14ನೇ ವಯಸ್ಸಿನಲ್ಲಿ KBC ಗೆದ್ದ ಬಾಲಕ ಈಗ ಸೂಪರಿಡೆಂಟ್ ಆಫ್ ಪೊಲೀಸ್!

By Suvarna News  |  First Published May 28, 2020, 11:04 PM IST

ರವಿ ಮೋಹನ್ ಸೈನಿ ಅನ್ನೋ 14 ವರ್ಷದ ಬಾಲಕ ಹೆಸರು ಇಡೀ ಭಾರತದಲ್ಲಿ ಪ್ರಸಿದ್ದಿಯಾಗಿತ್ತು. ದಶಕಗಳ ಹಿಂದೆ ಸೈನಿ, ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಎಲ್ಲಾ ಪ್ರಶ್ನೆಗೆ ಉತ್ತರಿಸಿ 1 ಕೋಟಿ ರೂಪಾಯಿ ಗೆದ್ದಿದ್ದ. ಇದೀಗ ಇದೇ ಬಾಲಕ SP ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.


ಗುಜರಾತ್(ಮೇ.28): ಅದು, 2001. ಕೌನ್ ಬನೇಗಾ ಕರೋಡ್‍‌ಪತಿ ಟಿವಿ ಶೋ ಎಲ್ಲಡೆ ಸಂಚಲನ ಮೂಡಿಸಿತ್ತು. ಕಾರಣ 14 ವರ್ಷದ ಬಾಲಕ ರವಿ ಮೋಹನ್ ಸೈನಿ ಅಮಿತಾಬ್ ಬಚ್ಚನ್ ಕೇಳಿದ 15 ಪ್ರಶ್ನೆಗಳಿಗೆ ಉತ್ತರಿಸಿ 1 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದ. ಇದೀಗ 33 ವರ್ಷದ ಸೈನಿ, ಪೊರಬಂದರ್‌ನ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕೆಬಿಸಿಯಲ್ಲಿ 25 ಲಕ್ಷ ರೂ. ಗೆದ್ದ ಸುಧಾ ಮೂರ್ತಿ!.

Tap to resize

Latest Videos

ಶಾಲಾ ದಿನಗಳಲ್ಲಿ ಕೌನ್ ಬನೇಗಾ ಕರೋಡ್‌ಪತಿ ಶೋ ಮೂಲಕ 1 ಕೋಟಿ ರೂಪಾಯಿ ಗೆದ್ದುಕೊಂಡಿದ್ದ ಸೈನಿ, ಎಂಬಿಬಿಎಸ್ ವಿದ್ಯಾಭ್ಯಾಸ ಪೂರೈಸಿದರು. ಜೊತೆ ಇಂಟರ್ನ್‌ಶಿಪ್ ಕೂಡ ಪೂರೈಸಿದ್ದರು. ವೈದ್ಯರಾಗುವತ್ತ ಹೆಜ್ಜೆ ಇಟ್ಟಿದ್ದ ಸೈನಿಗೆ, ತಂದೆಯಂತೆ ಸಮವಸ್ತ್ರ ಧರಿಸಿ ದೇಶಸೇವೆ ಮಾಡುವ ಬಯಕೆಯಾಗಿತ್ತು. ತಂದೆ ನೌಕಪಾಡೆಯ ನಿವೃತ್ತ ಅಧಿಕಾರಿ. ಇಂಟರ್ನ್‌ಶಿಪ್ ವೇಳೆ ಸೈನಿ, ಯುಪಿಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು.

ಕೆಬಿಸಿಯಲ್ಲಿ ಕೋಟಿ ಗೆದ್ದ ಬಬಿತಾಗೆ ಮತ್ತೊಂದು ಬಂಪರ್ ಆಫರ್!

ಯುಪಿಎಸ್‌ಸಿ ಪರೀಕ್ಷೆ ಪೂರೈಸಿದ ರವಿ ಮೋಹನ್ ಸೈನಿ ಇದೀಗ ಪೊರಂಬದರ್‌ನ ಸೂಪರಿಡೆಂಟ್ ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ತಂದೆ ರೀತಿಯಲ್ಲಿ ದೇಶಸೇವೆ ಮಾಡಲು ನಾನು ಪೊಲೀಸ್ ಇಲಾಖೆಗೆ ಸೇರಿಕೊಂಡಿದ್ದೇನೆ. ತಂದೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪೊರಬಂದರ್‌ನಲ್ಲಿ ಕೊರೋನಾ ಹರಡದಂತೆ ತಡೆಯುವುದು, ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಸೇರಿದಂತೆ ಹಲವು ಜವಾಬ್ದಾರಿ ನನ್ನ ಮೇಲಿದೆ ಎಂದು ಸೈನಿ ಹೇಳಿದ್ದಾರೆ. 
 

click me!