
ದೆಹಲಿ(ಮೇ.28): ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಘೋಷಿಸುತ್ತಿದ್ದಂತೆ ಅದೆಷ್ಟೋ ಮಂದಿ ಎಲ್ಲೆಲ್ಲೋ ಸಿಲುಕಿದ್ದರು. ಪ್ರವಾಸಕ್ಕೆ ತೆರಳಿದವರು, ಉದ್ಯೋಗ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ಕಾರಣಗಳಿಂದ ಬೇರೆಡೆಗೆ ತೆರಳಿದವರು ಅರ್ಧದಲ್ಲೇ ಸಿಲುಕಿಕೊಂಡರು. ಬರೋಬ್ಬರಿ 2 ತಿಂಗಳ ಬಳಿಕ ಇದೀಗ ತವರು ನೋಡುತ್ತಿದ್ದಾರೆ. ಹೀಗೆ ಸಿಲುಕಿಕೊಂಡ ಭೋಪಾಲ್‌ನ ಮದ್ಯದ ದೊರೆಯ ಕುಟುಂಬದ ನಾಲ್ವರು ಸದಸ್ಯರನ್ನು ಮತ್ತೆ ಮನೆಗೆ ಕಳುಹಿಸಲು 180 ಸೀಟಿನ ಸಂಪೂರ್ಣ ವಿವಾನವನ್ನೇ ಬುಕ್ ಮಾಡಿದ್ದಾನೆ.
ಮಾಸ್ಕ್ ಇಲ್ಲದೇ ಪ್ರವೇಶವಿಲ್ಲ, ಧರಿಸಿದ್ದ ಚಡ್ಡಿ ತೆಗೆದು ಮುಖಕ್ಕೆ ಹಾಕಿದ ಮಹಿಳೆ!.
ಲಾಕ್‌ಡೌನ್ ಆರಂಭವಾದಾಗ ಮದ್ಯದ ದೊರೆಯ ಪುತ್ರಿ, ಪುತ್ರಿಯ ಇಬ್ಬರು ಮಕ್ಕಳು ಹಾಗೂ ಸಹಾಯಕಿ ದೆಹಲಿಯಿಂದ ತಂದೆಯ ಮನೆಯಾದ ಭೋಪಾಲ್‌ಗೆ ಆಗಮಿಸಿದ್ದರು. ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡಿದ ಕಾರಣ ಭೋಪಾಲ್‌ನಲ್ಲೇ ಉಳಿಯಬೇಕಾಯಿತು. ಎಲ್ಲಾ ಮಾರ್ಗಗಳು ಬಂದ್ ಹಾಗೂ ಕಟ್ಟು ನಿಟ್ಟಿನ ಲಾಕ್‌ಡೌನ್ ಕಾರಣ ಮದ್ಯದ ದೊರೆಗೆ ಕುಟುಂಬ ಸದಸ್ಯರನ್ನು ದೆಹಲಿಗೆ ಕಳಹಿಸಲು ಸಾಧ್ಯವಾಗಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ, ದೇಶಿಯ ವಿಮಾನ ಹಾರಾಟ ಆರಂಭಿಸಿದ ಬೆನ್ನಲ್ಲೇ, ಮದ್ಯದ ದೊರೆ ನಾಲ್ವರನ್ನು ಕಳಹಿಸಲು ದೊಡ್ಡ ಪ್ಲಾನ್ ಮಾಡಿದ್ದಾನೆ.
ದೆಹಲಿಯಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದ್ದ ಕಾರಣ ಮದ್ಯದ ದೊರೆಗೆ ನಾಲ್ವರನ್ನು ದೆಹಲಿಗೆ ಕಳುಹಿಸುವುದೇ ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಭೋಪಾಲ್‌ನಿಂದ 180 ಸೀಟು ಸಾಮರ್ಥ್ಯದ A320 ವಿಮಾನವನ್ನು ಬುಕ್ ಮಾಡಿ ನಾಲ್ವರನ್ನು ದೆಹಲಿಗೆ ಕಳುಹಿಸಿದ್ದಾನೆ. ಈ ವಿಮಾನದಲ್ಲಿ ಮದ್ಯದ ದೊರೆಯ ಪುತ್ರಿ, ಪುತ್ರಿಯ ಇಬ್ಬರು ಮಕ್ಕಳು ಹಾಗೂ ಕೆಲಸದಾಕೆ ಭೋಪಾಲ್‌ನಿಂದ ಹತ್ತಿ ದೆಹಲಿಯಲ್ಲಿ ಬಂದಿಳಿದಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ 180 ಸೀಟಿನ ವಿಮಾನದಿಂದ ನಾಲ್ಕು ಮಂದಿ ಹಾಗೂ ವಿಮಾನ ಸಿಬ್ಬಂದಿಗಳು ಮಾತ್ರ ಇಳಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು.
ಕೊರೋನಾ ವೈರಸ್ ಭೀತಿ ಕಾರಣ ತನ್ನ ಕುಟುಂಬ ಸದಸ್ಯರನ್ನು ಕಾಪಾಡಲು 180 ಸೀಟಿನ ವಿಮಾನವನ್ನು ಕೇವಲ 4 ಮಂದಿಗೆ ಬುಕ್ ಮಾಡಲಾಗಿದೆ. ವಿಮಾನಯಾನ ಪರಿಣಿತರ ಪ್ರಕಾರ A320 ವಿಮಾನ ಬುಕ್ ಮಾಡಲು ಕನಿಷ್ಠ 20 ಲಕ್ಷ ರೂಪಾಯಿ ಆಗಲಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ