Border Talks ಲಡಾಖ್ ಸಮಸ್ಯೆ ಮಾತುಕತೆ ಮೂಲಕ ಬಗೆಹರಿಸಲು ಭಾರತ ಚೀನಾ ಒಪ್ಪಿಗೆ!

Published : Mar 12, 2022, 07:26 PM IST
Border Talks ಲಡಾಖ್ ಸಮಸ್ಯೆ ಮಾತುಕತೆ ಮೂಲಕ ಬಗೆಹರಿಸಲು ಭಾರತ ಚೀನಾ ಒಪ್ಪಿಗೆ!

ಸಾರಾಂಶ

ಭಾರತ ಚೀನಾ 15ನೇ ಸುತ್ತಿನ ಮಿಲಿಟರಿ ಮಾತುಕತೆ ಕಳೆದ 22 ತಿಂಗಳಿನಿಂದ ನಡೆಯುತ್ತಿರುವ ಗಡಿ ಬಿಕ್ಕಟ್ಟು ಮಾತುಕತೆ ಮೂಲಕವೇ ಸಮಸ್ಯೆ ಪರಿಹಾರಕ್ಕೆ ಒಪ್ಪಿಗೆ

ನವದೆಹಲಿ(ಮಾ.12): ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷ ಪರಿಹಾರಕ್ಕೆ ಉಭಯ ದೇಶಗಳು ಪರಸ್ಪರ ಮಾತುಕತೆ ಮಾರ್ಗ ಅನುಸರಿಸಲು ಒಪ್ಪಿಗೆ ಸೂಚಿಸಿದೆ. ಇಂದು(ಮಾ.12) ನಡೆದ 15ನೇ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ. 

ಕಳೆದ 22 ತಿಂಗಳಿನಿಂದ ನಡೆಯುತ್ತಿರುವ ಗಡಿ ಬಿಕ್ಕಟ್ಟನ್ನು ಕೊನೆಗೊಳಿಸಲು 2 ದೇಶಗಳು ಪ್ರಯತ್ನಿಸುತ್ತಿದೆ. ಹಲವು ಸುತ್ತಿನ ಮಾತುಕತೆ ನಡೆಸಿ ಸಮಸ್ಯೆ ಶಾಂತಿಯುತವಾಗಿ ಬಗೆಹರಿಸಲು ಭಾರತ ಯತ್ನಿಸಿದೆ. ಭೆಯ ವೇಳೆ ಗಲ್ವಾನ್‌, ಪ್ಯಾಂಗೋಗ್‌ ತ್ಸೋ, ಹಾಗೂ ಗೋಗ್ರಾ ಪ್ರದೇಶಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಗಿದೆ. ಮೇ 5 2020ರಂದು ಪೂರ್ವ ಲಡಾಖ್‌ನ ಪ್ಯಾಂಗೋಂಗ್‌ ಸರೋವರದ ಬಳಿ ಚೀನಾ ಮತ್ತು ಭಾರತ ಸೇನೆಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ತದ ನಂತರ ಇದು ಹಾಗೆ ಮುಂದುವರೆದಿತ್ತು.

China Bridge On Pangong : ಅಕ್ರಮ ಸ್ಥಳದಲ್ಲಿ ಚೀನಾದಿಂದ ಸೇತುವೆ ನಿರ್ಮಾಣ ಎಂದ ಸರ್ಕಾರ!

ಆಗಿದ್ದೇನು?:
2020ರ ಜೂ.15ರಂದು ಭಾರತೀಯ ಯೋಧರು ಗಲ್ವಾನ್‌ ಕಣಿವೆಯಲ್ಲಿನ ವಿವಾದಿತ ಪ್ರದೇಶಕ್ಕೆ ರಾತ್ರಿ ವೇಳೆ ತೆರಳಿದ್ದರು. ಅಲ್ಲಿ ಬೀಡು ಬಿಟ್ಟಿದ್ದ ಚೀನಾ ಯೋಧರನ್ನು ತೆರವುಗೊಳಿಸುವುದು ಅವರ ಉದ್ದೇಶವಾಗಿತ್ತು. ಆದರೆ ಚೀನಾದ ಕರ್ನಲ್‌ ಕ್ವಿ ಫಬಾವೋ ಹಾಗೂ 150 ಸೈನಿಕರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದರು. ಕೂಡಲೇ ಭಾರತೀಯ ಯೋಧರು ಅವರನ್ನು ಸುತ್ತುವರೆದರು. ಈ ವೇಳೆ ಫಬಾವೋ ಅವರನ್ನು ರಕ್ಷಿಸಲು ಚೀನಾದ ಬೆಟಾಲಿಯನ್‌ ಕಮಾಂಡರ್‌ ಚೆನ್‌ ಹಾಂಗ್‌ಜುನ್‌ ಹಾಗೂ ಸೈನಿಕರಾದ ಚೆನ್‌ ಕ್ಸಿಯಾನ್‌ಗ್ರಾನ್‌ ಅವರು ಉಕ್ಕಿನ ಪೈಪ್‌, ದೊಣ್ಣೆ ಹಾಗೂ ಕಲ್ಲುಗಳನ್ನು ಬಳಸಿ ಭಾರತೀಯ ಯೋಧರ ಮೇಲೆ ಮುಗಿಬಿದ್ದರು. ಈ ವೇಳೆ ಭಾರತೀಯರು ನಡೆಸಿದ ಪ್ರತಿದಾಳಿಯಲ್ಲಿ ಮೂವರು ಚೀನಾ ಯೋಧರು ಹತರಾದರು. ಇದರಿಂದ ಹೆದರಿದ ಇತರ ಚೀನಾ ಯೋಧರು ಪರಾರಿಯಾಗಲು ಯತ್ನಿಸಿದರು ಎಂದು ವರದಿ ತಿಳಿಸಿದೆ.

Line of Actual Control: ಗಡಿಯಲ್ಲಿ ಚೀನಾ ರಸ್ತೆ ನಿರ್ಮಾಣ, ಸೇನೆ ನಿಯೋಜನೆ ಹೆಚ್ಚಳ!

ಈ ರೀತಿ ಕಾಲ್ಕೀಳುತ್ತಿದ್ದ ಯೋಧರನ್ನು ವಾಪಸ್‌ ಕರೆದುಕೊಂಡು ಹೋಗುವ ನೇತೃತ್ವವನ್ನು ವಾಂಗ್‌ ಝುವಾರಾನ್‌ ಹೊತ್ತುಕೊಂಡರು. ವಾಟರ್‌ ಪ್ಯಾಂಟ್‌ ಧರಿಸಲೂ ಸಮಯ ಇಲ್ಲದ ಕಾರಣ ಚೀನಾ ಯೋಧರು ಕತ್ತಲಲ್ಲಿ ವಾಂಗ್‌ ನೇತೃತ್ವದಲ್ಲಿ ಕೊರೆಯುವ ಚಳಿಯಲ್ಲಿ ರಭಸವಾಗಿ ಹರಿಯುವ ನದಿಯನ್ನು ದಾಟಲು ಹೋದರು. ನೀರು ದಿಢೀರ್‌ ಹೆಚ್ಚಾದ್ದರಿಂದ ಜಾರಿ ಬಿದ್ದು ಹಲವರು ಕೊಚ್ಚಿ ಹೋದರು ಎಂದು ವರದಿ ತಿಳಿಸಿದೆ.

ಈ ಘಟನೆಯಲ್ಲಿ ತನ್ನ 20 ಯೋಧರು ಸಾವಿಗೀಡಾಗಿದ್ದರು ಎಂದು ಭಾರತ ಹೇಳಿಕೊಂಡಿತ್ತು. ಆದರೆ ಆ ಬಗ್ಗೆ ಮೌನದಿಂದ ಇದ್ದ ಚೀನಾ ಕಳೆದ ಫೆಬ್ರವರಿಯಲ್ಲಿ ವಾಂಗ್‌ ಝುವಾರಾನ್‌ ಸೇರಿದಂತೆ ತನ್ನ 4 ಸೈನಿಕರು ಹತರಾಗಿದ್ದರು ಎಂದು ಹೇಳಿತ್ತು. ಆದರೆ ಅದು ಸುಳ್ಳು ಎಂದು ಈಗ ಸಾಬೀತಾಗಿದೆ.

ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣಕ್ಕೆ ವೇಗ
ಪೂರ್ವ ಲಡಾಖ್‌ನಲ್ಲಿ ಬರುವ ಪ್ಯಾಂಗ್ಯಾಂಗ್‌ ಸರೋವರಕ್ಕೆ ದೊಡ್ಡದೊಂದು ಸೇತುವೆ ನಿರ್ಮಿಸುತ್ತಿರುವ ಚೀನಾ ಸೇನೆ, ಮುಂಬರುವ ಚಳಿಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಕ್ಕೆ ಮುಂದಾಗಿದೆ. ಜ.16ರಂದು ಉಪಗ್ರಹ ಸೆರೆಹಿಡಿದಿರುವ ಚಿತ್ರಗಳು, ಚೀನಾ ದೊಡ್ಡ ಕ್ರೇನ್‌ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಸೇತುವೆ ಕಾಮಗಾರಿಯನ್ನು ಆದಷ್ಟುಶೀಘ್ರ ಮುಗಿಸಲು ಯತ್ನಿಸುತ್ತಿರುವುದನ್ನು ಖಚಿತಪಡಿಸಿವೆ.

ಪ್ಯಾಂಗ್ಯಾಂಗ್‌ ಸರೋವರದ ಉತ್ತರ ಮತ್ತು ದಕ್ಷಿಣದ ದಂಡೆಯ ನಡುವೆ ಸಂಪರ್ಕ ಕಲ್ಪಿಸಲು, ಚೀನಾ ಅಕ್ರಮವಾಗಿ ಸೇತುವೆ ನಿರ್ಮಿಸುತ್ತಿರುವ ವಿಷಯ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಇದೀಗ ಬಿಡುಗಡೆಯಾಗಿರುವ ಹೊಸ ಚಿತ್ರಗಳು, ಚಳಿಗಾಲದ ಹಿಮ ಆವರಿಸಿಕೊಳ್ಳುವ ಮುನ್ನವೇ ಸೇತುವೆಯನ್ನು ಬಳಕೆಗೆ ಸಜ್ಜುಗೊಳಿಸಲು ಚೀನಾ ಹರಸಾಹಸ ಪಡುತ್ತಿರುವ ವಿಷಯವನ್ನು ಖಚಿತಪಡಿಸಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು