ಸ್ಟಂಟ್ ವಿಡಿಯೋಗಾಗಿ ಟ್ವಿನ್ ಟವರ್ ಪ್ರವೇಶಿಸಿದ ಇಬ್ಬರು ರಷ್ಯನ್ ಯೂಟ್ಯೂಬರ್‌ಗಳ ಬಂಧನ

By Suvarna NewsFirst Published Dec 29, 2022, 1:07 AM IST
Highlights

ಸ್ಟಂಟ್ ವಿಡಿಯೋ ಚಿತ್ರೀಕರಿಸುವುದಕ್ಕಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ 60 ಅಂತಸ್ತಿನ ಅವಳಿ ಕಟ್ಟಡವನ್ನು ಏರಿದ ಇಬ್ಬರು ರಷ್ಯನ್ ಯೂಟ್ಯೂಬರ್‌ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಸ್ಟಂಟ್ ವಿಡಿಯೋ ಚಿತ್ರೀಕರಿಸುವುದಕ್ಕಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ 60 ಅಂತಸ್ತಿನ ಅವಳಿ ಕಟ್ಟಡವನ್ನು ಏರಿದ ಇಬ್ಬರು ರಷ್ಯನ್ ಯೂಟ್ಯೂಬರ್‌ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 26 ರಂದು ರಾತ್ರಿ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 452 (ಮನೆ ಅತಿಕ್ರಮಣ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವರಿಬ್ಬರ ವಿರುದ್ಧಎಫ್‌ಐಆರ್(FIR) ದಾಖಲಾದ ನಂತರ ಘಟನೆಯ ಬಗ್ಗೆ ರಷ್ಯಾದ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸ್ಟಂಟ್ ವೀಡಿಯೊವನ್ನು ಚಿತ್ರೀಕರಿಸಲು ಪ್ಲಶ್ ಟ್ವಿನ್ ಟವರ್ ಕಾಂಪ್ಲೆಕ್ಸ್‌ ದಿ ಇಂಪೀರಿಯಲ್‌ಗೆ ಅತಿಕ್ರಮವಾಗಿ ನುಸುಳಿದ್ದರು. ಇಬ್ಬರೂ ಮೆಟ್ಟಿಲನ್ನು ಬಳಸಿ ಟವರ್ ಒಂದರ 58 ನೇ ಮಹಡಿಗೆ ಹತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇವರ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ(cc camera) ಸೆರೆ ಆಗಿದೆ. ಕೂಡಲೇ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

ಹಂದಿ ಮಾಂಸ ವಿಚಾರಕ್ಕೆ ಕತ್ತಿಯಿಂದ ವ್ಯಕ್ತಿ ಮೇಲೆ ಹಲ್ಲೆ: ಸಿಸಿ ಕ್ಯಾಮೆರಾದಲ್ಲಿ ಸೆರೆ

ಇವರ ಒಳನುಸುಳುವಿಕೆಯಿಂದ ವಸತಿ ಸಂಕೀರ್ಣದಲ್ಲಿ ದೊಡ್ಡ ಡ್ರಾಮಾಗೆ (Drama ಕಾರಣವಾಯ್ತು. ಟ್ವಿನ್ ಟವರ್‌ನ ಕಾವಲುಗಾರರು ಅವರನ್ನು ಗುರುತಿಸಿದ ನಂತರ, ಆರೋಪಿಗಳು ಕಟ್ಟಡದ 28 ನೇ ಮಹಡಿಗೆ ಬಂದಿದ್ದಾರೆ. ಅಲ್ಲಿಂದ  ಐದನೇ ಮಹಡಿಯಲ್ಲಿನ  ಬಾಲ್ಕನಿಯಿಂದ ಪಕ್ಕದ ಗುಡ್ಡಕ್ಕೆ ಜಿಗಿದರು ಇದರಿಂದ ಆರೋಪಿಗಳ  ಕೈ ಮತ್ತು ಕಾಲಿಗೆ ಕೆಲವು ಗಾಯಗಳಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು  ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಆರೋಪಿಗಳಾದ ರೋಮನ್ ಪ್ರೋಶಿನ್ (33) ಮತ್ತು ಮಾಕ್ಸಿಮ್ ಶೆರ್ಬಕೋವ್ (25) ಎಂದು ಗುರುತಿಸಲಾಗಿದೆ. ಇವರಿಬ್ಬರು  60 ಅಂತಸ್ತಿನ ವಸತಿ ಅವಳಿ ಗೋಪುರದ ಸಂಕೀರ್ಣದ ಹೊರಗಿನಿಂದ ಇಳಿಯಲು ಬಯಸಿದ್ದರು. ಅಲ್ಲದೇ ಈ ಸಾಹಸವನ್ನು ವಿಡಿಯೋ ಚಿತ್ರೀಕರಿಸಲು ನಿರ್ಧರಿಸಿದ್ದರು. ಇವರ ಅತಿಕ್ರಮ ಪ್ರವೇಶವನ್ನು ಗಮನಿಸಿದ ಕಾವಲುಗಾರರು ತಾರ್ದೇವು ಪೊಲೀಸರಿಗೆ (Tardeo police) ಮಾಹಿತಿ ನೀಡಿದ್ದರು. ಸ್ಟಂಟ್ ವಿಡಿಯೋ ಚಿತ್ರೀಕರಣಕ್ಕಾಗಿ ಇವರು ಸೋಮವಾರ ಸಂಜೆ ಮುಂಬೈನ ಟಾರ್ಡಿಯೊದಲ್ಲಿರುವ ದಿ ಇಂಪೀರಿಯಲ್ ಟ್ವಿನ್ ಟವರ್ ಕಾಂಪ್ಲೆಕ್ಸ್‌ಗೆ ನುಸುಳಿದ್ದರು. ಕಾವಲುಗಾರರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಅವರು 28 ನೇ ಮಹಡಿಗೆ ಇಳಿದು ನಂತರ ಐದನೇ ಮಹಡಿಯಿಂದ ಜಿಗಿದು ಸಂಕೀರ್ಣದ ಹಿಂದಿನ ನಿರ್ಜನ ಕಾಡಿನಲ್ಲಿ ಅಡಗಿಕೊಂಡರು. ಪೊಲೀಸರು ಒಬ್ಬ ವ್ಯಕ್ತಿಯನ್ನು ಹಿಡಿದರೆ, ಮತ್ತೊಬ್ಬ, ಪೊಲೀಸರು ಧ್ವನಿವರ್ಧಕದಲ್ಲಿ ಘೋಷಣೆ ಮಾಡುವವರೆಗೂ ತಲೆಮರೆಸಿಕೊಂಡಿದ್ದ. ಸದ್ಯ ರಷ್ಯಾ ರಾಯಭಾರ ಕಚೇರಿಗೆ ಇವರಿಬ್ಬರ ಬಗ್ಗೆ ಮಾಹಿತಿ ನೀಡಲಾಗಿದೆ. 

ತುನಿಷಾ ಶರ್ಮಾ ಆತ್ಮಹತ್ಯೆ ಬೆನ್ನಲ್ಲೇ ಬದುಕು ಅಂತ್ಯಗೊಳಿಸಿದ ಖ್ಯಾತ ಯೂಟ್ಯೂಬರ್ ಲೀನಾ ನಾಗವಂಶಿ

click me!