ಅತ್ತೂ ಕರೆದು ಧ್ವಂಸ ಬೇಡ ಎಂದು ಕೋರಿದರೆ, ಕೆಲವರು ಪ್ರತಿಭಟನೆ ನಡೆಸಿದರು.

ದೆಹಲಿಯಲ್ಲಿ ಹನುಮಾನ್‌ ಜಯಂತಿ ಮೆರವಣಿಗೆಯ ವೇಳೆ ಗಲಭೆ ನಡೆದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಳ್ಳಲಿದೆ. ಈ ಕುರಿತು ಗುರುವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಚ್‌, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ಅಲ್ಲದೆ ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.

click me!