
ಮುಂಬೈ(ಜೂ26): ದೇಶಾದ್ಯಂತ 2000 ರು. ಮುಖಬೆಲೆಯ ನೋಟುಗಳನ್ನು ಬಳಕೆಯಿಂದ ಹಿಂಪಡೆವ ನಿರ್ಧಾರದ ಬಳಿಕ ಈವರೆಗೆ ಶೇ.75ರಷ್ಟು ಬ್ಯಾಂಕ್ ನೋಟುಗಳು ಮರಳಿ ಬ್ಯಾಂಕುಗಳಿಗೆ ಬಂದಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
‘ನೋಟು ಹಿಂಪಡೆವ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದೇಶದಲ್ಲಿ ಒಟ್ಟು 3.62 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಈವರೆಗೆ ಶೇ.75ರಷ್ಟು ಅಂದರೆ 2.41 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಬಂದಿವೆ. ಈ ಪೈಕಿ ಶೇ.85ರಷ್ಟು ಠೇವಣಿ ರೂಪದಲ್ಲಿ ಹಾಗೂ ಶೇ.15ರಷ್ಟು ಬದಲಾವಣೆ ರೂಪದಲ್ಲಿ ಬಂದಿವೆ ಎಂದು ದಾಸ್ ತಿಳಿಸಿದ್ದಾರೆ.
ಮನೆ ಬಾಗಿಲಿಗೇ ಬಂದು 2000 ರು. ನೋಟು ಸ್ವೀಕರಿಸಲಿದೆ ಅಮೆಜಾನ್
ಈ ಹಿಂದೆ ಜೂ.8ರ ವೇಳೆಗೆ ಶೇ.50ರಷ್ಟುಅಂದರೆ 1.8 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಮರಳಿದ್ದವು. ಜನರು ನೋಟು ವಾಪಸು ಮಾಡಲು ಸೆ.30 ಕೊನೆಯ ದಿನವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ