ಇಮ್ಯುನಿಟಿ ವೃದ್ಧಿಸಲು ಲಸಿಕೆ ಡೋಸ್ ನಡುವೆ 3 ತಿಂಗಳ ಅಂತರ ಅಗತ್ಯ: ಆಕ್ಸ್‌ಫರ್ಡ್

By Suvarna NewsFirst Published May 21, 2021, 5:55 PM IST
Highlights
  • ಭಾರತದಲ್ಲಿ ಇತ್ತೀಚೆಗೆ ಡೋಸ್ ನಡುವಿನ ಅಂತರ ಹೆಚ್ಚಿಸಿದ್ದ ಕೇಂದ್ರ ಸರ್ಕಾರ
  • ಪರ ವಿರೋಧಕ್ಕೆ ಕಾರಣವಾಗಿತ್ತು ಅಂತರ ವಿಸ್ತರಣೆ ನಿರ್ಧಾರ
  • ಅಸ್ಟ್ರಝೆನಿಕಾ ಅಭಿವೃದ್ಧಿ ಪಡಿಸಿದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಕಟಣೆ
     

ಇಂಗ್ಲೆಂಡ್(ಮೇ.21):  ದೇಶದಲ್ಲಿ ಕೊರೋನಾ ಲಸಿಕೆ ಅಭಾವ ಸೃಷ್ಟಿಯಾದಂತೆ ಲಸಿಕೆ ಡೋಸ್ ಅಂತರವನ್ನು ಹೆಚ್ಚಿಸಲಾಗಿದೆ. ಇದು ಪರ ವಿರೋಧಕ್ಕೂ ಕಾರಣವಾಗಿದೆ. ಆದರೆ ಕೊರೋನಾ ಅಸ್ಟ್ರಝೆನಿಕಾ ಲಸಿಕೆ ಅಭಿವೃದ್ಧಿ ಪಡಿಸಿರುವ ಆಕ್ಸ್‌ಫರ್ಡ್ ಯುನಿವರ್ಸಿಟಿ ಅಧ್ಯಯನದ ಪ್ರಕಾರ ಲಸಿಕೆ ಡೋಸ್ ನಡುವಿನ ಅಂತರ 3 ತಿಂಗಳಿದ್ದರೆ ಉತ್ತಮ ಎಂದಿದೆ.

ಭಾರತದಲ್ಲಿ ನೀಡಲು ಉದ್ದೇಶಿಸಿರುವ 8 ಲಸಿಕೆ ಕುರಿತು ತಿಳಿಯಬೇಕು ಒಂದಿಷ್ಟು!.

ಆಕ್ಸ್‌ಫರ್ಡ್ ಯುನಿವರ್ಸಿಟಿ ಭಾರತದಲ್ಲಿ ಕೋವೀಶೀಲ್ಡ್ ಲಸಿಕೆ ಅಭಿವದ್ಧಿ ಪಡಿಸಿದೆ. ಇದೀಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಕಟಣೆ ಹಲವರಲ್ಲಿ ನೆಮ್ಮದಿ ತಂದಿದೆ.  ಭಾರತದಲ್ಲಿ ಲಭ್ಯವಿರುವ ಎರಡು ಲಸಿಕೆಗಳಲ್ಲಿ ಒಂದಾದ ಕೋವಿಶೀಲ್ಡ್ ( ಅಸ್ಟ್ರಾಜೆನಿಕಾ ) ಎರಡು ಡೋಸ್ ನಡುವಿನ ಅಂತರ ಮೂರು ತಿಂಗಳಿದ್ದರೆ ಪರಿಣಾಮಕಾರಿ ಎಂದು ಲಸಿಕೆ ಅಭಿವೃದ್ಧಿ ಪಡಿಸಿದ ಸಂಶೋಧರಾದ ಆ್ಯಂಡ್ರೂ ಪೋಲಾರ್ಡ್ ಹಾಗೂ ಸಾರ ಗಿಲ್ಬರ್ಟ್ ಹೇಳಿದ್ದಾರೆ.

ಕೋವ್ಯಾಕ್ಸಿನ್, ಕೋವಿಶೀಲ್ಡ್ ಇವೆರಡರ ನಡುವಿನ ವ್ಯತ್ಯಾಸ, ಅಡ್ಡ ಪರಿಣಾಮ, ವಿಶೇಷತೆ!

ಅಧ್ಯಯನ ವರದಿಯಲ್ಲಿ ಡೋಸ್ ಅಂತರ ಕನಿಷ್ಠ 3 ತಿಂಗಳಿದ್ದರೆ ಉತ್ತಮ, ಗರಿಷ್ಠ 6 ತಿಂಗಳ ವರೆಗೆ 2ನೇ ಡೋಸ್ ಅಂತರ ಹೆಚ್ಚಿಸಿಕೊಳ್ಳಬಹುದು. ಈ ಕುರಿತ ಅಂಕಿ ಅಂಶವನ್ನು ಆಕ್ಸ್‌ಫರ್ಡ್ ಯುನಿವರ್ಸಿಟಿ ಬಹಿರಂಗಪಡಿಸಿದೆ. ಕೊರೋನಾದಿಂದ ಚೇತರಿಸಿಕೊಂಡವರಿಗೆ ಲಸಿಕೆ ನೀಡಲು ಕನಿಷ್ಠ 3 ತಿಂಗಳಾಗಬೇಕು ಎಂದಿದೆ.

click me!