ಮುಂಬೈ ಏರ್‌ಪೋರ್ಟ್‌ನಲ್ಲಿ ಕೂದಲೆಳೆ ಅಂತರದಲ್ಲಿಯೇ ತಪ್ಪಿದ ವಿಮಾನ ದುರಂತ; ವಿಡಿಯೋ ನೋಡಿ

By Mahmad RafikFirst Published Jun 9, 2024, 1:34 PM IST
Highlights

 Chhatrapati Shivaji Maharaj International Airport: ಇಂಡಿಗೋ ಫ್ಲೈಟ್ ಇಂದೋರ್‌ನಿಂದ ಮುಂಬೈಗೆ ಆಗಮಿಸಿತ್ತು. ಏರ್ ಇಂಡಿಯಾ ಟೇಕಾಫ್‌ ಆಗುವ ಮೊದಲೇ ಅದೇ ರನ್‌ವೇಗೆ ಇಂಡಿಗೋ ಲ್ಯಾಂಡಿಂಗ್‌ಗೆ ಕ್ಲಿಯರೆನ್ಸ್ ನೀಡಲಾಗಿತ್ತು. ಏರ್ ಇಂಡಿಯಾ ವಿಮಾನ ಮುಂಬೈನಿಂದ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿತ್ತು.

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Chhatrapati Shivaji Maharaj International Airport, Mumbai) ದೊಡ್ಡ ಅನಾಹುತವೊಂದು ತಪ್ಪಿದೆ. ಶನಿವಾರ ಈ ಘಟನೆ ನಡೆದಿದ್ದು, ಏಕಕಾಲದಲ್ಲಿ ಒಂದೇ ರನ್‌ವೇಯಲ್ಲಿ ಎರಡು ವಿಮಾನಗಳು ಕಾರ್ಯಾಚರಣೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡುಗರ ಉಸಿರು ಒಂದು ಕ್ಷಣ ನಿಂತ ಅನುಭವ ಆಗುತ್ತದೆ. 

ಶನಿವಾರ ಏರ್ ಇಂಡಿಯಾ (Air India Plane) ಮತ್ತು ಇಂಡಿಗೋ (IndiGo) ವಿಮಾನ ಒಂದೇ ರನ್‌ವೇಯಲ್ಲಿ ಕಾರ್ಯಾಚರಣೆಯನ್ನು ನಡೆಸಿವೆ. ಒಂದು ಕ್ಷಣದಲ್ಲಿ ವ್ಯತ್ಯಾಸ ಆಗಿದ್ದರೂ ದೊಡ್ಡ ಅನಾಹುತ ಸಂಭವಿಸುವ ಎಲ್ಲಾಸಾಧ್ಯತೆಗಳೂ ಇತ್ತು. ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಏರ್ ಇಂಡಿಯಾ ವಿಮಾನ ಟೇಕಾಫ್ ಆಗುತ್ತಿತ್ತು. ಇಂಡಿಗೋ ಏರ್‌ಕ್ರಾಫ್ಟ್ ಅದೇ ಸಮಯದಲ್ಲಿ ಲ್ಯಾಂಡ್ ಆಗುತ್ತಿತ್ತು.

Latest Videos

Time to Travel ಆಫರ್‌ ಘೋಷಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌, 1177 ರೂಪಾಯಿಗೆ ವಿಮಾನ ಪ್ರಯಾಣ ಮಾಡ್ಬಹುದು!

ಮುಂಬೈ ರನ್‌ವೇನಲ್ಲಿ ಆಗಿದ್ದೇನು?

ಇಂಡಿಗೋ ಫ್ಲೈಟ್ ಇಂದೋರ್‌ನಿಂದ ಮುಂಬೈಗೆ ಆಗಮಿಸಿತ್ತು. ಏರ್ ಇಂಡಿಯಾ ಟೇಕಾಫ್‌ ಆಗುವ ಮೊದಲೇ ಅದೇ ರನ್‌ವೇಗೆ ಇಂಡಿಗೋ ಲ್ಯಾಂಡಿಂಗ್‌ಗೆ ಕ್ಲಿಯರೆನ್ಸ್ ನೀಡಲಾಗಿತ್ತು. ಏರ್ ಇಂಡಿಯಾ ವಿಮಾನ ಮುಂಬೈನಿಂದ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಿತ್ತು. ಇಂಡಿಗೋ ವಿಮಾನ ಲ್ಯಾಂಡಿಂಗ್ ಆಗಿದ್ದ ವೇಳೆ ರನ್‌ವೇನಲ್ಲಿ ಟೇಕಾಫ್ ಆಗಲು ಏರ್ ಇಂಡಿಯಾ ವಿಮಾನ ವೇಗದಲ್ಲಿ ಸಾಗುತ್ತಿತ್ತು. ಇನ್ನೇನು ಇಂಡಿಗೋ ವಿಮಾನ ಡಿಕ್ಕಿ ಹೊಡೆಯುತ್ತೆ ಅನ್ನೋಷ್ಟರಲ್ಲಿ ಏರ್ ಇಂಡಿಯಾ ವಿಮಾನ ಟೇಕಾಫ್ ಆಗಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. 

ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA- Directorate General of Civil Aviation) ಘಟನೆಯ ಕುರಿತು ತನಿಖೆ ಆರಂಭಿಸಿದೆ. ರನ್‌ವೇಯಲ್ಲಿ ಇಂಡಿಗೋ ವಿಮಾನಕ್ಕೆ ಇಳಿಯಲು ಅನುಮತಿ ನೀಡಿದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ವಿಮಾನಯಾನ ಸಂಸ್ಥೆಗಳಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

ಏರ್‌ ಇಂಡಿಯಾ ವಿಮಾನ ರದ್ದು, ಸಾಯುವ ಕೊನೆ ಕ್ಷಣದಲ್ಲಿ ಪತಿ ಜೊತೆಗಿರುವ ಭಾಗ್ಯ ತಪ್ಪಿಸಿಕೊಂಡ ಪತ್ನಿ!

Narrow Escape For Passengers At As 2 Planes Land, Take-Off On pic.twitter.com/czyUZ2L00z

— SunilKumarPunjabKesariTV (@sunilkhimachali)
click me!