ಮುಂಬೈ(ಡಿ.12): ಶಾಲಾ ಕಾಲೇಜು(School and College) ದಿನಗಳ ಪ್ರೀತಿ ಎಲ್ಲೊ ಮರೆಯಾಗಿ ಹೊಸ ಬದುಕಿಗೆ ತೆರೆದುಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ಪ್ರೀತಿ(Love) ಎಲ್ಲರನ್ನು ಚಕಿತಗೊಳಿಸಿದೆ. ಕಾರಣ ಹುಡುಗನ ವಯಸ್ಸು 19, ಬಾಲಕಿ ವಯಸ್ಸು 16. ಇಬ್ಬರು ಅಪ್ರಾಪ್ರರು. ಆದರೆ ಸಾಗರದಾಚೆಗೂ ನಿಲುಕದ ಪ್ರೀತಿ. ಇನ್ನೂ ಶಾಲೆ ಮೆಟ್ಟಿಲು ಪೂರ್ತಿಯಾಗಿ ಹತ್ತಿ ಇಳಿದಿಲ್ಲ. ಅಷ್ಟರಲ್ಲೇ ಪ್ರೀತಿ ಚಿಗುರೊಡೆದು ಹೆಮ್ಮರವಾಗಿದೆ. ಇದು ಸ್ವೀಡನ್ ಹುಡುಗಿ(swedish girl), ಮುಂಬೈ ಹುಡುಗನ(Mumbai Boy) ಒಂದು ಪ್ರೀತಿಯ ಕತೆ.
ಕೊರೋನಾ(Coronavirus) ಬಂದ ಬಳಿಕ ಎಲ್ಲವೂ ಆನ್‌ಲೈನ್, ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ಪಾಠ, ಆನ್‌ಲೈನ್‌ನಲ್ಲೇ ಜೀವನ. ಇಲ್ಲೇ ಯಡವಟ್ಟಾಗಿದೆ ನೋಡಿ. ಸಾಮಾಜಿಕ ಜಾಲತಾಣ(Social Media) ಇನ್‌ಸ್ಟಾಗ್ರಾಂ ಮೂಲಕ 19ರ ಮುಂಬೈ ಹುಡುಗನಿಗೆ ಸ್ವೀಡನ್ ದೇಶದ 16ರ ಬಾಲಕಿ ಪರಿಚಯವಾಗಿದ್ದಾಳೆ. ಈ ಕತೆ ಆರಂಭವಾಗುವುದು ಫೋಟೋ ಲೈಕ್‌ನಿಂದ. ಸ್ವೀಡನ್ ಹುಡುಗಿಯ ಫೋಟೋ ಲೈಕ್ ಮಾಡಿದ ಹುಡುಗ, ಸಣ್ಣ ಕಮೆಂಟ್ ಕೂಡ ಮಾಡಿದ್ದಾನೆ. ಇತ್ತ ಹುಡುಗಿ ಕೂಡ ಪ್ರತಿಕ್ರಿಯೆ ನೀಡಿದ್ದಾಳೆ.
undefined
Jacqueline Fernandez : ತನಗಿಂತ 15 ವರ್ಷ ಹಿರಿಯ ನಿರ್ದೇಶಕನ ಪ್ರೀತಿಗೆ ಬಿದ್ದಳು ಸುಂದರಿ!
ಇಲ್ಲಿಂದ ಇವರ ಆನ್‌ಲೈನ್ ಚಾಟಿಂಗ್ ಆರಂಭಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಇವರ ಪರಿಚಯ ನಿಧಾನವಾಗಿ ಗಾಢವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿ ಮಾರ್ಪಟ್ಟಿದೆ. ಫೋನ್ ನಂಬರ್ ವಿನಿಮಯವಾಗಿದೆ. ಫೋನ್ ಮೂಲಕ ಚಾಟಿಂಗ್ ಹೆಚ್ಚಾಗ ತೊಡಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿ ಸದಾ ಫೋನ್‍ನಲ್ಲೇ ಬ್ಯುಸಿ. ಇತ್ತ ಸ್ವೀಡನ್ ಹುಡುಗಿ ಕತೆ ಕೂಡ ಇದೇ ಆಗಿದೆ.
19ರ ಹುಡುಗನಿಗೆ ತನ್ನ ಪ್ರೀತಿಯ ಸ್ವೀಡನ್ ಹುಡುಗಿಯ ನೋಡುವಾಸೆ. ಆಕೆಗೆ ತನ್ನ ಹುಡುಗನ ಜೊತೆ ಬಾಳುವ ಆಸೆ. ಆದರೆ ಮುಂಬೈ ಎಲ್ಲಿ, ಸ್ವೀಡನ್ ಎಲ್ಲಿ?.. ವಿಮಾನದಲ್ಲೇ ಬರೋಬ್ಬರಿ 6,228 ಕಿಲೋಮೀಟರ್ ದೂರ. ಈ ದೂರ ಇವರ ಪ್ರೀತಿಗೆ ಅಡ್ಡಿಯಾಗಲಿಲ್ಲ. ಹುಡುಗನ ಜೊತೆ ಲಿವಿಂಗ್ ಟುಗೆದರ್‌ನಲ್ಲಿ ಮುಂದಿನ ಜೀವನ ಹಾಯಾಗಿ ಕಳೆಯಲು ನಿರ್ಧರಿಸಿದ್ದಾರೆ. ಇದಕ್ಕಾಗಿ ನವೆಂಬರ್ 17 ರಂದು ಸ್ವೀಡನ್ ಹುಡುಗಿ ಪೋಷಕರಿಗೆ ಹೇಳದೆ, ಯಾರಿಗೂ ಯಾವ ಮಾಹಿತಿ ನೀಡದೆ ನೇರವಾಗಿ ಸ್ಪೀಡನ್‌ನಿಂದ ಮುಂಬೈಗೆ ಬಂದಿಳಿದ್ದಾಳೆ.
Bizarre case:ಬರ್ತ್‌ಡೆ ವಿಶ್ ಮಾಡಿಲ್ಲ, ಮಾತು ಬಿಟ್ಟ ಬಾಯ್‌ಫ್ರೆಂಡ್, ಪೊಲೀಸರಿಗೆ ದೂರು ನೀಡಿದ ಯುವತಿ!
ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಹುಡುಗನ ಮನೆಗೆ ತೆರಳಿದ್ದಾಳೆ. ಅಲ್ಲಿ ಹೈಡ್ರಾಮವೇ ನಡೆದಿದೆ. ಹುಡುಗ ತನ್ನ ಪ್ರೀತಿಯ ಸ್ವೀಡನ್ ಹುಡುಗಿಯನ್ನು ಬರಮಾಡಿಕೊಂಡು ತನ್ನ ಕೋಣೆಯಲ್ಲಿ ಜೊತೆಯಾಗಿರಲು ಪ್ಲಾನ್ ಮಾಡಿದ್ದ. ಆದರೆ ಹುಡುಗನ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವೀಡನ್ ಹುಡುಗಿಯನ್ನು ಮನಗೆ ಸೇರಿಸಿಕೊಳ್ಳಲು ಹುಡುಗನ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಟಾಪಟಿ ಶುರುವಾಗಿದೆ. ಕೊನೆಗೆ ತಮ್ಮ ಕುಟುಂಬದ ಮಾನ ಮರ್ಯಾದೆ ಅಂಜಿದ ಪೋಷಕರು, ಸ್ವೀಡನ್ ಹುಡುಗಿಯನ್ನು ಬೇರೊಂದು ಅಪಾರ್ಟ್‌ಮೆಂಟ್‌ನಲ್ಲಿ ಇರಲು ವ್ಯವಸ್ಥೆ ಮಾಡಿದ್ದಾರೆ. ಹುಡುಗಿಯ ಜೊತೆಗೆ ಸಂಬಂಧಿಕರೊಬ್ಬರು ತಂಗಲು ನಿರ್ಧರಿಸಿದ್ದಾರೆ.
ಪೊಲೀಸ್‌ಗೆ ತಿಳಿಸಲು ನಿರ್ಧರಿಸಿದ್ದಾರೆ. ಆದರೆ ಅದಕ್ಕೂ ಮೊದಲು ಹುಡುಗಿಯನ್ನು ವಿಚಾರಿಸಿ ಆಕೆಯ ಪೋಷಕರಿಗೆ ಮಾಹಿತಿ ನೀಡಲು ಹುಡುಗನ ಪೋಷಕರು ನಿರ್ಧರಿಸಿದ್ದಾರೆ. ಇತ್ತ ಮನೆಯಲ್ಲಿ ಮಗಳು ಕಾಣೆ, ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಎಲ್ಲಾ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಪತ್ತೆಯಾಗಿಲ್ಲ. ನೇರವಾಗಿ ಸ್ವೀಡನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆಕೆ ಫೋನ್ ನಂಬರ್, ಸಾಮಾಜಿಕ ಜಾಲತಾಣ ಎಲ್ಲಾ ಜಾಲಾಡಿದ್ದಾಳೆ. ಈ ವೇಳೆ ಆಕೆ ನೇರವಾಗಿ ಭಾರತಕ್ಕೆ ತೆರಳಿದ್ದಾಳೆ ಅನ್ನೋದು ಗೊತ್ತಾಗಿದೆ.
ಇಂಟರ್‌ಪೋಲ್ ಮೂಲಕ ಭಾರತಕ್ಕೆ ಮಾಹಿತಿ ನೀಡಲಾಗಿತ್ತು. ಈ ಮಾಹಿತಿ ಆಧರಿಸಿ ಮುಂಬೈ ಪೊಲೀಸರು ನೇರವಾಗಿ ಹುಡುಗಿಯನ್ನು ಪತ್ತೆ ಹಚ್ಚಿದ್ದಾರೆ. ಹುಡುಗಿಯನ್ನು ವಶಕ್ಕೆ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಬಳಿಕ ಸ್ವೀಡನ್‌ಗೆ ಮಾಹಿತಿ ನೀಡಿದ್ದಾರೆ. ಹುಡುಗಿ ಪೋಷಕರು ದೆಹಲಿ ಮೂಲಕ ಮುಂಬೈಗೆ ಬಂದಿದ್ದಾರೆ. ಪೊಲೀಸರು ಹುಡುಗಿಯನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಇತ್ತ ಹುಡುಗಿಯ ತಂದೆ ಮುಂಬೈ ಹುಡುಗನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ವಿದ್ಯಾರ್ಥಿಯಾಗಿರುವ ಕಾರಣ ಆತನ ಭವಿಷ್ಯಕ್ಕೆ ಸಮಸ್ಯೆಯಾಗದಿರಲಿ, ಈ ರೀತಿಯ ತಪ್ಪು ಮಾಡಬಾರದು ಎಂದು ಬುದ್ದಿವಾದ ಹೇಳಿದ್ದಾರೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ ಇವರ ಪ್ರೀತಿ ಏನಾಗಿದೆ ಅನ್ನೋದು 19ರ ಹುಡುಗ ಹಾಗೂ 16ರ ಬಾಲಕಿಯೇ ಹೇಳಬೇಕು.