ಇಂದಿನಿಂದ 3 ದಿನ ಕಾಂಗ್ರೆಸ್‌ ಮಹಾಧಿವೇಶನ: ಲೋಕಸಭೆ, ವಿಧಾನಸಭೆ ಚುನಾವಣೆಗೆ ರಣನೀತಿ ಸೃಷ್ಟಿ

Published : Feb 24, 2023, 05:37 AM IST
ಇಂದಿನಿಂದ 3 ದಿನ ಕಾಂಗ್ರೆಸ್‌ ಮಹಾಧಿವೇಶನ:  ಲೋಕಸಭೆ, ವಿಧಾನಸಭೆ ಚುನಾವಣೆಗೆ ರಣನೀತಿ ಸೃಷ್ಟಿ

ಸಾರಾಂಶ

ಸತತ 2 ಲೋಕಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌ ಪಕ್ಷ ಮುಂದಿನ ಚುನಾವಣೆಗೆ ವೇಳೆಗೆ ಬಲವಾದ ಮೈತ್ರಿಕೂಟ ರಚಿಸಲು ಮುಂದಡಿ ಇಟ್ಟಿದೆ.

ರಾಯಪುರ: ಸತತ 2 ಲೋಕಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌ ಪಕ್ಷ ಮುಂದಿನ ಚುನಾವಣೆಗೆ ವೇಳೆಗೆ ಬಲವಾದ ಮೈತ್ರಿಕೂಟ ರಚಿಸಲು ಮುಂದಡಿ ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ರಾಯಪುರದಲ್ಲಿ ಫೆ.24ರಿಂದ 3 ದಿನಗಳ ಸರ್ವಸದಸ್ಯರ ಸಮಾವೇಶವನ್ನು ಆಯೋಜಿಸಿದ್ದು, ಇಲ್ಲಿ ಮುಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಸಂಬಂಧಿಸಿದಂತೆ ರಣನೀತಿ ರೂಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತ್‌ ಜೋಡೋ ಯಾತ್ರೆಯ (Bharat Jodo Yatra) ಯಶಸ್ಸಿನ ಬೆನ್ನಲ್ಲೇ ಈ ಸಮಾವೇಶವನ್ನು ಕಾಂಗ್ರೆಸ್‌ ಆಯೋಜಿಸಿದ್ದು, ಮೊದಲ ದಿನವೇ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾಗಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ (Congress working committee) ಚುನಾವಣೆ ನಡೆಸಬೇಕೆ, ಬೇಡವೇ ಎಂಬುದರ ಕುರಿತಾಗಿ ನಿರ್ಣಯ ಕೈಗೊಳ್ಳಲಾಗುತ್ತದೆ.

ವಿಮಾನದಿಂದ ಇಳಿಸಿ ಕೈ ನಾಯಕ ಪವನ್‌ ಖೇರಾ ಬಂಧನ: ಕಾಂಗ್ರೆಸ್‌ನಿಂದ ಏರ್‌ಪೋರ್ಟ್‌ನಲ್ಲೇ ಪ್ರತಿಭಟನೆ

ಉಳಿದಂತೆ ಈ ವರ್ಷ ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ (Assembly Election) ಚುನಾವಣೆಗಳ ಕುರಿತು ರಣತಂತ್ರ ರೂಪಿಸಲಾಗುತ್ತದೆ. ಈ ಚುನಾವಣೆಗಳ ಗೆಲುವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನೈತಿಕ ಬೆಂಬಲವನ್ನು ನೀಡಲಿದೆ. ಅಲ್ಲದೇ ಪಕ್ಷ ಸಂಘಟನೆಯ ಕುರಿತಾಗಿ ಹಲವು ನೀತಿಗಳನ್ನು ರೂಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಸರ್ವಸದಸ್ಯರ ಸಭೆ ಇದಾಗಿದ್ದು, ದೇಶಾದ್ಯಂತ ಇರುವ 15 ಸಾವಿಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಈ ಸಭೆಯಲ್ಲಿ ಎಐಸಿಸಿಯ 1,338 ಚುನಾಯಿತ ಸದಸ್ಯರು ಮತ್ತು 487 ನಾಮನಿರ್ದೇಶಿತ ಸದಸ್ಯರು, 9,915 ಪ್ರದೇಶ ಕಾಂಗ್ರೆಸ್‌ ಸಮಿತಿಯ ಸದಸ್ಯರು ಮತ್ತು 3 ಸಾವಿರ ನಾಮನಿರ್ದೇಶಿತ ಸದಸ್ಯರು ಭಾಗಿಯಾಗಲಿದ್ದಾರೆ.

ಕಾಂಗ್ರೆಸ್‌ನಿಂದ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್‌ಗೆ ನೀಡದ ಸತ್ಕಾರ ಗಾಂಧಿ ಕುಟುಂಬಕ್ಕೆ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!