ಪ್ರಧಾನಿ ನರೇಂದ್ರ ಮೋದಿ ವಿರುದ್ಧ 21 ವಿಪಕ್ಷಗಳ ಆಕ್ಷೇಪ

By Web DeskFirst Published Feb 28, 2019, 9:23 AM IST
Highlights

ಪ್ರಧಾನಿ ನರೇಂದ್ರ ಮೋದಿ ವಿರುದ್ಧ 21 ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಭಾರತ ಹಾಗೂ ಪಾಕ್ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ವ ಪಕ್ಷ ಸಭೆ ಕರೆಯದೇ ಇದ್ದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. 

ನವದೆಹಲಿ: ಭಾರತೀಯ ವಾಯು ಪಡೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ಕರೆಯದೇ, ಸಚಿವರ ನೇತೃತ್ವದಲ್ಲಿ ಸಭೆ ಕರೆದಿರುವುದಕ್ಕೆ ವಿಪಕ್ಷಗಳು ಆಕ್ಷೇಪ ಬುಧವಾರ ವ್ಯಕ್ತಪಡಿಸಿವೆ.

'ಫೇಕಿಸ್ತಾನ'ದ ನಕಲಿ ವಿಡಿಯೋ: ಪಾಕ್ ನಲ್ಲಿ ಗುನುಗಿದ ಕನ್ನಡ

ಸುದ್ದಿಗೋಷ್ಠಿಯಲ್ಲಿ ವಿಪಕ್ಷಗಳ ಜಂಟಿ ಹೇಳಿಕೆಯನ್ನು ಓದಿ ಹೇಳಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಫೆ.26ರಂದು ಭಾರತೀಯ ವಾಯು ಪಡೆ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿಯನ್ನು ಶ್ಲಾಘಿಸಿದ್ದಾರೆ. ಆದರೆ, ಆಡಳಿತ ಪಕ್ಷ ಬಿಜೆಪಿ ವಾಯು ಪಡೆಯ ಬಲಿದಾನವನ್ನು ರಾಜಕೀಕರಣಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ 21 ವಿಪಕ್ಷಗಳು ಬೇಸರ ವ್ಯಕ್ತಪಡಿಸುತ್ತವೆ ಎಂದು ಹೇಳಿದ್ದಾರೆ.

ದಾಳಿ ಮಾಡಿದ್ದೇ ತಪ್ಪೆಂದವರ ಝಾಡಿಸಿದ ಸಂಸದ ರಾಜೀವ್ ಚಂದ್ರಶೇಖರ್

ರಾಷ್ಟ್ರೀಯ ಭದ್ರತೆ, ಸಂಕುಚಿತ ರಾಜಕೀಯ ಮನೋಭಾವವನ್ನು ಮೀರಿರಬೇಕು. ನಮ್ಮ ಪ್ರಜಾಪ್ರಭುತ್ವದಲ್ಲಿ ಪಾಲಿಸಿಕೊಂಡ ಬಂದ ಪದ್ಧತಿಯಂತೆ ಪ್ರಧಾನಿಯವರು ಸರ್ವಪಕ್ಷಗಳ ಸಭೆ ಕರೆಯದೇ ಇರುವುದು ವಿಷಾದನೀಯ ಎಂದು ರಾಹುಲ್‌ ಹೇಳಿದ್ದಾರೆ. ಇದೇ ವೇಳೆ ಸರ್ಕಾರ ದೇಶದ ಸಾರ್ವಭೌಮತೆಯ ವಿಚಾರದಲ್ಲಿ ದೇಶವನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ಸಿಪಿಎಂ ಮುಖಂಡ ಸೀತಾರಾಮ್‌ ಯೆಚೂರಿ ಹೇಳಿದ್ದಾರೆ.

click me!