Elon Musk: ಜಗತ್ತಿನ ಶ್ರೀಮಂತ ಪುಣೆಯ ಟೆಕ್ಕಿ ಚಡ್ಡಿ ದೋಸ್ತರು!

By Kannadaprabha News  |  First Published Mar 18, 2022, 3:23 AM IST

* ಪುಣೆ ಟೆಕ್ಕಿಗೆ ಮಸ್ಕ್‌ ಜತೆ ನಂಟು!

* ಸ್ವತಃ ಮಸ್ಕ್‌ ಜತೆ ಟ್ವೀಟರ್‌ ಡಿಎಂನಲ್ಲಿ ಸಂವಾದ

* ಟೆಕ್ಕಿ ಪ್ರಣಯ್‌ಗೆ ಮಸ್ಕ್‌ ಭೇಟಿ ಆಗುವ ಆಸೆ


ಪುಣೆ (ಮಾ. 18) ಪುಣೆ (Pune) ಮೂಲದ ಯುವ ಸಾಫ್ಟ್‌ವೇರ್‌ (Software engineer) ಉದ್ಯೋಗಿಯೊಬ್ಬರು ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ (Elon Musk) ಜೊತೆಗೆ ಕಳೆದ 4 ವರ್ಷಗಳಿಂದಲೂ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿದ್ದಾರೆ.

23 ವರ್ಷದ ಪ್ರಣಯ್‌ ಪಟೋಲೆ 2018ರಲ್ಲಿ ಎಂಜಿನಿಯರ್‌ ವಿದ್ಯಾರ್ಥಿಯಾಗಿರುವಾಗ ನೀರಿನ ಹನಿಗಳು ಪತ್ತೆಯಾದಂತೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಆಟೋ ವೈಪರ್‌ ಸೆನ್ಸಾರ್‌ ಬಳಸುವಂತೆ ಮಸ್ಕ್‌ಗೆ ಟ್ವೀಟ್‌ ಮಾಡಿದ್ದನು. ಕೆಲವೇ ನಿಮಿಷಗಳಲ್ಲಿ ಆತನಿಗೆ ಮಸ್ಕ್‌ ತನ್ನ ಕಂಪನಿ ಟೆಸ್ಲಾದ ವಾಹನಗಳಲ್ಲಿ ಇದನ್ನು ಅಳವಡಿಸಿಕೊಳ್ಳುವುದಾಗಿ ಪ್ರತಿಕ್ರಿಯೆ ನೀಡಿದರು. ಇದಾದ ನಂತರ ಮಸ್ಕ್‌ 2020ರಲ್ಲಿ ಸ್ವತಃ ಟ್ವೀಟರ್‌ನಲ್ಲಿ ಡೈರೆಕ್ಟ್ ಮೆಸೇಜ್‌ (ಡಿಎಂ) ಮಾಡಿ ತಮ್ಮ ಕಂಪನಿ ಸ್ಪೇಸ್‌ ಎಕ್ಸ್‌ನ ರಾಕೆಟ್‌ ಸ್ಟಾರ್‌ಶಿಪ್‌ನಲ್ಲಿ ಬಳಸಿದ ರಾಪ್ಟರ್‌ ಎಂಜಿನ್‌ ಬಗ್ಗೆ ಪ್ರಣಯ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಹೀಗೆ ಕಳೆದ ನಾಲು ವರ್ಷದಿಂದ ಮಸ್ಕ್‌ನೊಂದಿಗೆ ಮೇಸೇಜು ಮೂಲಕವೇ ಮಾತನಾಡುತ್ತಿದ್ದೇನೆ’ ಎಂದು ಪ್ರಣಯ್‌ ಹೇಳಿದ್ದಾರೆ.

Tap to resize

Latest Videos

ಮಸ್ಕ್ ಬಿಟ್ ಕಾಯಿನ್ ಬಗ್ಗೆ ಟ್ವೀಟ್ ಮಾಡಿದರೆ ಅದು ವೈರಲ್

‘ನಾನು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಟ್ವೀಟ್‌ ಮಾಡುತ್ತೇನೆ. ಈ ಟ್ವೀಟ್‌ಗಳನ್ನು ಗಮನಿಸಿ ಮಸ್ಕ್‌ ನನ್ನ ಟ್ವೀಟ್‌ಗಳಿಗೆ ಪ್ರತಿಕ್ರಿಯೆ ನೀಡುತ್ತ ಬಂದಿದ್ದಾರೆ’ ಎಂದಿದ್ದಾರೆ. ಪ್ರಸ್ತುತ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸೆಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಸ್ಕ್‌ ಮುಂದೊಂದು ದಿನ ಮಸ್ಕ್‌ನನ್ನು ಭೇಟಿಯಾಗಿ ಅವರೊಂದಿಗೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.

ಹೆಸರು ಬದಲಾಯಿಸಿಕೊಂಡಿದ್ದ ಮಸ್ಕ್:  ಚೆಚೆನ್ ಗಣರಾಜ್ಯದ ಮುಖ್ಯಸ್ಥ ರಂಜಾನ್ ಕದಿರೊವ್  ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ಗೆ ತಿರುಗೇಟು ನೀಡಿದ್ದರು.  ಉಕ್ರೇನ್ ಮೇಲಿನ ರಷ್ಯಾ ಯುದ್ಧವನ್ನು(Russia Ukraine war) ಖಂಡಿಸುತ್ತಲೇ ಬಂದಿರುವ  ಎಲಾನ್ ಮಸ್ಕ್(Elon Musk) ಇತ್ತೀಚೆಗೆ   ನೇರ ಚಾಲೆಂಜ್ ಹಾಕಿ ಗಮನಸೆಳೆದಿದ್ದರು. ನಾನು ಈ ಮೂಲಕ ವ್ಲಾದಿಮಿರ್ ಪುಟಿನ್‌ಗೆ  ಒಂದೇ ಯುದ್ಧಕ್ಕೆ ಸವಾಲು ಹಾಕುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಈ ಹೇಳಿಕೆಗೆ  ಕದಿರೊವ್ ತಿರುಗೇಟು ನೀಡಿದ್ದು ಎಲಾನ್‌ ಮಸ್ಕ ಟ್ವೀಟ್‌ ಮೂಲಕ ಇದನ್ನು ಹಂಚಿಕೊಂಡಿದ್ದಾರೆ. 
 
ಚೆಚೆನ್ ಗಣರಾಜ್ಯದ ಮುಖ್ಯಸ್ಥ ರಂಜಾನ್ ಕದಿರೊವ್  ಟೆಲಿಗ್ರಾಮ್ ಪೋಸ್ಟ್‌ನ ಸ್ಕ್ರೀನ್‌ಶಾಟನ್ನು ಹಂಚಿಕೊಂಡಿರುವ ಎಲಾನ್‌ ಮಸ್ಕ್‌  ತಮ್ಮ ಟ್ವಿಟರ್ ಹೆಸರನ್ನು ಎಲೋನಾ ಮಸ್ಕ್ (Elona Musk) ಎಂದು ಬದಲಾಯಿಸಿಕೊಂಡು ಠಕ್ಕರ್ ಕೊಟ್ಟಿದ್ದರು.

ಉಕ್ರೇನ್ ಪರ ನಿಂತಿದ್ದ ಎಲಾನ್ ಮಸ್ಕ್  ಸ್ಟಾರ್‌ಲಿಂಕ್  ನೆರವು ಘೋಷಣೆ ಮಾಡಿದ್ದರು. . ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಚಾಲೆಂಜ್ ಮಾಡಿ, ನನ್ನ ಚಾಲೆಂಜ್ ಗೆದ್ದವರಿಗೆ ಉಕ್ರೇನ್ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. 

ಬಿಟ್ ಕಾಯಿನ್ ಕುಬೇರ:  ಟೆಕ್ ಶತಕೋಟ್ಯಾಧಿಪತಿ ಎಲಾನ್ ಮಸ್ಕ್ ನಿಗೂಢ ಬಿಟ್‌ಕಾಯಿನ್ ಸೃಷ್ಟಿಕರ್ತ ಸತೋಶಿ ನಕಾಮೊಟೊ (mysterious Bitcoin creator Satoshi Nakamoto) ಅವರ ಗುರುತನ್ನು ರಹಸ್ಯ ಟ್ವೀಟ್‌ನೊಂದಿಗೆ ಡಿಕೋಡ್ ಮಾಡಲು ಪ್ರಯತ್ನ ಮಾಡಿದ್ದು ಸುದ್ದಿಯಾಗಿತ್ತು. ಡಿಜಿಟಲ್ ಕರೆನ್ಸಿಯಲ್ಲಿ ಹೊಸ ದಿಕ್ಕನ್ನೇ ತೋರಿರುವ ಬಿಟ್ ಕಾಯಿನ್ ನ ಸೃಷ್ಟಿಕರ್ತ ಎಂದು "ಸತೋಶಿ ನಕಾಮೊಟೊ" ಎಂದು ಪರಿಗಣನೆ ಮಾಡುಲಾಗಿತ್ತು.

ಟೆಸ್ಲಾ ಸಿಇಒ (Tesla CEO) ಎಲೋನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ವಿಚಿತ್ರವಾದ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಬಿಟ್‌ಕಾಯಿನ್ ಸೃಷ್ಟಿಕರ್ತರ ಗುರುತಿನ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದರು. 

click me!