
ಗಾಜಿಯಾಬಾದ್: ಎಲ್‌ಇಡಿ ಟಿವಿಯೊಂದು ಸ್ಫೋಟಿಸಿದ ಪರಿಣಾಮ 16 ವರ್ಷದ ಬಾಲಕ ದುರಂತ ಸಾವಿಗೀಡಾದ ಘಟನೆ ಉತ್ತರಪ್ರದೇಶದ ಗಾಜಿಯಬಾದ್‌ನಲ್ಲಿ ನಡೆದಿದೆ. ಈ ಟಿವಿ ಸ್ಫೋಟದ ತೀವ್ರತೆಗೆ ಮನೆಯ ಗೋಡೆಯಲ್ಲಿ ದೊಡ್ಡದಾದ ತೂತು ನಿರ್ಮಾಣವಾಗಿದೆ. ದುರಂತದಲ್ಲಿ ಬಾಲಕ ಮೃತಪಟ್ಟಿದ್ದು, ಆತನ ಅತ್ತಿಗೆ, ತಾಯಿ ಹಾಗೂ ಸ್ನೇಹಿತನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಪೋಟದ ಭೀಕರತೆಗೆ ಕಾಂಕ್ರಿಟ್ ಗೋಡೆಯೂ ಛಿದ್ರವಾಗಿದೆ. ಅಲ್ಲದೇ ಸ್ಫೋಟದ ಸದ್ದಿಗೆ ನೆರೆಹೊರೆ ಮನೆಯವರೇ ಬೆಚ್ಚಿ ಬಿದ್ದಿದ್ದಾರೆ. ಸ್ಫೋಟದ ಸದ್ದು ಅಷ್ಟೊಂದು ಭಯಾನಕವಾಗಿತ್ತು ಎಂದು ಅವರು ಹೇಳಿದ್ದಾರೆ.
ಮೃತನ ನೆರೆಮನೆಯವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸ್ಫೋಟದ ಸದ್ದು ಕೇಳಿ ಗ್ಯಾಸ್ ಸಿಲಿಂಡರ್ (cylinder) ಸ್ಫೋಟಗೊಂಡಿದೆ ಎಂದು ಭಾವಿಸಿದೆವು. ಸದ್ದು ಕೇಳಿ ನಾವೆಲ್ಲರೂ ಮನೆಯಿಂದ ಹೊರಗೆ ಓಡಿ ಬಂದು ನೋಡಿದರೆ ನಮ್ಮ ಪಕ್ಕದ ಮನೆಯಿಂದ ಹೊಗೆ ಬರುತ್ತಿತ್ತು ಎಂದು ವಿನಿತಾ ಎಂಬುವವರು ಹೇಳಿದ್ದಾರೆ.
ಮೃತ ಬಾಲಕನನ್ನು ಒಮೆಂಡ್ರಾ(Omendra) ಎಂದು ಗುರುತಿಸಲಾಗಿದೆ. ಎಲ್‌ಇಡಿ ಟಿವಿ ಸ್ಫೋಟದ ವೇಳೆ ಬಾಲಕ ಒಮೆಂಡ್ರಾ (Omendra), ಆತನ ಅತ್ತಿಗೆ, ತಾಯಿ ಹಾಗೂ ಸ್ನೇಹಿತ ಕರಣ್ ಮನೆಯಲ್ಲಿದ್ದರು. ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಮೃತನ ತಾಯಿ ಹಾಗೂ ಸ್ನೇಹಿತ ಕರಣ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸ್ಫೋಟ ನಡೆಯುವ ವೇಳೆ ತಾನು ಇನ್ನೊಂದು ಕೋಣೆಯಲ್ಲಿ ಇದ್ದಿದ್ದಾಗಿ ಮೃತನ ಕುಟುಂಬ ಸದಸ್ಯೆ ಮೋನಿಕಾ (Monica) ಹೇಳಿದ್ದಾರೆ. ಈ ಸ್ಫೋಟ ತುಂಬಾ ಭಯಾನಕವಾಗಿತ್ತು. ಇಡೀ ಮನೆಯೇ ನಡುಗಿದ್ದು, ಮನೆಯ ಗೋಡೆಗಳು ಕುಸಿದವು ಎಂದು ಆಕೆ ಹೇಳಿದ್ದಾಳೆ.
ಈ ಅವಘಡದಲ್ಲಿ ಇಬ್ಬರು ಮಹಿಳೆಯರು ಇಬ್ಬರು ಪುರುಷರು ಸೇರಿ ಒಟ್ಟು ನಾಲ್ಕು ಜನ ಗಾಯಗೊಂಡಿದ್ದರು. ದುರಾದೃಷ್ಟವಶಾತ್ ಅವರಲ್ಲಿ ಒಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಗೋಡೆಗೆ ಅಂಟಿಸಿ ನಿಲ್ಲಿಸಿದ್ದ ಎಲ್‌ಇಡಿ ಸ್ಫೋಟಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಗಾಜಿಯಾಬಾದ್ ಪೊಲೀಸ್ ಅಧಿಕಾರಿ (Ghaziabad police officer) ಜ್ಞಾನೇಂದ್ರ ಸಿಂಗ್ (Gyanendra Singh) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ