ಪತ್ನಿಯನ್ನು ಶಾಪಿಂಗ್​ಗೆ ಕರೆದೊಯ್ಯದಿದ್ರೆ 3 ವರ್ಷ ಜೈಲು ಶಿಕ್ಷೆ? ಏನಿದು ಹೊಸ ಸುದ್ದಿ? ಇಲ್ಲಿದೆ ಅಸಲಿಯತ್ತು

Published : Feb 18, 2026, 09:50 PM IST
 Shopping

ಸಾರಾಂಶ

ಪತಿಯು ಶಾಪಿಂಗ್‌ಗೆ ಕರೆದೊಯ್ಯುವುದಿಲ್ಲ ಎಂಬುದು ಹಲವು ಪತ್ನಿಯರ ಸಾಮಾನ್ಯ ದೂರು. ಈ ನಡುವೆ, ಪತ್ನಿಯನ್ನು ಶಾಪಿಂಗ್‌ಗೆ ಕರೆದೊಯ್ಯದಿದ್ದರೆ ಗಂಡನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಹೊಸ ಕಾನೂನು ಬಂದಿದೆ ಎಂದು ಹೇಳುವ ವಿಡಿಯೋವೊಂದು ವೈರಲ್ ಆಗಿದೆ. ಇದೇನಿದು ವಿಶೇಷತೆ?

ಹಲವು ಪತ್ನಿಯರ ಅದರಲ್ಲಿಯೂ ಮನೆಯಲ್ಲಿಯೇ ಇರುವ ಮಹಿಳೆಯರ ಸಮಸ್ಯೆ ಒಂದೇ. ಅದೇನೆಂದರೆ ಗಂಡ ತಮಗೆ ಸರಿಯಾಗಿ ಟೈಂ ಕೊಡುತ್ತಿಲ್ಲ, ಶಾಪಿಂಗ್​ಗೆ ಕರೆದುಕೊಂಡು ಹೋಗುತ್ತಿಲ್ಲ, ತಿರುಗಾಡಲು ಕರೆದುಕೊಂಡು ಹೋಗುವುದಿಲ್ಲ ಎನ್ನುವುದೇ. ಅದರಲ್ಲಿಯೂ ಹೊರಗಡೆ ದುಡಿಯುವ ಹಲವು ಮಹಿಳೆಯರಿಗೆ ಮನೆಗೆ ಬಂದು, ಮನೆ ಕೆಲಸ ಮಾಡಿ ಹಾಸಿಗೆ ಮೇಲೆ ಬೀಳುವಷ್ಟರಲ್ಲಿ ಉಸ್ಸಪ್ಪಾ ಎನ್ನುವಂತಾಗುತ್ತದೆ, ಮತ್ತೆ ಮಾರನೆಯ ದಿನ ಯೋಚನೆ. ಇದರ ನಡುವೆಯೇ, ಗಂಡನ ಜೊತೆ ಶಾಪಿಂಗ್​ ಹೋಗುವ ಯೋಚನೆ ಈ ಪೈಕಿ ಕೆಲವರಿಗೆ ಇದ್ದರೆ, ಮತ್ತೆ ಹಲವರಿಗೆ ಆಫೀಸ್​ಗೆ ಹೋಗಿ ಬಂದು ಸುಸ್ತಾಗುವ ಕಾರಣ, ಶಾಪಿಂಗೂ ಬೇಡ, ಏನೂ ಬೇಡ.ಮನೆಯಲ್ಲಿಯೇ ಇದ್ದುಬಿಡೋಣ ಎನ್ನಿಸುವುದು ಉಂಟು.

ಅವಿನಾಭಾವ ಸಂಬಂಧ

ಅದೇನೇ ಇದ್ದರೂ, ಮಹಿಳೆ ಮತ್ತು ಶಾಪಿಂಗ್​ ಎನ್ನುವುದು ಒಂದಕ್ಕೊಂದು ಅವಿನಾಭಾವ ಸಂಬಂಧ ಇರುವಂಥದ್ದು. ಎಷ್ಟೇ ಸುಸ್ತಾದರೂ ಶಾಪಿಂಗ್​ಗೆ ಹೋಗಲು ಮನಸ್ಸು ಹಾತೊರೆಯುವುದು ಉಂಟು. ಆದರೆ ಎಷ್ಟೋ ಮನೆಗಳಲ್ಲಿ ಗಂಡಸರಿಗೆ ಶಾಪಿಂಗ್​ ಎಂದರೆ ಅಲರ್ಜಿ. ಅದರಲ್ಲಿಯೂ ಶಾಪಿಂಗ್​ಗೆ ಹೋದರೆ, ಜೇಬಿಗೆ ಭರ್ಜರಿ ಕತ್ತರಿ ಬೀಳೋದು ಗ್ಯಾರೆಂಟಿ ಎಂದು ಅದರ ಬಗ್ಗೆ ಮನಸ್ಸೇ ಮಾಡುವುದಿಲ್ಲ. ಇದರಿಂದ ಎಷ್ಟೋ ಮನೆಯಲ್ಲಿ ಜಗಳ ಆಗುವುದು ಉಂಟು.

ಸೋಷಿಯಲ್​ ಮೀಡಿಯಾದಲ್ಲಿ ಸದ್ದು

ಹೀಗೆ ಗಂಡನ ಬಗ್ಗೆ ಅಸಮಾಧಾನ ಹಾಕುತ್ತಿರುವ ಮಹಿಳೆಯರಿಗಾಗಿ ಹಾಗೂ ಪತ್ನಿಯನ್ನು ಶಾಪಿಂಗ್​ಗೆ ಕರೆದುಕೊಂಡು ಹೋಗದ ಪತಿಯಂದಿರಿಗಾಗಿಯೇ ವಿಡಿಯೋ ಒಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಂಟೆಂಟ್​ ಕ್ರಿಯೇಟರ್ಸ್​, ಈ ವಿಡಿಯೋ ಅನ್ನು ಫುಲ್​ ಖುಷಿಯಿಂದ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಇದು ಹೊಸ ಕಾನೂನು. ಒಂದು ವೇಳೆ ಪತ್ನಿಯನ್ನು ಶಾಪಿಂಗ್​ಗೆ ಕರೆದುಕೊಂಡು ಹೋಗದಿದ್ದರೆ ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಇರುವಂಥ ಕಾನೂನು ಎಂದು ವಿಡಿಯೋದಲ್ಲಿ ಹೇಳಲಾಗುತ್ತಿದೆ.

ಇಂಥ ಕಾನೂನು ಇದ್ಯಾ?

ಆದರೆ, ಇದರ ಅಸಲಿಯತ್ತೇ ಬೇರೆ. ಅದೇನೆಂದರೆ, ಇಂಥ ಕಾನೂನು ಸದ್ಯಕ್ಕೆ ಭಾರತದಲ್ಲಿ ಎಲ್ಲೂ ಇಲ್ಲ. ಬಹುಶಃ ವಿದೇಶಗಳಲ್ಲಿಯೂ ಇರಲಿಕ್ಕಿಲ್ಲ. ಇವೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿರುವ ಮಹಿಳೆಯರೇ ಸೃಷ್ಟಿ ಮಾಡಿರುವ ಕಾನೂನು. ಮಹಿಳೆಯರಿಗೆ ದೌರ್ಜನ್ಯ ನೀಡಿದರೆ, ಮಾನಸಿಕವಾಗಿ ಕಿರುಕುಳ ನೀಡಿದರೆ, ಅಂಥ ಪತಿಯ ವಿರುದ್ಧ ದೂರು ದಾಖಲು ಮಾಡಿದರೆ ಸತ್ಯಾಸತ್ಯತೆ ಪರೀಕ್ಷಿಸಿ ಶಿಕ್ಷೆ ನೀಡುವ ಕಾನೂನು ಇದೆಯೇ ವಿನಾ ಶಾಪಿಂಗ್​ ಕರೆದುಕೊಂಡು ಹೋಗಿಲ್ಲ, ವಾಕಿಂಗ್​ಗೆ ಕರೆದೊಯ್ದಿಲ್ಲ ಎನ್ನುವ ಕಾರಣಕ್ಕೆ ಶಿಕ್ಷೆ ಆಗುವಂಥ ಕಾನೂನು ಇಲ್ಲ. ಆದ್ದರಿಂದ ಒಂದು ವೇಳೆ ಇಂಥ ವಿಡಿಯೋ ನಿಮಗೂ ಬಂದರೆ, ಪತಿಯನ್ನು ಹೆದರಿಸಲು ಬಳಸಿ ಆದರೆ ಪತಿಯಂದಿರು, ಈ ವಿಡಿಯೋ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೇರೆಯವರ ವಸ್ತುಗಳನ್ನು ನಿಮ್ಮದೆಂದು ಪ್ರದರ್ಶಿಸಬೇಡಿ: ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ವಿವಾದದ ಬಳಿಕ ಸರ್ಕಾರದ ಎಚ್ಚರಿಕೆ
5ನೇ ಮಗುವಿಗೆ 11 ತಿಂಗಳು ತುಂಬುತ್ತಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್