ಪುಲ್ವಾಮ ದಾಳಿ : ಪಾಕಿಸ್ತಾನಕ್ಕೆ ಸಾಕ್ಷ್ಯ ನೀಡಿದ ಭಾರತ

By Web DeskFirst Published Feb 28, 2019, 8:44 AM IST
Highlights

ಪುಲ್ವಾಮಾ ದಾಳಿಯಲ್ಲಿ ಪಾಕ್ ಮೂಲದ ಉಗ್ರ ಸಂಘಟನೆ ಜೆಇಎಂ ಕೈವಾಡ ಇದೆ ಎನ್ನುವ ಸಾಕಷ್ಯವನ್ನು ಭಾರತ ಪಾಕಿಸ್ತಾನಕ್ಕೆ ನೀಡಿದೆ. 

ನವದೆಹಲಿ: ಸಿಆರ್‌ಪಿಎಫ್‌ನ 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ಆತ್ಮಾಹುತಿ ದಾಳಿಯಲ್ಲಿ ಜೈಷ್ -ಎ-ಮೊಹಮ್ಮದ್ ಉಗ್ರ ಸಂಘಟನೆ ಭಾಗಿಯಾಗಿತ್ತು ಎಂಬ ಅಂಶದ ಸಾಕ್ಷ್ಯವನ್ನು ಪಾಕಿಸ್ತಾನಕ್ಕೆ ಭಾರತ ನೀಡಿದೆ. 

ದಾಳಿ ಮಾಡಿದ್ದೇ ತಪ್ಪೆಂದವರ ಝಾಡಿಸಿದ ಸಂಸದ ರಾಜೀವ್ ಚಂದ್ರಶೇಖರ್

ಭಾರತದ ವಾಯುಪಡೆ ಪೈಲಟ್ ಅಭಿನಂದನ್ ಅವರನ್ನು ವಶಕ್ಕೆ ಪಡೆದ ಘಟನೆಗೆ ಸಂಬಂಧಿಸಿದಂತೆ ಪಾಕ್‌ನ ಹಂಗಾಮಿ ಹೈಕಮಿಷನರ್‌ರನ್ನು ಕರೆಸಿಕೊಂಡ ಭಾರತ ವಿದೇಶಾಂಗ ಸಚಿವಾಲಯ ತೀವ್ರ ಪ್ರತಿರೋಧ ಒಡ್ಡಿತು. 

'ಫೇಕಿಸ್ತಾನ'ದ ನಕಲಿ ವಿಡಿಯೋ: ಪಾಕ್ ನಲ್ಲಿ ಗುಣುಗಿದ ಕನ್ನಡ

ಆ ನಂತರ, ಪುಲ್ವಾಮಾ ದಾಳಿಯಲ್ಲಿ ಜೈಷ್ ಉಗ್ರರು ಭಾಗಿಯಾಗಿದ್ದಾರೆ ಹಾಗೂ ಉಗ್ರರ ನೆಲೆಗಳು ಪಾಕ್ ನೆಲದಲ್ಲಿ ಸಕ್ರಿಯವಾಗಿವೆ ಎಂಬುದರ ಮಾಹಿತಿಯನ್ನೊಳಗೊಂಡ ಕಡತಗಳನ್ನು ಭಾರತ ಹಸ್ತಾಂತರಿಸಿತು. ಅಲ್ಲದೆ, ಅಲ್ಲದೆ, ಉಗ್ರರು ಮತ್ತು ಅವರ ನೆಲೆಗಳ ಮೇಲೆ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಾವು ನಿರೀಕ್ಷೆ ಮಾಡುತ್ತೇವೆ ಎಂಬ ಸಂದೇಶವನ್ನು ವಿದೇಶಾಂಗ ಸಚಿವಾಲಯ ಪಾಕ್ ನೀಡಿದೆ. 

"

click me!