
2008 Ahmedabad Serial Blast Case
ನವದೆಹಲಿ: 2008ರ ಅಹಮದಾಬಾದ್ ಸರಣಿ ಸ್ಪೋಟದ ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಕರಣದ 38 ಅಪರಾಧಿಗಳಿಗೆ ಮರಣದಂಡನೆ ಖಾಯಂ ಆಗಿದೆ. ಹಾಗೆಯೇ 11 ಅಪರಾಧಿಗಳ ಜೀವಾವಧಿ ಶಿಕ್ಷೆ ಮತ್ತು ಈ ಸರಣಿ ಸ್ಪೋಟದಲ್ಲಿ ಮೃತ ಕುಟುಂಬಗಳಿಗೆ ₹10 ಲಕ್ಷ ಮತ್ತು ಗಾಯಗೊಂಡವರಿಗೆ ₹5 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ. ಪ್ರಕರಣದ ಎಲ್ಲಾ 49 ಅಪರಾಧಿಗಳು ವಿಶೇಷ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಫೆಬ್ರವರಿ 2022ರಲ್ಲಿ ವಿಶೇಷ ನ್ಯಾಯಾಲಯ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿತ್ತು. 49 ಜನರಲ್ಲಿ 38 ಜನರಿಗೆ ಮರಣದಂಡನೆ ವಿಧಿಸಲಾಗಿತ್ತು. ಜುಲೈ 26, 2008 ರಂದು ಅಹಮದಾಬಾದ್ ನಗರದ 21 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟವಾಗಿತ್ತು. ಈ ಸ್ಫೋಟದಲ್ಲಿ ಒಟ್ಟು 56 ಜನರು ಸಾವನ್ನಪ್ಪಿದ್ರೆ 250ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಸ್ಫೋಟದ ಹೊಣೆಯನ್ನು ಇಂಡಿಯನ್ ಮುಜಾಹಿದ್ದೀನ್ (IM) ಹೊತ್ತುಕೊಂಡಿತ್ತು. ಜುಲೈ 26, 2008 ರಂದು ಸಂಜೆ 6:30 ರಿಂದ ರಾತ್ರಿ 8:15 ರ ನಡುವೆ ಅಹಮದಾಬಾದ್‌ನ 20 ಸ್ಥಳಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿದವು.
ಹಟ್ಕೇಶ್ವರ, ನರೋಲ್ ಸರ್ಕಲ್, ಖಾಡಿಯಾ, ನರೋಡಾ, ಜವಾಹರ್ ಚೌಕ್, ಗೋವಿಂದ್ ವಾಲಿ, ಬಾಪಾ ನಗರ, ಇಸಾನ್‌ಪುರ, ಸಿವಿಲ್ ಆಸ್ಪತ್ರೆ, ಥಕ್ಕರ್, ಎಲ್‌ಜಿ ಆಸ್ಪತ್ರೆ, ರಾಯ್‌ಪುರ ಚಕ್ಲಾ, ಸಾರಂಗಪುರ ಮತ್ತು ಸರ್ಖೇಜ್ ಸೇರಿದಂತೆ 21 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿತ್ತು.
ಈ ಸಂಬಂಧ ತನಿಖೆ ನ್ಯಾಯಾಲಯಕ್ಕೆ 4 ಸಾವಿರ ಪುಟಗಳ ದಾಖಲೆ, 1,100 ಕ್ಕೂ ಹೆಚ್ಚು ಸಾಕ್ಷಿಗಳು ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿದಿದ್ದಾರೆ. ಈ ಪ್ರಕರಣದ ವಿಚಾರಣೆ ಸಮಯದಲ್ಲಿ ನ್ಯಾಯಧೀಶರು ಏಳು ಬಾರಿ ಬದಲಾಗಿದ್ದರು. ಅಂತಿಮವಾಗಿ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ 8ನೇ ಫೆಬ್ರವರಿ 2022ರಲ್ಲಿ ತೀರ್ಪು ಪ್ರಕಟಿಸಿತ್ತು. ಈ ಪ್ರಕರಣದಲ್ಲಿ 49 ಜನರನ್ನು ದೋಷಿಗಳಾದ್ರೆ, 28 ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ