ಸಾವಿನ ಬಳಿಕ 5 ಜನರಿಗೆ ಜೀವದಾನ: 20 ತಿಂಗಳ ಮಗು ಅತಿ ಕಿರಿಯ ದಾನಿ

By Kannadaprabha NewsFirst Published Jan 15, 2021, 9:00 AM IST
Highlights

20 ತಿಂಗಳ ಕೂಸು ಅಂಗಾಗ ದಾನ | 20 ತಿಂಗಳ ಮಗು ಧನಿಸ್ಟ, ಭಾರತದ ಅತಿ ಕಿರಿಯ ಅಂಗಾಂಗ ದಾನಿ

ನವದೆಹಲಿ(ಜ.15): ಕೋಮಾಗೆ ಜಾರಿದ್ದ 20 ತಿಂಗಳ ಕೂಸು ತನ್ನ ಅಂಗಾಂಗ ದಾನ ಮಾಡುವ ಮೂಲಕ 5 ಜೀವಗಳನ್ನು ಉಳಿಸಿದ ಹೃದಯಸ್ಪರ್ಶಿ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಮೂಲಕ 20 ತಿಂಗಳ ಮಗು ಧನಿಸ್ಟ, ಭಾರತದ ಅತಿ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೆಹಲಿಯ ಧನಿಸ್ಟಎಂಬ 20 ತಿಂಗಳ ಮಗು ಜ.8ರಂದು ಬಾಲ್ಕನಿಯಿಂದ ಬಿದ್ದು ಕೋಮಾಗೆ ಜಾರಿತ್ತು. ಇಲ್ಲಿನ ಗಂಗಾ ರಾಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮಗುವಿನ ಮೆದುಳು ನಿಷ್ಕ್ರಿಯವಾಗಿದೆ ಎಂದು ಜ.11ರಂದು ವೈದ್ಯರು ತಿಳಿಸಿದ್ದರು.

50 ದಿನ ಪೂರೈಸಿದ ರೈತ ಪ್ರತಿಭಟನೆ: ಇಲ್ಲಿತನಕ 50 ರೈತರ ಸಾವು

ಬಳಿಕ ಪೋಷಕರು ಮಗುವಿನ ಅಂಗಾಂಗ ದಾನ ಮಾಡುವ ಮೂಲಕ ಔದಾರ‍್ಯ ಮೆರೆದಿದ್ದಾರೆ. ಇದರ ಫಲವಾಗಿ 5 ರೋಗಿಗಳು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಕೋಮಾದಲ್ಲಿದ್ದ ಮಗುವಿನ ಹೃದಯ, ಶ್ವಾಸಕೋಶ, ಎರಡು ಕಿಡ್ನಿ ಮತ್ತು ಕಾರ್ನಿಯಾ (ಕಣ್ಣಿನ ಮೇಲ್ಪದರ)ವನ್ನು ಯಶಸ್ವಿಯಾಗಿ ಹೊರತೆಗೆದು 5 ರೋಗಿಗಳಿಗೆ ದಾನ ನೀಡಲಾಯಿತು ಎಂದು ಆಸ್ಪತ್ರೆ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಗುವಿನ ತಂದೆ ಆಶಿಶ್‌ ಕುಮಾರ್‌, ‘ಆಸ್ಪತ್ರೆಯಲ್ಲಿ ಅಂಗಾಂಗಗಳ ಅಗತ್ಯವಿರುವ ಹಲವು ರೋಗಿಗಳನ್ನು ನೋಡಿದ್ದೆವು. ನಮ್ಮ ಮಗಳನ್ನು ನಾವು ಕಳೆದುಕೊಂಡರೂ ಆಕೆ ಬೇರೊಂದು ಜೀವದಲ್ಲಿ ಜೀವಂತವಾಗಿರುತ್ತಾಳೆ ಎಂದು ನಿರ್ಧರಿಸಿ ಅಂಗಾಂಗ ದಾನಕ್ಕೆ ಮುಂದಾದೆವು’ ಎಂದು ತಿಳಿಸಿದ್ದಾರೆ

click me!