
ನವದೆಹಲಿ(ಮೇ.28): ಲಾಕ್‌ಡೌನ್‌ನಿಂದಾಗಿ ಬೃಹತ್ ಕಂಪನಿಗಳು ನೌಕರರ ವೇತನ ಕಡಿತಗೊಳಿಸುತ್ತಿದ್ದರೆ, ದೆಹಲಿಯ ರೈತನೊಬ್ಬ ತನ್ನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರನ್ನು ವಿಮಾನದ ಮೂಲಕ ತವರಿಗೆ ಕಳುಹಿಸಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಲಾಕ್‌ಡೌನ್ ವೇಳೆ ನೌಕರರಿಗೆ ವೇತನ ಪಾವತಿಸದವರ ವಿರುದ್ಧ ಕ್ರಮ ಇಲ್ಲ; ಸುಪ್ರೀಂ ಕೋರ್ಟ್!
ಎರಡು ತಿಂಗಳಿನಿಂದ ತವರಿಗೆ ಮರಳಲಾಗದೇ ಪರಿತಪಿಸುತ್ತಿದ್ದ ಬಿಹಾರದ ಕಾರ್ಮಿಕರ ಆಸೆ ಇದೀಗ ಈಡೆರಿದೆ. ಏಪ್ರಿಲ್‌ನಲ್ಲೇ ತಮ್ಮ ಊರು ಸೇರಬೇಕೆಂದು ಬಯಸಿದ್ದ ಕಾರ್ಮಿಕರು ಇದೀಗ ಗುರುವಾರ ಬೆಳಗ್ಗೆ 6 ಗಂಟೆಗೆ ವಿಮಾನದ ಮೂಲಕ ಊರು ಸೇರಿಕೊಳ್ಳಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಮಿಕ ಲಖೀಂದರ್ ರಾಮ್, ನಾವು ಕನಸು ಮನಸಿನಲ್ಲೂ ವಿಮಾನ ಪ್ರಯಾಣ ಬೆಳೆಸುತ್ತೇವೆ ಎಂದುಕೊಂಡಿರಲಿಲ್ಲ. ಖುಷಿಯನ್ನು ಹೇಳಿಕೊಳ್ಳಲು ಶಬ್ದಗಳಿಲ್ಲ ಎಂದಿದ್ದಾರೆ.
ತಮ್ಮೂರಿಗೆ ಮರಳಲು ಸರಿಯಾದ ಸಾರಿಗೆ ವ್ಯವಸ್ಥೆ, ಕೈಯ್ಯಲ್ಲಿ ಹಣವಿಲ್ಲದೇ ಕಾರ್ಮಿಕರು ಪರದಾಡುತ್ತಿರುವ ವೇಳೆ ರೈತ ಮಾಡಿದ ಈ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ