ನ್ಯೂಯಾರ್ಕ್‌ನಿಂದ ಸಿಡ್ನಿಗೆ 19 ಗಂಟೆ ನೇರ ವಿಮಾನ ಪ್ರಯಾಣ: ಹೊಸ ದಾಖಲೆ

By Web DeskFirst Published Oct 21, 2019, 1:11 PM IST
Highlights

ವಿಮಾನಯಾನ ಕ್ಷೇತ್ರದಲ್ಲೇ ಹೊಸ ದಾಖಲೆ | ನ್ಯೂಯಾರ್ಕ್ ನಿಂದ ಸಿಡ್ನಿಗೆ 19 ಗಂಟೆ ಪ್ರಯಾಣ | ವಿಮಾನದಲ್ಲಿ 49 ಪ್ರಯಾಣಿಕರು ಇದ್ದರು |  ಎಲ್ಲಿಯೂ ಇಂಧನ ಮರುಪೂರಣ ಮಾಡದೇ ಇರುವುದು ದಾಖಲೆ 

ಸಿಡ್ನಿ (ಅ. 21): ನ್ಯೂಯಾರ್ಕ್‌ನಿಂದ ಹೊರಟ ಪ್ರಯಾಣಿಕ ವಿಮಾನವೊಂದು ಸತತ ೧೯ ಗಂಟೆಗಳ ಪ್ರಯಾಣದ ಬಳಿಕ ಆಸ್ಟ್ರೇಲಿಯಾದ ರಾಜನಾಧಾನಿ ಸಿಡ್ನಿಗೆ ಭಾನುವಾರ ಮುಂಜಾನೆ ಬಂದು ತಲುಪಿದೆ. ಈ ಮೂಲಕ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.

ಕ್ವಾಂಟಾಸ್ ಹೆಸರಿನ ವಿಮಾನ 19 ಗಂಟೆ 16 ನಿಮಿಷ ನೇರ ಪ್ರಯಾಣಿಸಿ ನ್ಯೂಯಾರ್ಕ್‌ನಿಂದ ನೇರವಾಗಿ ಸಿಡ್ನಿಗೆ ಬಂದು ತಲುಪಿದೆ. ಎಲ್ಲಿಯೂ ಇಂಧನ ಮರುಪೂರಣ ಮಾಡದೇ 49 ಜನರಿದ್ದ ವಿಮಾನ 16,000 ಕಿ.ಮೀ. ಸುದೀರ್ಘ ಪ್ರಯಾಣ ಕೈಗೊಂಡಿದೆ.

ಇದೊಂದು ಐತಿಹಾಸಿಕ ಕ್ಷಣ ಎಂದು ಕ್ವಾಂಟಾಸ್ ಸಿಇಒ ಅಲೆನ್ ಜೋಸ್ ಬಣ್ಣಿಸಿದ್ದಾರೆ. ಈ ಹಿಂದೆ ಕ್ವಾಂಟಾಸ್ ವಿಮಾನ ಆಸ್ಟ್ರೇಲಿಯಾದ ಫರ್ತ್‌ನಿಂದ ಲಂಡನ್‌ಗೆ 17 ಗಂಟೆಗಳ ನೇರ ಪ್ರಯಾಣ ಕೈಗೊಂಡಿದ್ದು, ಇದುವರೆಗಿನ ಅತಿ ಸುದೀರ್ಘ ವಿಮಾನ ಪ್ರಯಾಣ ಎನಿಸಿಕೊಂಡಿತ್ತು.

 

click me!