
ಮುಂಬೈ(ಏ.07): ಕೊರೋನಾ ಚಿಕಿತ್ಸೆ ನೀಡುತ್ತಿದ್ದ ಮೂವರು ವೈದ್ಯರು ಹಾಗೂ ಬರೋಬ್ಬರಿ 27 ನರ್ಸ್‌ಗಳಿಗೇ ವೈರಸ್ ಸೋಂಕು ಖಚಿತಪಟ್ಟಹಿನ್ನೆಲೆಯಲ್ಲಿ ಮುಂಬೈ ಎರಡು ಆಸ್ಪತ್ರೆಗಳನ್ನು ಬಂದ್ ಮಾಡಿಸಲಾಗಿದೆ. ಈ ಆಸ್ಪತ್ರೆಗಳಿಗೆ ಯಾರೂ ಪ್ರವೇಶಿಸಕೂಡದು, ಹಾಗೆಯೇ ಒಳಗಿರುವವರೂ ಹೊರಗೆ ಬರಬಾರದು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಉಡುಪಿ, ದಕ್ಷಿಣ ಕನ್ನಡಕ್ಕೆ ಅಬಕಾರಿ ಇಲಾಖೆಯಿಂದ ಸ್ಯಾನಿಟೈಸರ್
ಕೇಂದ್ರ ಮುಂಬೈನ ವೊಕಾಡ್‌್ರ್ಟ ಆಸ್ಪತ್ರೆಯಲ್ಲಿ ಮೂವರು ವೈದ್ಯರು ಹಾಗೂ 26 ನರ್ಸ್‌ಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಆಸ್ಪತ್ರೆಯಲ್ಲಿ ಕೇರಳದ 40 ಹಲವು ನರ್ಸ್‌ಗಳಿದ್ದಾರೆ. ಕೊರೋನಾ ವಿಷಯ ತಿಳಿಯುತ್ತಿದ್ದಂತೆ ಕ್ರಮ ಕೈಗೊಳ್ಳುವಂತೆ ಕೇರಳ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಟ್ವೀಟ್ ಮಾಡಿದ್ದರು. ಅದರ ಬೆನ್ನಲ್ಲೇ ಆಸ್ಪತ್ರೆಯನ್ನು ಮುಚ್ಚಿಸಲಾಗಿದೆ.
ಮತ್ತೊಂದೆಡೆ, ಮುಂಬೈನ ಜಸ್‌ಲೋಕ್ ಆಸ್ಪತ್ರೆಯಲ್ಲೂ ನರ್ಸ್‌ಗೆ ಸೋಂಕು ಖಚಿತಪಟ್ಟಹಿನ್ನೆಲೆಯಲ್ಲೂ ಆ ಆಸ್ಪತ್ರೆಯನ್ನೂ ಕೆಲ ದಿನಗಳ ಕಾಲ ಬಂದ್ ಮಾಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ