ಸನಾತನ ಧರ್ಮ ನಿರ್ಮೂಲನೆಗೆಂದೇ I.N.D.I.A ಬಣ ರಚಿಸಲಾಗಿದೆ: ಮತ್ತೊಬ್ಬ ಡಿಎಂಕೆ ಸಚಿವನ ವಿಡಿಯೋ ವೈರಲ್‌

By BK Ashwin  |  First Published Sep 12, 2023, 10:55 AM IST

ಸನಾತನ ಧರ್ಮ ನಿಮೂರ್ಲನೆ ಮಾಡಲೆಂದೇ I.N.D.I.A  ಒಕ್ಕೂಟವನ್ನು ರಚಿಸಲಾಗಿದೆ ಎಂದು ಡಿಎಂಕೆ ಸಚಿವ ಪೊನ್ಮುಡಿ ಹೇಳಿದ್ದಾರೆ.


ಚೆನ್ನೈ (ಸೆಪ್ಟೆಂಬರ್ 12, 2023): ಸನಾತನ ಧರ್ಮದ ವಿರುದ್ಧ ಹೋರಾಡಲು  I.N.D.I.A ಒಕ್ಕೂಟವನ್ನು ರಚಿಸಲಾಗಿದೆ ಎಂದು ಡಿಎಂಕೆ ಸಚಿವರೊಬ್ಬರು ಹೇಳುವ ವೀಡಿಯೊ ಕ್ಲಿಪ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಡಿಎಂಕೆ ಸರ್ಕಾರದ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ನಾವೆಲ್ಲರೂ ಒಂದಾಗಿದ್ದು, ಅಧಿಕಾರ ಸಿಗಬೇಕಿದೆ ಎಂದೂ ಹೇಳಿದ್ದರು. 

ಸನಾತನ ಧರ್ಮವನ್ನು ಮಲೇರಿಯಾ, ಕರೋನಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳಿಗೆ ಹೋಲಿಸಿ ತಮಿಳುನಾಡು ಸಿಎಂ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ವಿವಾದ ಸೃಷ್ಟಿಸಿದ್ದರು. ನಂತರ, ಎ. ರಾಜಾ ಏಡ್ಸ್‌ಗೆ ಹೋಲಿಸಿದ್ದರು. ಈಗ ಮತ್ತೊಬ್ಬ ತಮಿಳುನಾಡು ಸಚಿವ ಮಾತನಾಡಿದ್ದು, ಸನಾತನ ಧರ್ಮ ನಿಮೂರ್ಲನೆ ಮಾಡಲೆಂದೇ  I.N.D.I.A  ಒಕ್ಕೂಟವನ್ನು ರಚಿಸಲಾಗಿದೆ ಎಂದಿದ್ದಾರೆ. 

Tap to resize

Latest Videos

ಇದನ್ನು ಓದಿ: ರಾಹುಲ್‌ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ ಉದಯನಿಧಿ ದಕ್ಷಿಣ ಭಾರತದ ಪಪ್ಪು: ಅಣ್ಣಾಮಲೈ ವ್ಯಂಗ್ಯ

“ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು I.N.D.I.A  ಒಕ್ಕೂಟವನ್ನು ರಚಿಸಲಾಗಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಮೈತ್ರಿಯಲ್ಲಿರುವ 26 ಪಕ್ಷಗಳು ಸನಾತನ ಧರ್ಮದ ವಿರುದ್ಧದ ಹೋರಾಟದಲ್ಲಿ ಒಂದಾಗಿವೆ. ಆದರೆ ಸನಾತನ ಧರ್ಮವನ್ನು ರದ್ದುಗೊಳಿಸುವ ವಿಷಯಕ್ಕೆ ಬಂದಾಗ ನಾವೆಲ್ಲರೂ ಒಂದು ಅಂಶವನ್ನು ಒಪ್ಪುತ್ತೇವೆ. 26 ಪಕ್ಷಗಳ I.N.D.I.A ಮೈತ್ರಿಕೂಟಕ್ಕೆ ಸಮಾನತೆ, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರ ರಕ್ಷಣೆ, ಲಿಂಗ ಸಮಾನತೆ ಇವೆಲ್ಲವೂ ಬೇಕು. ನೀವು ಮತ್ತು ನಾನು ಈ ಬಗ್ಗೆ ಮಾತನಾಡಬಹುದು, ಆದರೆ ನಾವು ರಾಜಕೀಯದಲ್ಲಿ ಗೆದ್ದಾಗ ಮಾತ್ರ, ನಾವು ಬದಲಾವಣೆಗಳನ್ನು ಮಾಡಬಹುದು ಎಂದು ಖಚಿತಪಡಿಸಿಕೊಳ್ಳಬಹುದು" ಎಂದು ಡಿಎಂಕೆ ಸಚಿವ ಪೊನ್ಮುಡಿ ಹೇಳಿದ್ದಾರೆ.

"I.N.D.I.A alliance is formed to fight against the principles of Santana Dharma, we may have our differences among us but the 26 parties in the alliance are united in the fight against Santana Dharma but we need political power for that"
DMK Minister Ponmudi. pic.twitter.com/tKQTTv1VsZ

— Vishwatma 🇮🇳 (@HLKodo)

ಸನಾತನ ಧರ್ಮದ ವಿರುದ್ಧ ಹೋರಾಡಲು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಸೆಪ್ಟೆಂಬರ್ 2 ರಂದು ಹೇಳಿಕೆ ನೀಡಿದ್ದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಮಲೇರಿಯಾ, ಕೊರೋನಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳಿಗೆ ಹೋಲಿಸಿದ್ದರು. ಮತ್ತು ಅವುಗಳನ್ನು ನಿರ್ಮೂಲನೆ ಮಾಡುವ ಅಗತ್ಯವನ್ನು ಒತ್ತಿ ಹೇಳುವ ಮೂಲಕ ರಾಜಕೀಯ ಸಂಚಲನ ಸೃಷ್ಟಿಸಿದರು.

ಇದನ್ನೂ ಓದಿ: ನಾನು ಮತ್ತೆ ಮತ್ತೆ ಅದನ್ನೇ ಹೇಳುವೆ; ಸನಾತನ ಧರ್ಮ ನಿರ್ಮೂಲನೆ ಆಗಬೇಕೆಂಬ ಹೇಳಿಕೆ ಬದಲಿಲ್ಲ: ಉದಯನಿಧಿ ಸಮರ್ಥನೆ

ಅವರ ಭಾಷಣವು ವಿವಿಧ ವಲಯಗಳಲ್ಲಿ ಆಕ್ರೋಶಕ್ಕೆ ಕಾರಣವಾದ ನಂತರ, ಉದಯನಿಧಿ ಅವರು ಸನಾತನ ಧರ್ಮವನ್ನು ಅನುಸರಿಸುತ್ತಿರುವ ಜನರ "ಜನಾಂಗೀಯ ಹತ್ಯೆಗೆ ಎಂದಿಗೂ ಕರೆ ನೀಡಲಿಲ್ಲ" ಎಂದು ಸ್ಪಷ್ಟನೆ ನೀಡಿದ್ದರು. 

ಇದನ್ನೂ ಓದಿ: ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ನಿರ್ಮೂಲನೆ ಮಾಡಿ: ಸ್ಟಾಲಿನ್‌ ಪುತ್ರ

click me!